ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಹುನಗುಂದ ತಾಲ್ಲೂಕಿನ ಯಡಹಳ್ಳಿ ಗ್ರಾಮದ ಮಂಜುನಾಥ ಗೌಡರ ಅವರಿಂದ ಜಮೀನಿನ ವಾರ್ಸಾಕ್ಕೆ ಸಂಬಂಧಿಸಿದಂತೆ ನಾಗೂರು ಗ್ರಾಮ ಲೆಕ್ಕಾಧಿಕಾರಿ ಭಗವಂತರಾಯ ಬಿರಾದಾರ 50 ಸಾವಿರ ರೂ ಲಂಚ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಶುಕ್ರವಾರ ಪಟ್ಟಣದಲ್ಲಿ ನಡೆದಿದೆ.
ಯಡಹಳ್ಳಿ ಗ್ರಾಮದ ಮಂಜುನಾಥ ಬಸನಗೌಡರ ಅವರ ಜಮೀನಿನ ಉತಾರದಲ್ಲಿ (ಪಹಣಿ) ಮೃತ ವ್ಯಕ್ತಿಯ ಹೆಸರು ಕಡಿಮೆ ಮಾಡಿ ಸಹೋದರರ ಹೆಸರುಗಳನ್ನು ಅದಲು ಬದಲು ಮಾಡಿ ಸೇರ್ಪಡೆ ಮಾಡುವುದಕ್ಕೆ 50 ಸಾವಿರ ಬೇಡಿಕೆಯಿಟ್ಟಿದ್ದಾಗಿ ತಿಳಿದು ಬಂದಿದೆ. ಪಟ್ಟಣದ ಹಳೆಯ ತಹಶೀಲ್ದಾರ ಕಚೇರಿ ಹತ್ತಿರ ವ್ಯಕ್ತಿಯಿಂದ ಹಣ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ಗ್ರಾಮ ಲೆಕ್ಕಾಧಿಕಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಎಸಿಬಿ ಡಿಎಸ್ಪಿ ಸುರೇಶ ರೆಡ್ಡಿ ನೇತೃತ್ವದಲ್ಲಿ ಸಿಪಿಐ ಗಳಾದ ಸಮೀರ ಮುಲ್ಲಾ, ವಿಜಯ ಮಹಾಂತೇಶ ಮಠಪತಿ, ಸಿಬ್ಬಂದಿಗಳಾದ ಎಚ್.ಎಸ್.ಹೂಗಾರ, ಜಿ.ಜಿ.ಕಾಖಂಡಕಿ,ಎನ್.ಎ.ಪೂಜಾರಿ, ಬಿ.ವಿ.ಪಾಟೀಲ,ಎಸ್.ಆರ್.ಚುರ್ಚ್ಯಾಳ, ಎಸ್.ಆರ್.ಸುನಗದ,ಸಿ.ಎಸ್.ಅಚನೂರ ಹಾಗೂ ಡ್ಯೂಪಿ.ಸಿ ಎಚ್.ಎನ್.ರಾಠೋಡ ದಾಳಿ ನಡೆಸಿದ್ದಾರೆ.ಬಾಗಲಕೋಟ ಎಸಿಬಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
Be the first to comment