ಜಿಲ್ಲಾ ಸುದ್ದಿಗಳು
ಶಿರಸಿ
ಅದೊಂದು ಪುಟ್ಟ ಗ್ರಾಮ, ಅಲ್ಲಿರುವದು ೩೧ ಕುಟುಂಬ, ಒಟ್ಟು ಜನಸಂಖ್ಯೆ ೧೦೦ ರಷ್ಟು . . . ಸ್ವತಂತ್ರ ದೊರಕಿ ೭೫ ವಸಂತಗಳಾದರೂ ಸೇತುವೆ ಸೌಲಭ್ಯ ಇಲ್ಲದ ಕಾರಣ ಹರಿಯುವ ಹೊಳೆಯಲ್ಲಿ ನೀರು ಹರಿಯುವುದರಿಂದ ವರ್ಷದ ೮ ತಿಂಗಳು ಗ್ರಾಮವು ವಾಹನ ಸಂಪರ್ಕದಿAದ ವಂಚಿತವಾಗಿರುವುದು. – ಇದು ಉತ್ತರ ಕನ್ನಡ ಜಿಲ್ಲೆಯ, ಶಿರಸಿ ತಾಲೂಕಿನ, ವಾನಳ್ಳಿ ಗ್ರಾಮ ಪಂಚಾಯಿತಿ, ಮುಸ್ಕಿ ಗ್ರಾಮದ ಹಗುರಮನೆ ಮತ್ತು ಮೇಲಿನ ಗದ್ದೆಯ ಸ್ಥಿತಿ. ಶಿರಸಿಯಿಂದ ಈ ಗ್ರಾಮವು ಶಿರಸಿಯಿಂದ ಹುಲೆಕಲ್, ವಾನಳ್ಳಿ, ಕಕ್ಕಳ್ಳಿ ಮಾರ್ಗವಾಗಿ ಶಿರಸಗಾಂವದಿAದ ಹಗುರಮನೆ ಮತ್ತು ಮೇಲಿನಗದ್ದೆಗೆ ಶಿರಸಿಯಿಂದ ಸುಮಾರು ೩೫ ಕೀ.ಮೀ ದೂರದಲ್ಲಿದೆ. ವರ್ಷದಲ್ಲಿ ೮ ತಿಂಗಳು ಹಾದು ಹೋಗುವ ರಸ್ತೆಗೆ ಅಡ್ಡವಾಗಿ ಬಿಳಿಹೊಳೆಗೆ ಸೇತುವೆ ಇಲ್ಲದೇ ಸಂಪರ್ಕದ ಕೊರತೆಯಲ್ಲಿಯೇ ಇಂದಿನವರೆಗೂ ಗ್ರಾಮಸ್ಥರು ಜೀವಿಸುತ್ತಿದ್ದಾರೆ.
ಅಂದರು, ಅಂಗವಿಕಲರು ಮತ್ತು ವೃದ್ಧರು ಇರುವಂತಹ ಅತ್ಯಂತ ಹಿಂದುಳಿದ ಒಕ್ಕಲಿಗ ಸಮಾಜಕ್ಕೆ ಸೇರಿದ ರೈತಾಪಿ ಕುಟುಂಬದ ಜನವಸತಿ ಇರುವ ಈ ಗ್ರಾಮದಲ್ಲಿ ವಾಹನ ಸಂಪರ್ಕವಿಲ್ಲದೇ, ಮಳೆಗಾಲದ ಪೂರ್ವದಲ್ಲಿ ಮುಂದಿನ ೮ ತಿಂಗಳಿಗೆ ಅವಶ್ಯವಾದ ಆಹಾರ ಸಾಮಗ್ರಿ, ಕೃಷಿ ಚಟುವಟಿಕೆ ಪೂರಕವಾದ ರಸಗೊಬ್ಬರ, ಆಹಾರ ಧಾನ್ಯ ಸಾಮಗ್ರಿಗಳನ್ನ ಸೇಕರಿಸಿಟ್ಟುಕೊಳ್ಳುವುದು ಅನಿವಾರ್ಯವಾಗಿದೆ. ಈ ಗ್ರಾಮದಿಂದ ಪ್ರಾರ್ಥಮಿಕ, ಪ್ರೌಢಶಾಲೆ, ಕಾಲೇಜುಗಳಿಗೆ ಹೋಗುವ ಸುಮಾರು ೧೮ ಮಕ್ಕಳುಗಳಿಗೆ ರಸ್ತೆಯ ಸಂಪರ್ಕ, ಕಾಲುಶಂಕವಿಲ್ಲದೇ ಖಾಸಗಿ ಮತ್ತು ಇನ್ನೀತರ ಅತೀಕ್ರಮಣ ಕ್ಷೇತ್ರದಿಂದ ಅರಣ್ಯ ಮತ್ತು ಗಿಡ ಗಂಟಿಗಳ ಮಧ್ಯದಿಂದಲೇ ಓಡಾಡುವುದು ಅನಿವಾರ್ಯವಾಗಿದೆ. ಸಮಸ್ಯೆ ಪರಿಹಾರಕ್ಕೆ ಜನಪ್ರತಿನಿಧಿಗಳ ತಾತ್ಸರ ಮನೋಭಾವನೆ ಸಾರ್ವಜನಿಕವಾಗಿಚರ್ಚೆಗೆಕಾರಣವಾಗಿದೆ. ಸರ್ವಋತು ರಸ್ತೆಯಿಲ್ಲದಿರುವುದರಿಂದ ಅನಾರೋಗ್ಯ ಪೀಡಿತರನ್ನ ಆರೋಗ್ಯ ಕೇಂದ್ರಕ್ಕೆ ಕಂಬಳಿಯಲ್ಲಿ ಸುತ್ತಿ ಸಾಗಿಸುವ ಸಾಹಸವನ್ನ ಗ್ರಾಮಸ್ಥರು ಆಗಾಗ ಮಾಡುವ ಪ್ರಸಂಗಗಳು ಜರುಗಿದೆ.
ಸಮಸ್ಯೆ ಕೇಳುವವರಿಲ್ಲ : ಶೀಘ್ರ ಸೇತುವೆ ಆಗಲಿ. ಹಿಂದೆ ಮಂಜೂರಿಯಾದ ಸೇತುವೆಯನ್ನ ಬೇರೆ ಸ್ಥಳಕ್ಕೆ ವರ್ಗಾಯಿಸಿರುವುದರಿಂದ ನಮ್ಮ ಗ್ರಾಮಕ್ಕೆ ಸೇತುವೆ ಇಲ್ಲದೇ, ವರ್ಷದಲ್ಲಿ ೮ ತಿಂಗಳು ನಗರ ಪ್ರದೇಶದಿಂದ ವಂಚಿತರಾಗುತ್ತೇವೆ. ಆಹಾರ ಮತ್ತು ಕೃಷಿ ಸಾಮಗ್ರಿ ಸಾಗಾಟಕ್ಕೆ ತೊಂದರೆ, ಶಾಲೆ ಮಕ್ಕಳು ಮತ್ತು ಹೆಂಗಸರಿಗೆ ಮಳೆಗಾಲದ ನಂತರ ಓಡಾಟಕ್ಕೆ ಸಾಧ್ಯವಾಗದೇ ಇರುವುದರಿಂದ ಸರಕಾರ ಅತೀ ಶೀಘ್ರದಲ್ಲಿ ಸೇತುವೆ ಮಂಜೂರಿ ಮಾಡಬೇಕೆಂದು ಗ್ರಾಮಸ್ಥರಾದ ನಾರಾಯಣ ಯಂಕು ಗೌಡ, ಗೌರಿ ಬೋಮ್ಮ ಗೌಡ ಮತ್ತು ಸವಿತಾ ಗಣಪತಿ ಗೌಡ ಸಾರ್ವತ್ರಿಕವಾಗಿ ಅಳಲನ್ನು ತೊಡಿಕೊಂಡಿದ್ದಾರೆ. ನಿರ್ಲಕ್ಷಕ್ಕೆ ಖೇದಕರ : ಸ್ವತಂತ್ರ ದೊರಕಿ ೭೫ ವರ್ಷಗಳಾದರೂ ಅತ್ಯಂತ ಹಿಂದುಳಿದ ಪ್ರದೇಶದ ಮೂಲಭೂತ ಸೌಕರ್ಯದಿಂದ ಗ್ರಾಮವು ವಂಚಿತವಾಗಿರುವುದು ಖೇದಕರ. ಈ ಗ್ರಾಮದ ಸೌಕರ್ಯಕ್ಕಾಗಿ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕೆಂದು ಸಾಮಾಜಿಕ ಹೋರಾಟಗಾರರ ರವೀಂದ್ರ ನಾಯ್ಕ ಜನಪ್ರತಿನಿಧಿಗಳಿಗೆ ಅಗ್ರಹಿಸಿದ್ದಾರೆ.
Be the first to comment