ರಾಜ್ಯ ಸುದ್ದಿಗಳು
ಭಟ್ಕಳ
ಭಟ್ಕಳ ತಾಲೂಕಿನ ತೆಂಗಿನಗುAಡಿಯಲ್ಲಿ 10ಕೋಟಿ ರೂಪಾಯಿಯಲ್ಲಿ 2016ರಲ್ಲಿ ನಿರ್ಮಾಣಗೊಂಡಿರುವ ಬಂದರು ಕುಸಿದುಬಿದ್ದಿದ್ದು ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರು ಕಾಮಗಾರಿಯ ಗುಣಮಟ್ಟದ ಕುರಿತು ಸಂಪೂರ್ಣ ತನಿಖೆ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ.2016ರಲ್ಲಿ ಸುಮಾರು 10.ಕೋಟಿ ರೂ ಅನುದಾನದಲ್ಲಿ ತೆಂಗಿನಗುAಡಿ ಬಂದರನ್ನು ಅಭಿವೃದ್ಧಿ ಪಡಿಸಲಾಗಿತ್ತು. ಅದಕ್ಕೆ ಜಟ್ಟಿಯನ್ನು ನಿರ್ಮಾಣಮಾಡಲಾಗಿದೆ. 2016ರಲ್ಲಿ ಈ ಬಂದರು ಅಭಿವೃದ್ಧಿಗೊಂಡಿತಾದರೂ ಇನ್ನು ಮಾರುಕಟ್ಟೆಗೆ ತೆರೆದಿರಲಿಲ್ಲ. ಈ ಬಾರಿ ಮಾರುಕಟ್ಟೆಗೆ ತೆರೆಯಬೇಕು ಅನ್ನುವಷ್ಟರಲ್ಲಿ ಜಟ್ಟಿಯ ಹಿಂಬದಿಯ ಸುಮಾರು 18ರಿಂದ 20ಮಿ. ಕಾಂಕ್ರೆಟ್ ಪದರು ಕುಸಿದುಬಿದ್ದಿದೆ. ಇದು ಕುಸಿಯುವ ಸಂದರ್ಬದಲ್ಲಿ ಸಾರ್ವಜನಿಕರು ಯಾರು ಇರದೆ ಇರುವದರಿಂದ ಸಂಭಾವ್ಯ ಪ್ರಾಣಹಾನಿ ತಪ್ಪಿದಂತಾಗಿದೆ. 2016ರಲ್ಲಿ ನಿರ್ಮಾಣಗೊಂಡ ಬಂದರು 5 ವರ್ಷ ಮುಗಿಯುವಷ್ಟರಲ್ಲಿ ಕುಸಿಯುತ್ತಿದೆ ಎಂದರೆ ಇದರ ಗಣಮಟ್ಟವನ್ನು ಸಂಬAಧ ಪಟ್ಟವರು ತನಿಖೆ ಮಾಡಬೇಕು ಎಂದು ಸಾರ್ವಜನಿಕ ವಲಯದಲ್ಲಿ ಆಗ್ರಹ ಕೇಳಿಬಂದಿದೆ.
ಒಂದೊಮ್ಮೆ ಮಾರುಕಟ್ಟೆಗೆ ತೆರೆದಾಗ ಈ ಅನಾಹುತ ಸಂಭವಿಸಿದ್ದೆ ಆದರೆ ಸಾವು ನೋವುಗಳು ಸಂಬವಿಸುತ್ತಿತ್ತು. ಮೀನುಗಾರ ಮಹಿಳೆಯರು, ವ್ಯಾಪಾರಿಗಳು, ಏಜೆಂಟರು ಸೇರಿದಂತೆ ನೂರಾರು ಜನರು ಇರುತ್ತಾರೆ. ಇದು ಆರಂಭದಲ್ಲಿ ಕುಸಿದಿದೆ. ಇದರಿಂದ ಮೀನುಗಾರರಲ್ಲಿ ಹಾಗೂ ಇಲ್ಲಿ ಬರುವವರಲ್ಲೂ ಸಹಜವಾಗಿ ಆತಂಕ ಮನೆ ಮಾಡಿದೆ. ಇಲ್ಲಿನ ಸಂಪೂರ್ಣ ಸ್ಥಳದಲ್ಲಿ ಲಾರಿ ಅಥವಾ ಇನ್ನಿತರ ವಾಹನಗಳನ್ನು ತರಲು ಹಿಂದೆ ಸರಿಯುವಂತಾಗಿದೆ. ಇದರಿಂದ ಇಲ್ಲಿನ ತೆಂಗಿನಗುAಡಿ ಬಂದರಿಗೆ ಆರ್ಥಿಕ ಚಟುವಟಿಕೆ ಮೇಲೆ ಪರಿಣಾಮ ಬೀರುವ ಸಾದ್ಯತೆ ಇದ್ದು ಪ್ರಾಮಾಣಿಕ ಇಂಜೀನೀಯರರಿAದಲೆ ಇದರ ಗುಣಮಟ್ಟ ಪರೀಕ್ಷೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಬಂದರು ಇಲಾಖೆ ಅಧಿಕಾರಿ ರಾಮದಾಸ ಆಚಾರಿ, ಮಾತನಾಡಿ ಇಲ್ಲಿನ ಜಟ್ಟಿಯ ಹಿಂದೆ ನೀರು ನುಗ್ಗಿ ಸುಮಾರು 18ಮಿ. ಭುಮಿಯ ಭಾಗ ಕುಸಿದಿದೆ. ಇಲ್ಲಿನ ಕಾಮಗಾರಿ ಇನ್ನೂ ಮುಂದುವರೆಯುವದಿದೆ. ಇದಿಷ್ಟು ಭಾಗ ಬಿಟ್ಟರೆ ಮತ್ತೆಲ್ಲಾ ಸುರಕ್ಷಿತವಾಗಿದೆ. ಜಟ್ಟಿಯ ಕುರಿತು ಯಾವುದೆ ಸಂಶಯ ಬೇಡ. ಇನ್ನೊಂದೆಡೆ ಡ್ರಜ್ಜಿಂಗ್ ಕಾರ್ಯವೂ ನಡೆಯುತ್ತಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದರು.
Be the first to comment