‘ಬರಹದ ಬೆಳಕು’ ಕೃತಿ ಲೋಕಾರ್ಪಣೆ; ಯುವ ಪತ್ರಕರ್ತ ಬೇಪಾರಿ ಅವರ ಚೊಚ್ಚಲ ಕೃತಿ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಹುನಗುಂದ ತಾಲೂಕಿನ ಅಮೀನಗಡದ ಯುವ ಪತ್ರಕರ್ತ ಎಚ್.ಎಚ್.ಬೇಪಾರಿ ಅವರ ಚೊಚ್ಚಲ ಕೃತಿ ‘ಬರಹದ ಬೆಳಕು’ ಜೂ.16 ರಂದು ಲೋಕಾರ್ಪಣೆಗೊಳ್ಳಲಿದೆ.

ಪಟ್ಟಣದ ಶಾದಿಮಹಲ್ ನಲ್ಲಿ ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಉದಯವಾಣಿ ಪತ್ರಿಕೆ ಹಿರಿಯ ವರದಿಗಾರ ಶ್ರೀಶೈಲ್ ಬಿರಾದಾರ ಕೃತಿ ಲೋಕಾರ್ಪಣೆ ಗೊಳಿಸಲಿದ್ದು,ಸಾಹಿತಿ ಮಹಾದೇವ ಬಸರಕೋಡ ಕೃತಿ ಪರಿಚಯಿಸಲಿದ್ದಾರೆ.

ಸ್ಥಳೀಯ ಪ್ರಭುಶಂಕರೇಶ್ಚರ ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು ಕೆ.ಎಚ್.ಡಿ.ಸಿ ಮಾಜಿ ಅಧ್ಯಕ್ಷ ರವೀಂದ್ರ ಕಲಬುರ್ಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಆರ್.ಜಿ.ಸನ್ನಿ ಅಧ್ಯಕ್ಷತೆ ವಹಿಸಲಿದ್ದಾರೆ.

ಅತಿಥಿಗಳಾಗಿ ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ,ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಸಿದ್ಧಲಿಂಗಪ್ಪ ಬೀಳಗಿ, ಕಾನಿಪ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶ ಅಂಗಡಿ ಆಗಮಿಸಲಿದ್ದು ಉದ್ಯಮಿ ರಾಜು ಬೋರಾ ಅವರನ್ನು ಸನ್ಮಾನಿಸಲಾಗುವುದು.

ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಅಜಮೀರ ಮುಲ್ಲಾ, ಉಪಾಧ್ಯಕ್ಷ ಇಸ್ಮಾಯಿಲಸಾಬ ಬೇಪಾರಿ,ಪೀರಾ ಖಾದ್ರಿ,ಕಸಾಪ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ, ಹುನಗುಂದ ವಿಮ ಬ್ಯಾಂಕ್ ನಿರ್ದೇಶಕ ಸೋಮಶೇಖರ ಬಲಕುಂದಿ, ತಾಪಂ ಸಹಾಯಕ ಲೆಕ್ಕಾಧಿಕಾರಿ ಶ್ರೀಶೈಲ ತತ್ರಾಣಿ, ಪಟ್ಟಣ ಪಂಚಾಯಿತಿ ಸದಸ್ಯರಾದ ರಮೇಶ ಮುರಾಳ, ವಿಜಯಕುಮಾರ ಕನ್ನೂರ, ಸಂತೋಷ ಐಹೊಳ್ಳಿ,ಬಾಬು ಛಬ್ಬಿ,ಸಮುದಾಯದ ಮುಖಂಡರಾದ ಮೀರಾಸಾಬ ಮುಲ್ಲಾ,ಕಾಶೀಮಸಾಬ ಬಾಗೇವಾಡಿ, ಡಿ.ಪಿ.ಅತ್ತಾರ,ಹಾಫೀಜ ಮುರ್ತುಜಾ ಮೇಲಿನಮನಿ ಇತರರು ಆಗಮಿಸಲಿದ್ದಾರೆಂದು ಪತ್ರಕರ್ತ ಎಚ್.ಎಚ್.ಬೇಪಾರಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*