ಲಿಂಗಸುಗೂರ ನಗರದಲ್ಲಿ ಆಕಾಶದಲ್ಲಿ ಕಾಮನ ಬಿಲ್ಲು ಕಂಡು ಮಕ್ಕಳಲ್ಲಿ ಆನಂದ

ವರದಿ : ಗೌತಮ ಚವ್ಹಾಣ ಲಿಂಗಸ್ಗೂರ

ಲಿಂಗಸುಗೂರ ವರದಿ.ಲಿಂಗಸುಗೂರ ಪಟ್ಟಣದಲ್ಲಿ ಸಾಯಂಕಾಲ 5 ಗಂಟೆಗೆ ಮೋಡ ಕವಿದ ವಾತಾವರಣ ಮಳೆ ಬರುವ ಲಕ್ಷಣವಿದ್ದು ಅದೇ ಸಮಯದಲ್ಲಿ ಆಕಾಶದಲ್ಲಿ ಕಾಮನಬಿಲ್ಲು ಕಂಡು ಬಂದಿದ್ದು ಚಿಕ್ಕ ಮಕ್ಕಳು ಕಾಮನ ಬಿಲ್ಲು ನೋಡಿ ಆನಂದ ದಿಂದ ಕುಣಿದು ಕುಪ್ಪಳಿಸಿದರು.

ಆಕಾಶದಲ್ಲಿ ಸೂರ್ಯನ ಸುತ್ತ ವೃತ್ತಾಕಾರದಲ್ಲಿ ರವಿವಾರ ಸಾಯಂಕಾಲ ಕಂಡುಬಂದ ಕಾಮನಬಿಲ್ಲಿನ ಬಣ್ಣದ ದೃಶ್ಯ ಕೆಲಹೊತ್ತು
ಅಚ್ಚರಿ ಮೂಡಿಸಿತು.
ಸೂರ್ಯನ ಸುತ್ತ ಕೋಟೆಯ ರೀತಿಯಲ್ಲಿ ಕಂಡು ಬಂದ ಆಕಾಶದ ವಿಸ್ಮಯವನ್ನು
ಜನತೆ ಕಣ್ತುಂಬಿಕೊಂಡು ಸಂಭ್ರಮಿಸಿದರು.
ಕೆಲವರು ತಮ್ಮ ಮೊಬೈಲ್‌ಗ‌ಳಲ್ಲಿ ಈ ವಿಸ್ಮಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರಿಂದ ಕೆಲ
ಹೊತ್ತಿನಲ್ಲಿಯೇ ಫೋಟೋ ವೈರಲ್‌ ಆಗಿದ್ದು, ಎಲ್ಲರ ಮೊಬೈಲ್‌ಗ‌ಳಲ್ಲಿ ಹರಿದಾಡತೊಡಗಿತು.
ಆಕಾಶದಲ್ಲಿ ಕಾಮನ ಬಿಲ್ಲು ಕಾಣಲು ಕಾರಣ, ಪರಿಣಾಮ, ಅರ್ಥವೇನು ಎಂದು ಜನರಲ್ಲಿ ಮಕ್ಕಳಲ್ಲಿ ಪ್ರಶ್ನೆ ಉದ್ಭವಿಸುವ ದು ಸಹಜ .
ವೈಜ್ಞಾನಿಕ ಕಾರಣ: ಸೂರ್ಯನ ಸುತ್ತ ತೇಜೋಪುಂಜದಂತೆ ಕಾಣುವ ಈ ಉಂಗುರ ನಿರ್ಮಾಣವಾಗಲು ಮುಖ್ಯ ಕಾರಣ ಬೆಳಕಿನ ವಕ್ರೀಭವನ ಕ್ರಿಯೆ. ವಾತಾವರಣದಲ್ಲಿ ಮಂಜಿನ ಹರಳುಗಳ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ, ಕಿರಣಗಳು ವಕ್ರೀಭವನ ಹೊಂದಿ ಬಾಗುತ್ತವೆ. ಬೆಳಕಿನ ಏಳು ಬಣ್ಣಗಳು ಪ್ರಕಟಗೊಳ್ಳುತ್ತದೆ. ಅತಿ ಸೂಕ್ಷ್ಮ ಸ್ವರೂಪದ ಮೋಡಗಳ ಇರುವಿಕೆಯಿಂದ ನೋಡುಗರ ಕಣ್ಣುಗಳಿಗೆ ಈ ನೈಸರ್ಗಿಕ ಕ್ರಿಯೆ ಉಂಗುರದಂತೆ ಗೋಚರಿಸುತ್ತದೆ. ಈ ಮೋಡಗಳು ಸುಮಾರು 20,000 ಅಡಿ ಎತ್ತರದಲ್ಲಿ ಸೃಷ್ಟಿಯಾಗಿರುತ್ತವೆ.
ಮೋಡಗಳು ಕೋಟಿಗಟ್ಟಲೆ ಅತೀ ಸೂಕ್ಷ್ಮ ಮಂಜಿನ ಹರಳಗಳನ್ನು ಒಳಗೊಂಡಿರುತ್ತವೆ. ಈ ಉಂಗುರವನ್ನು ವಿಭಿನ್ನ ಕೋನಗಳಲ್ಲಿ ನೋಡಿದಾಗ
ಕೊಂಚ ಭಿನ್ನವಾಗಿ ಗೋಚರಿಸುತ್ತದೆ. ಸರಿಯಾದ ಕೋನದಲ್ಲಿ ನೋಡಿದಾಗ ಮಾತ್ರ ಕಾಮನಬಿಲ್ಲಿನ ಗೋಲದಂತೆ ಕಾಣಿಸುತ್ತದೆ. ಇಲ್ಲವಾದರೆ ಕೇವಲ ಬಿಳಿ ಉಂಗುರದಂತೆ ಕಾಣಿಸುತ್ತದೆ. ಉಂಗುರ ಸೂರ್ಯ ಸುತ್ತ ಸರಿಸುಮಾರು 22 ಡಿಗ್ರಿ ತ್ರಿಜ್ಯ ಹೊಂದಿರುತ್ತವೆ. ಲಿಂಗಸುಗೂರ ಪಟ್ಟಣದ ಜನತೆ ಈ ಕಾಮನ ಬಿಲ್ಲನ್ನು ಚಿಕ್ಕ ಮಕ್ಕಳು ಹಾಗೂ ದೊಡ್ಡವರು ಎನ್ನದೇ ಎಲ್ಲಾರು
ಖಗೋಳದ ವಿಸ್ಮಯ ವೀಕ್ಷಿಸಿ ಆನಂದಿಸಿದರು

Be the first to comment

Leave a Reply

Your email address will not be published.


*