ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಬಲಕುಂದಿ ತಾಂಡಾದ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಹಾಗೂ ವಿಶ್ವ ಸಂಗೀತ ದಿನಾಚರಣೆ ಆಚರಿಸಲಾಯಿತು.
ಶಾಲೆಯ ಸಹ ಶಿಕ್ಷಕರು, ಕ.ರಾ.ಪ್ರಾ.ಶಾ.ಶಿ.ಸಂಘ ಜಿಲ್ಲಾ ಖಜಾಂಚಿಗಳಾದ ಮುತ್ತಣ್ಣ ಬೀಳಗಿ ರವರ ಮಾರ್ಗದರ್ಶನದಲ್ಲಿ ಆಕರ್ಷಕವಾದ ಯೋಗದ ಭಂಗಿಗಳನ್ನು ಮಾಡಿಸಿ ಯೋಗದ ಮಹತ್ವದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಯಿತು.
ತದನಂತರ ಶ್ರೀಮತಿ ಜಿ ಕೆ ಮಠ,ಶ್ರೀಮತಿ ಶಶಿಕಲಾ ಜೋಗಿನ ಹಾಗೂ ಶ್ರೀ ಮುತ್ತಣ್ಣ ಬೀಳಗಿ ರವರಿಂದ ಸಂಗೀತ ಸುಧೆ ನಡೆಯಿತು.
ವಿದ್ಯಾರ್ಥಿಗಳು ನಿರಂತರವಾದ ಯೋಗ ಅಭ್ಯಾಸ ರೂಢಿಸಿಕೊಂಡು ಆರೋಗ್ಯವಂತ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಪರಶುರಾಮ ಪಮ್ಮಾರ ಹೇಳಿದರು.ಯೋಗ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಸುಭಾಷ್ ಹುಲ್ಲಿಕೇರಿ,ದೈಹಿಕ ಶಿಕ್ಷಕಿ ಶ್ರೀಮತಿ ರೇಣುಕಾ ಕೊಡಗಲಿ,ಶಿಕ್ಷಕರಾದ ಶ್ರೀ ಅಬ್ದುಲಸಾಬ ಬಾಗವಾನ,ಶ್ರೀಮತಿ ಮಂಜುಳಾ ಅರಳಿಕಟ್ಟಿ, ಶ್ರೀಮತಿ ಮಂಜುಳಾ ಚೇಗೂರ,ಶ್ರೀಮತಿ ಪ್ರಭಾವತಿ ಹೊಸೂರ,ಶ್ರೀಮತಿ ಸುವರ್ಣ ಮಲಗಿಹಾಳ ಭಾಗವಹಿಸಿ ಮಕ್ಕಳಿಗೆ ಮಾರ್ಗದರ್ಶನ ಮಾಡಿದರು.
Be the first to comment