ಭಟ್ಕಳ ಹೆಬ್ಳೆ ಗ್ರಾಮ‌ ಪಂಚಾಯತ‌ನ ಭ್ರಷ್ಟಾಚಾರ ಸಾಬೀತು, ಅಧಿಕಾರಿಗಳ ವಜಾ ಮಾಡುವಂತೆ ಆರ್.ಟಿ.ಐ ಸಂಘದ ರಾಜ್ಯಾಧ್ಯಕ್ಷ ಕುಣಿಗಲ್ ರಮೇಶ್ ಆಗ್ರಹ

ವರದಿ:ಕುಮಾರ ನಾಯ್ಕ

ಭಟ್ಕಳ-

ಭಟ್ಕಳ ತಾಲೂಕಿನ ಹೆಬ್ಬಳೆ ಗ್ರಾಮ ಪಂಚಾಯತ್ ಅಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ತಾಲೂಕ ಪಂಚಾಯತ್ ತನಿಖಾದಿಕಾರಿಗಳು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.

ಹೆಬ್ಳೆ ಗ್ರಾಮ ಪಂಚಾಯತ್ ಅಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರಾಜ್ಯ ಮಾಹಿತಿ ಹಕ್ಕುಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಪ್ರಧಾನ ಕಾರ್ಯದರ್ಶಿ ನಾಗೇಶ ನಾರಾಯಣ ನಾಯ್ಕ ಅವರು ಅವರು ತನಿಖೆಗಾಗಿ ದೂರು ನೀಡಿದ್ದರು ಈ ಹಿನ್ನೆಲೆಯಲ್ಲಿ ತಾಲೂಕ ಪಂಚಾಯತ್ ತನಿಖಾ ತಂಡವು ಹೆಬ್ಳೆ ಗ್ರಾಮ ಪಂಚಾಯತಗೆ ಭ್ರಷ್ಟಾಚಾರ ತನಖೆಯ ಸಂಬಂದ ತೆರಳಿತ್ತು ಈಗ ಆ ತನಿಖೆಯ ವರದಿ ಬಂದಿದ್ದು ಆ ವರದಿಯ ಪ್ರಕಾರ ಅರ್ಜಿದಾರರ ಹೇಳಿಕೆಯಂತೆ ಕೆಲವೋಂದು ಮುಂಗಡ ರಶೀದಿ ಹಾಗು ಚೆಕ್ ಸ್ವೀಕ್ರತಿಗಳಲ್ಲಿ ಸಹಿ ವ್ಯತ್ಯಾಸವಾಗಿರುವುದಲ್ಲದೆ ಕಾರ್ಯಾಲಯದ ದಾಖಲೆ ನಿರ್ವಹಣೆಯಲ್ಲಿ ಕ್ರಮ ಬದ್ದತೆ ಇಲ್ಲದೆ ಇರುವುದು ಕಂಡು ಬಂದಿದೆ ಎಂಬ ವರದಿಯನ್ನು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಿ ವರದಿಯನ್ನು ಸಲ್ಲಿಸಲಾಗಿದೆ .ಒಟ್ಟಾರೆ ಭಟ್ಕಳ ತಾಲೂಕ ಹೆಬ್ಳೆ ಗ್ರಾಮ ಪಂಚಾಯತ್ ಅಲ್ಲಿ ಭ್ರಷ್ಟಾಚಾರ ನಡೆದಿರುವುದು ಸಾಬಿತಾದಂತಾಗಿದೆ .

ಇನ್ನು ಈ ಬ್ರಷ್ಟಾಚಾರದಲ್ಲಿ ಯಾರು , ಯಾರ್ಯಾರ ಕೈವಾಡ ಇದೆ ಎಂಬುದು ತಿಳಿದು ಬರಬೇಕಾಗಿದೆ.

ಈ ಭಟ್ಕಳ ಹೇಬಳೆ ಪಂಚಾಯತ್ ಭ್ರಷ್ಟಾಚಾರ ಪ್ರಕರಣದ ಬಗ್ಗೆ ರಾಜ್ಯ ಮಾಹಿತಿ ಹಕ್ಕುಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯ ಅಧ್ಯಕ್ಷ ರಮೇಶ್ ಕುಣಿಗಲ್ ಮಾತನಾಡಿ ತಮ್ಮ ಸಂಘದ ಭಟ್ಕಳ ತಾಲೂಕ ಪ್ರಧಾನ ಕಾರ್ಯದರ್ಶಿ ನಾಗೇಶ ನಾರಾಯಣ ನಾಯ್ಕ ಅವರು ಭ್ರಷ್ಟಾಚಾರ ಮುಕ್ತ ವ್ಯವಸ್ಥೆಗಾಗಿ ಮಾಡಿದ ಹೋರಾಟಕ್ಕೆ ಜಯ ದೊರಕಿದೆ. ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆಸಿದಂತಹ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡುವುದರ ಮೂಲಕ ತಪ್ಪಿತಸ್ಥರಿಗೆ ಶಿಕ್ಷೇಯಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾ ಅಧಿಕಾರಿಯವರನ್ನು ಆಗ್ರಹಿಸಿದ್ದಾರೆ.

Be the first to comment

Leave a Reply

Your email address will not be published.


*