ರಾಜ್ಯ ಸುದ್ದಿಗಳು
ದೇವನಹಳ್ಳಿ
ಕಳೆದ ವರ್ಷದಲ್ಲಿ ಬರಗಾಲದಿಂದ ಮಳೆಯಿಲ್ಲದೆ ಬತ್ತಿಹೋಗಿದ್ದ ಕೆರೆ, ಕುಂಟೆಗಳಲ್ಲಿ ಈ ಬಾರಿ ಮಳೆರಾಯನ ಕೃಪೆಯಿಂದಾಗಿ ಕೆರೆ-ಕುಂಟೆಗಳಲ್ಲಿ ನೀರು ತುಂಬಿ ತುಳುಕುತ್ತಿರುವುದರಿಂದ ನೀರಿನ ಸೆಲೆಯಲ್ಲಿ ತಾವರೆ ಹೂಗಳು ಜಗಮಗಿಸುತ್ತಿವೆ.
ದೇವನಹಳ್ಳಿ ತಾಲೂಕಿನ ಕೊಯಿರ ಸಮೀಪದ ಜ್ಯೋತಿಪುರ, ಶ್ಯಾನಪ್ಪನಹಳ್ಳಿ, ಬೆಟ್ಟೇನಹಳ್ಳಿ ಸಮೀಪದ ಚಿಕ್ಕಣ್ಣಹೊಸಹಳ್ಳಿ ಸೇರಿದಂತೆ ವಿವಿದೆಡೆ ಕೆರೆ-ಕುಂಟೆ ಮತ್ತು ಕಲ್ಯಾಣಿಗಳಲ್ಲಿ ಯತೇಚ್ಛವಾಗಿ ನೀರು ಬಂದಿರುವುದರಿಂದ ನೀರಿನಲ್ಲಿ ತಾವರೆ ಹೂಗಳ ರಾಶಿ ಬೆಳೆದಿರುವುದು ಗಮನಸೆಳೆಯುತ್ತಿದೆ.
ಈ ಭಾಗದಲ್ಲಿ ಕಳೆದ ವರ್ಷದಲ್ಲಿ ಕುಡಿಯುವ ನೀರಿಗೂ ಆಹಾಕಾರವಿತ್ತು. ಆದರೆ, ಇತ್ತೀಚೆಗೆ ಸುರಿದ ಮಳೆಯಿಂದಾಗಿ ನೀರಿನ ಮೂಲಗಳು ತುಂಬಿ ಕೋಡಿ ಹರಿಯುತ್ತಿರುವುದರಿಂದ ತಾವರೆ ಹೂಗಳ ಎಲೆಗಳು ನೀರಿನಾವೃತ್ತಗೊಂಡಿರುವುದು ನೋಡುಗರಿಗೆ ಹೆಚ್ಚು ಸಂತಸವನ್ನುಂಟು ಮಾಡುತ್ತಿದೆ.
ನೆಲುಂಬೋ ನುಸಿಥೆರ ಎಂದು ವೈಜ್ಞಾನಿಕವಾಗಿ ಕೆರೆಯುವ ತಾವರೆ ಮಳೆಗಾಲದಲ್ಲಿ ಕೆಸರು ತುಂಬಿದ ಗುಂಡಿಗಳು, ಕುಂಟೆ, ಕೆರೆಗಳಲ್ಲಿ ಕಾಣಿಸಿಕೊಳ್ಳುವುದು ಸಹಜ. ಹೂ ಮೊಗ್ಗಾಗಿ ಅರಳಿರುವುದನ್ನು ಕಂಡರೆ ಆ ಕೆರೆಯ ಮತ್ತು ಕಲ್ಯಾಣಿಯ ಸೌಂದರ್ಯವನ್ನು ಹೆಚ್ಚಿಸುವಂತೆ ಆಗಿರುವುದು ಸ್ಥಳೀಯರಿಗೆ ಮತ್ತು ಹೂ ಪ್ರೀಯರಿಗೆ ಸಾಕಷ್ಟು ಮುದವನ್ನುಂಟು ಮಾಡಿದೆ.
_______________
1800 ಅಡಿಗಳಿಗೂ ಹೆಚ್ಚು ಬೋರ್‌ವೆಲ್ ಕೊರೆಸಿದರೂ ನೀರು ಸಿಗದ ಪರಿಸ್ಥಿತಿ ಒಂದೊಮ್ಮೆ ಇತ್ತು. ಅಂತರ್ಜಲ ಕುಸಿದಿದೆ ಎಂದುಕೊಂಡಿದ್ದವರಿಗೆ ಮಳೆಯು ವರವಾಗಿ ಕುಂದಾಣ ಹೋಬಳಿಯಾದ್ಯಂತ ಹಚ್ಛಹಸಿರಿನ ವಾತಾವರಣ ಸೃಷ್ಠಿಯಾಗಿದೆ. ಈ ಭಾಗದಲ್ಲಿ ಸಾಕಷ್ಟು ರೈತರು ಇರುವುದರಿಂದ ಎಲ್ಲಿ ನೋಡಿದರೂ ಹಸಿರಿನ ಹಾಸಿಗೆ ಕಾಣಸಿಗುತ್ತಿದೆ. ಅದರಂತೆ ಕೆರೆ-ಕುಂಟೆ ಮತ್ತು ನೀರಿರುವ ಜಾಗಗಳಲ್ಲಿ ಗುಚ್ಛಲು ರೀತಿಯಲ್ಲಿ ತಾವರೆ ಹೂಗಳು ಬೆಳೆದಿರುವುದು ನೋಡಿದರೆ ಸಂತಸವನ್ನುಂಟು ಮಾಡುತ್ತಿದೆ.
– ಚೈತ್ರ | ಉಪತಹಶೀಲ್ದಾರ್, ಕುಂದಾಣ ನಾಡಕಚೇರಿ
Be the first to comment