ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಹೆಚ್ಚಿನ ವಿದ್ಯಾಂವತರು ನೌಕರಿ ಪಡೆಯಲು ಅಥವಾ ಉದ್ಯಮಿಯಾಗಲು ಪ್ರಯತ್ನಿಸುತ್ತಿದ್ದು, ಕನಿಷ್ಠಪಕ್ಷ ತೋಟಗಾರಿಕೆ ಅಧ್ಯಯನ ಮಾಡಿದಂತವರಾದರೂ ಒಕ್ಕುಲುತನದಲ್ಲಿ ಅಭಿರುಚಿ ಬೆಳಸಿಕೊಳ್ಳುವುದಲ್ಲದೇ ಅದನ್ನು ನಿರಂತವಾಗಿರಿ ಉಳಿಸಿಕೊಂಡು ದೇಶದ ಕೃಷಿಯನ್ನು ಪ್ರಗತಿಯತ್ತ ಸಾಗಿಸಬೇಕೆಂದು ರಾಜ್ಯ ಪಾಲರಾದ ಥಾವರಚಂದ್ ಗೆಹ್ಲೋಟ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ನಡೆದ ತೋವಿವಿಯ 11ನೇ ಘಟಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ನಮ್ಮ ಭಾರತೀಯ ಹವಾಮಾನವು ಇತರೇ ದೇಶಗಳಿಗೆ ಹೋಲಿಸಿದಾಗ ನಮ್ಮ ಹವಾಮಾನವು ಅತ್ಯುತ್ತಮವಾಗಿದ್ದು, ಮಳೆಗಾಲ, ಚಳಿಗಾಲ ಮತ್ತು ಬೇಸಿಗೆ ಕಾಲದ ಋತುಮಾನಸಾರವಾಗಿ ವಿಭಿನ್ನ ಬೆಳೆಗಳನ್ನು ಬೆಳೆಯಲು ಅನೂಕೂಲವಾಗಿದೆ. ಇಂದಿಗೂ ಕೂಡಾ ನಮ್ಮ ದೇಶವು ಕೃಷಿ ಪ್ರಧಾನವಾಗಿದ್ದು, ಕೃಷಿ ಪದವೀದರರು ವಿವಿಧ ಪ್ರಯೋಗ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕು. ಈಗ ಕೃಷಿ ಭೂಮಿ ಇಲ್ಲದವರು ಕೂಡಾ ಗೋಡೆ ಮತ್ತು ಟೇರಸ್ ಗಾರ್ಡನ್, ತೋಟಗಾರಿಕೆ ಮಾಡತ್ತಿದ್ದು, ಈ ರೀತಿಯಾದಂತಂಹ ಆಧುನಿಕ ಕೃಷಿ ಪದ್ಧತಿ ಹೊರಹೊಮ್ಮ ಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕೃಷಿ ಸಚಿವ ಮುನಿತರ್ನ ರವರು ಮಾತನಾಡಿ ವಿದ್ಯಾರ್ಥಿಗಳು ತೋಟಗಾರಿಕೆಯಲ್ಲಿ ಕಲಿತಂತಹ ಜ್ಞಾನವನ್ನು ರೈತರ ಆದಾಯ ಹೆಚ್ಚಿಸುವಲ್ಲಿ ತೋಡಗಿಸಿ ತಂತ್ರಜ್ಞಾನವನ್ನು ರೈತರ ಜಮೀನುಗಳಿಗೆ ತಲುಪಿಸುವಲ್ಲಿ ಶ್ರಮಿಸಬೇಕಲ್ಲದೇ ಇಂದು ಪಡೆದಿರುವಂತಂಹ ಪದವಿ ಪದಕಗಳನ್ನು ದೇಶದ ಬೆನ್ನೆಲುಬು ಆಗಿರುವ ರೈತನಿಗೆ ಸರ್ಮಪಿಸಿರಿ, ಇಸ್ರೇಲ್ ಅತಿ ಸಣ್ಣ ಮತ್ತು ಕಡಿಮೆ ನೀರಾವರಿ ಹೊಂದ್ದಿದರು ಕೂಡಾ ಕೃಷಿಯಲ್ಲಿ ತನ್ನದೇಯಾದ ಛಾಪನ್ನು ಮೂಡಿರುಸುವದರಿಂದ ನಮ್ಮಲ್ಲಿ ಕೂಡಾ ಇಸ್ರೇಲ್ ಮಾದರಿ ಕೃಷಿ ಆಗಬೇಕಾಗಿದ್ದು, ರೈತರಿಗೆ ಅನಕೂಲವಾಗುವಂತಂಹ ಪದ್ಧತಿಗಳಲ್ಲಿ ನಾವೇಲ್ಲರೂ ತೊಡಗಿಸಿಕೊಳ್ಳೋನ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜೇಂದ್ರ ಸಿಂಗ್ ರವರು ಮಾತನಾಡಿ ನಗರೀಕರಣ, ವಾಣಿಜ್ಯಕರಣ, ಹಾಗೂ ಕೃಷಿ ಬೆಳವಣಿಗೆಯಿಂದಾಗಿ ನದಿ ಮತ್ತು ಇತರೆ ಜಲಮೂಲಗಳ ಅವ್ಯಾಹತವಾದ ಮಾಲಿನ್ಯ ಉಂಟಾಗುತ್ತದೆ. ಇದರಿಂದಾಗಿ ಕುಡಿಯುವ ನೀರು, ಇತರೆ ಉತ್ಪಾದಕರ ಚಟುವಟಿಕೆಗಳು ಹಾಗೂ ಕೃಷಿಗೆ ಶುದ್ಧ ನೀರಿನ ಕೊರತೆಯಾಗುತ್ತದೆ. ಮಲೀನ ನೀರಿನ ಬಳಕೆಯಿಂದಾಗಿ ರೋಗ ರುಜಿನ ಮತ್ತು ಹಣಕಾಸಿನ ಬವಣೆ ಉಂಟಾಗುತ್ತದೆ. ಮುಂದುವರೆದು ಮಾತಾನಾಡಿದ ಅವರು ಜಲ ಸಂಪನ್ಮೂಲ ಸಂರಕ್ಷಣೆ, ನಿರ್ವಹಣೆ ಹಾಗೂ ಸದ್ಭಳಕೆಯ ಬಗ್ಗೆ ವೈಜ್ಞಾನಿಕ ತಿಳುವಳಿಕೆಯ ಅವಶ್ಯಕತೆ ಇದ್ದು ನೈಸರ್ಗಿಕ ಸ್ವರೂಪ, ಲಭ್ಯತೆ, ಗುಣಮಟ್ಟ ಅವಕಾಶಗಳು ಹಾಗೂ ಇತಿಮಿತಿಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಬೇಕಾಗಿದೆ ಎಂದು ತಿಳಿಸಿದರು.
ಘಟಿಕೋತ್ಸವದಲ್ಲಿ ಹಿರಿಯೂರಿನ ಹೆಚ್.ಏಕಾಂತಯ್ಯನವರಿಗೆ ಗೌರವ ಡಾಕ್ಟರೇಟ್ ಹಾಗೂ ವಿವಿಧ ವಿಭಾಗಗಳ ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತೋವಿವಿಯಿಂದ 25 ಹಾಗೂ ದಾನಿಗಳು ಕೊಡ ಮಾಡುವ 52 ಒಟ್ಟು 77 ಚಿನ್ನದ ಪದಕಗಳನ್ನು ಈ ಘಟಿಕೋತ್ಸವದಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ತೋವಿವಿಯ ವ್ಯವಸ್ಥಾಪಮ ಮಂಡಳಿಯ ಸದಸ್ಯರು, ತೋವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ, ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಹಾಗೂ ತೋವಿವಿಯ ಬೋಧಕ, ಬೋದೆಕೇತರ ಸಿಬ್ಭಂದಿ ಇನ್ನಿತರು ಉಪಸ್ಥಿತರಿದ್ದರು.
Be the first to comment