ಭಟ್ಕಳ :
ಇಲ್ಲಿನ ಜಾಲಿ ಪಟ್ಟಣ ಪಂಚಾಯತ ಸದಸ್ಯರಮೇಶ್ ನಾಯ್ಕ ಹಳೆ ವೈಮನಸ್ಸಿನ ಪರಿಣಾಮವಾಗಿ ವ್ಯಕ್ತಿಯ ಒಬ್ಬನ ಮೇಲೆ ಸಹೋದರನೊಂದಿಗೆ ಸೇರಿ ರಾಡನಿಂದ ಹಾಡುಹಗಲೇ ಇಲ್ಲಿನ ಭಟ್ಕಳ್ ಸಾಗರ ರಸ್ತೆ ಟೆಂಪೋ ನಿಲ್ದಾಣ ಸಮೀಪ ವ್ಯಕ್ತಿ ಒಬ್ಬನಿಗೆ ಹಲ್ಲೆ ನಡೆಸಿ , ಆರೋಗ್ಯ ನೆಪ ಒಡ್ಡಿ ರಮೇಶ್ ನಾಯ್ಕ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿದ್ದರು.ಹಲ್ಲೆ ಮಾಡಿದ ಇವರ ಮೇಲೆ ಕ್ರಿಮಿನಲ್ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಸುಮ.ಬಿ ದಾಖಲಿಸಿಕೊಂಡಿದ್ದರು. ಇಂದು ಪೊಲೀಸರು ಜಾಲಿ ಪಟ್ಟಣ ಪಂಚಾಯಿತಿ ಸದಸ್ಯ ಆರೋಪಿ ರಮೇಶ್ ನಾಯ್ಕ ನನ್ನು ಬಂಧಿಸಲು ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ತೆರಳಿದಾಗ ರಮೇಶ್ ನಾಯ್ಕ ಅಲ್ಲಿಂದ ಪೊಲೀಸರ ಕಣ್ಣುತಪ್ಪಿಸಿಕೊಂಡು ಓಡಿ ಪರಾರಿಯಾಗಿದ್ದಾರೆ.
ಘಟನೆ ವಿವರ:
ಹಲ್ಲೆಗೊಳಗಾದ ವ್ಯಕ್ತಿ ಹುರುಳಿಸಾಲ ಮಿನಿಹಿತ್ಲು ನಿವಾಸಿ ಈಶ್ವರ ಮಾಸ್ತಪ್ಪ ನಾಯ್ಕ ಎಂದು ತಿಳಿದು ಬಂದಿತ್ತು, ಘಟನೆಯ ಸಂಬಂಧ ಹಲ್ಲೆಗೊಳಗಾದ ಈಶ್ವರ ನಾಯ್ಕನ ಹೆಂಡತಿಯ ಅಣ್ಣ ಇಲ್ಲಿನ ಹೆಬಳೆ ತೆಂಗಿನಗುಂಡಿ ನಿವಾಸಿ ಜಯಂತ ನಾಯ್ಕ ನಗರ ಠಾಣೆಯಲ್ಲಿ ನೀಡಿದ ದೂರಿನ್ವಯ ಇಬ್ಬರು ಎಂದಿನಂತೆ ಕೆಲಸ ಮುಗಿಸಿ ವಾಪಸ್ಸು ಮನೆಗೆ ತೆರಳುತ್ತಿರುವ ವೇಳೆ ಸಾಗರ ರಸ್ತೆಯಲ್ಲಿನ ಟೆಂಪೋ ನಿಲ್ದಾಣದ ಬಳಿ ಬೈಕನಲ್ಲಿ ಬಂದ ಇಬ್ಬರು ಹಲ್ಲೆಕೊರರಾದ ಹುರುಳಿಸಾಲ ಮಿನಿಹತ್ಲು ನಿವಾಸಿ ಜಾಲಿ ಪಟ್ಟಣ ಪಂಚಾಯತ್ ಸದಸ್ಯ ರಮೇಶ ಮಾದೇವ ನಾಯ್ಕ ಹಾಗೂ ಆತನ ತಮ್ಮ ರಾಜೇಶ ಮಾದೇವ ನಾಯ್ಕ ಇಬ್ಬರು ಸೇರಿ ಹಲ್ಲೆ ನಡೆಸಿದ್ದಾರೆ.
ಘಟನೆಗೆ ಹಳೆದ್ವೇಷದ ಕಾರಣ ಇಟ್ಟುಕೊಂಡು ಅಡ್ಡಗಟ್ಟಿ ಮೊದಲು ಅವಾಚ್ಯ ಶಬ್ದದಿಂದ ನಿಂದಿಸಿ, ಬೈಯ್ದು ಬೆದರಿಸಿಯೊಡ್ಡಿದ್ದಾರೆ. ಈ ವೇಳೆ ಹಲ್ಲೆಗೊಳಗಾದ ಈಶ್ವರ ನಾಯ್ಕ ಪ್ರಶ್ನಿಸಿದ್ದು, ಇದಕ್ಕೆ ಏಕಾಏಕಿ ಆರೋಪಿ ಜಾಲಿ ಪಟ್ಟಣ ಪಂಚಾಯತ್ ಸದಸ್ಯ ರಮೇಶ ನಾಯ್ಕ ತನ್ನ ಬೈಕನಲ್ಲಿದ್ದ ರಾಡನಿಂದ ತಲೆಗೆ ಬಲವಾಗಿ ಹೊಡೆದ ಪರಿಣಾಮ ಈಶ್ವರ ನಾಯ್ಕಗೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಬಿದ್ದಿದ್ದಾನೆ. ನಂತರ ಮತ್ತೆ ಹಲ್ಲೆಗೊಳಗಾದ ಈಶ್ವರ ನಾಯ್ಕಗೆ ಇವತ್ತು ಇಷ್ಟಕ್ಕೆ ಬಿಟ್ಟಿದ್ದೇನೆ ಮುಂದಿನ ದಿನಗಳಲ್ಲಿ ಕೊಲೆ ಮಾಡುವುದಾಗಿ ಬೆದರಿಕೆಯನ್ನೊಡ್ಡಿ ಸ್ಥಳದಿಂದ ತೆರಳಿದ್ದಾರೆಂದು ಉಲ್ಲೇಖಿಸಲಾಗಿತ್ತು.
ತಕ್ಷಣಕ್ಕೆ ಹಲ್ಲೆಗೊಳಗಾದ ಈಶ್ವರ ನಾಯ್ಕ ನನ್ನು ಸರಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಹಾಗೂ ತಪಾಸಣೆ ಹಿನ್ನೆಲೆ ಕುಂದಾಪುರ ಆಸ್ಪತ್ರೆಗೆ ಸಾಗಿಸಲಾಗಿದತ್ತು. ಘಟನೆಯ ಬಳಿಕ ಭಟ್ಕಳ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದರು.
Be the first to comment