ದಾವಣಗೆರೆ : ಕುರುಬ ಸಮಾಜದ ಇತಿಹಾಸ ಕುರಿತು ಒಂದು ದಿನದ ಚಿಂತನ ಮಂಥನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲು ಪೂರ್ವಭಾವಿ ಸಭೆಯನ್ನು ಮಾಜಿ ಸಚಿವ ಎಚ್ ಎಂ ರೇವಣ್ಣ ನೇತೃತ್ವದಲ್ಲಿ ನಡೆಯಿತು. ದಾವಣಗೆರೆ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಇಂದು ನಡೆದ ಕುರುಬ ಸಮುದಾಯದ ಮುಖಂಡರ ಸಭೆ ನಡೆಸಿ ಮಾತನಾಡಿದ ಮಾಜಿ ಸಚಿವ ಹೆಚ್ ಎಂ ರೇವಣ್ಣ, ಕುರುಬ ಸಮಾಜದ ಇತಿಹಾಸ, ಸಂಪ್ರದಾಯ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಸಮಾಜದವರು ನಡೆದುಕೊಂಡು ಬಂದ ದಾರಿ ಕುರಿತ ಕುರುಬರ ಸಾಂಸ್ಕೃತಿಕ ಗ್ರಂಥಗಳನ್ನು ಕುರುಬರ ಸಾಂಸ್ಕೃತಿಕ ಪರಿಷತ್ ಬೆಂಗಳೂರು ಮತ್ತು ದಾವಣಗೆರೆ ಕುರುಬ ಸಮಾಜದ ಎಲ್ಲಾ ಸಂಘಟನೆಗಳು ಸಂಯುಕ್ತಾಶ್ರಯದಲ್ಲಿ ದಾವಣಗೆರೆ ನಗರದಲ್ಲಿ ಬಿಡುಗಡೆ ಕಾರ್ಯಕ್ರಮವನ್ನು ಜೂನ್ 10 ಮತ್ತು 11 ರಂದು ಅಥವಾ 24 ಅಥವಾ 25 ರಂದು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಪುಸ್ತಕ ಪ್ರತಿಯೊಬ್ಬ ಕುರುಬ ಸಮಾಜದವರಿಗೆ ತಲುಪುವ ಅವಶ್ಯಕತೆ ಇದೆ. ಈ ಪುಸ್ತಕ ಹಲವು ಸಂಶೋಧಕರ ಶ್ರಮದಿಂದ ಹೊರ ಬಂದಿದೆ. ಇದರಲ್ಲಿ ಸಮಾಜದ ಇತಿಹಾಸ ಪುರುಷರ ಹಾಗೂ ಸಮಾಜದ ಮುಖಂಡರು ಕುರಿತು ಕೂಡ ಮಾಹಿತಿ ಇದೆ. ದಾವಣಗೆರೆ ಜಿಲ್ಲೆಯಲ್ಲಿ ನಡೆದ ಕುರುಬ ಸಮಾಜದ ಐತಿಹಾಸಿಕ ಸಭೆಗಳಿಂದ ರಾಜ್ಯ ಮಟ್ಟದಲ್ಲಿ ಸಮಾಜದ ಮಠ ಆಗಿದೆ, ಸಮಾಜದ ಮುಖಂಡರಾದ ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೂ ಹೀಗೆ ದಾವಣಗೆರೆಯಲ್ಲಿ ನಡೆದ ಹಲವು ಕಾರ್ಯಕ್ರಮಗಳು ರಾಜ್ಯದ ಇತಿಹಾಸ ಪುಟ ಸೇರಿವೆ ಎಂದು ನೆನಪಿಸಿದ ಮಾಜಿ ಸಚಿವ ರೇವಣ್ಣ ಈ ಕಾರ್ಯಕ್ರಮದ ಜೊತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶ ಕಳವಳಕಾರಿಯಾಗಿದೆ. ಈ ಮೀಸಲಾತಿ ಕುರಿತು ಅಂದು ಮಧ್ಯಾಹ್ನ 2 ಗಂಟೆಯಿಂದ ವಿಚಾರ ಸಂಕೀರ್ಣ ಏರ್ಪಡಿಸಲಾಗುವುದು ಈ ಕಾರ್ಯಾಗಾರದಲ್ಲಿ ನಾಡಿನ ವಿಚಾರವಾದಿಗಳು ಭಾಗವಹಿಸುವರು ಈ ಕಾರ್ಯಕ್ರಮದಲ್ಲಿ ವಿದ್ಯಾವಂತರು ವಿಚಾರವಂತವರು ಭಾಗವಹಿಸ ಬೇಕೆಂದರು. ಇದೇ ಸಂಧರ್ಭದಲ್ಲಿ ಮಾತನಾಡಿದ ಹರಿಹರ ಶಾಸಕ ಎಸ್ ರಾಮಪ್ಪ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಮಾಜದ ಯುವಕರು ಮತ್ತು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಮತ್ತು ಕಾರ್ಯಕ್ರಮದ ಯಶಸ್ವಿಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜದ ಹಿರಿಯ ಮುಖಂಡ ಬಿ ಎಂ ಸತೀಶ್, ಸ್ಥಳೀಯ ಸಾಹಿತಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಮತ್ತು ಪ್ರಸ್ತುತ ಎದುರಾಗಿರುವ ಮೀಸಲಾತಿ ಸಮಸ್ಯೆ ಕುರಿತು ಚರ್ಚೆ ಮಾಡುವ ಅವಶ್ಯಕತೆ ಇದೆ ಎಂದ ಅವರು ಸಮಾಜದ ಏಳಿಗೆಗೆ ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮಗಳನ್ನು ವಿವರಿಸಿದರು. ಇದೆ ವೇಳೆ ಸಭೆಯಲ್ಲಿ ನಡೆಯಲಿರುವ ವಿಚಾರ ಸಂಕೀರ್ಣ ಕಾರ್ಯಕ್ರಮಕ್ಕೆ ಸಮಿತಿ ರಚನೆ ಮಾಡಲಾಯಿತು. ಸಮಿತಿಯ ಗೌರವಧ್ಯಕ್ಷರಾಗಿ ಶಾಸಕ ಎಸ್ ರಾಮಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಮಾಜದ ಹಿರಿಯ ಮುಖಂಡ ಬಿ ಎಂ ಸತೀಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪುಟ್ ಬಾಲ್ ಗಿರೀಶ್ ಸೇರಿದಂತೆ ಹಲವರನ್ನು ಸಮಿತಿಗೆ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಪಿ ರಾಜಕುಮಾರ್, ಬಳ್ಳಾರಿ ಪಣ್ಮಖಪ್ಪ, ಗೋಣೆಪ್ಪ, ದಿಳ್ಳೇಪ್ಪ. ಪ್ರೋ, ಯಲ್ಲಪ್ಪ, ವಿರೂಪಾಕ್ಷಪ್ಪ,ಕುಣೆಬೆಳಕೆರೆ ದೇವೇಂದ್ರಪ್ಪ, ನಂದಿಗಾವಿ ಶ್ರೀನಿವಾಸ್. ಅಡಾಣಿ ಸಿದ್ದಪ್ಪ, ಮಾಜಿ ಜಿ.ಪ. ಸದಸ್ಯರಾದ ಪರಶುರಾಮಪ್ಪ, ಜೆ ಸಿ ನಿಂಗಪ್ಪ. ಪಿ ಗಂಗಾಧರ್. ಪತ್ರಕರ್ತರಾದ ಮಲ್ಲೇಶಪ್ಪ ಬಿ ಬಿ. ಪ್ರಸನ್ನ ಬೆಳಕೆರೆ. ವಿನಯ್ ಜೋಗಪ್ಪನವರ್ ಹಾಗೂ ಕನಕ ನೌಕರರ ಸಂಘದ ಗೌರವ ಅಧ್ಯಕ್ಷರಾದ ಹಾಲೇಶಪ್ಪ, ಪದಾಧಿಕಾರಿಗಳಾದ ಗಣೇಶ್ ದಳವಾಯಿ, ಎಸ್ ಎಚ್ ಗುರುಮೂರ್ತಿ. ರಂಗನಾಥ್, ಬೀರೇಂದ್ರ ಸೇರಿದಂತೆ ಸಮಾಜದ ಇತರೆ ಮುಖಂಡರು ಭಾಗವಹಿಸಿದ್ದರು. ಸಭೆ ಆರಂಭದಲ್ಲಿ ಇತ್ತೀಚಿಗೆ ನಿಧನ ಹೊಂದಿದ ದಿವಂಗತ ಚನ್ನಯ್ಯ ಒಡೆಯರ್ ಪತ್ನಿ ಹಾಲಮ್ಮನವರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
Be the first to comment