ಭಟ್ಕಳ:
ತಾಲೂಕಿನ ಮುಟ್ಟಳ್ಳಿ ಗ್ರಾಮದ ಸರ್ವೆ ನಂ.220ರಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಡಾ. ಸುಮಂತ್ ಬಿ.ಇ. ಅವರ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳ ತಂಡ ದಾಳಿ ನಡೆಸಿ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಿ ಅವರು ಬಳಸುತ್ತಿದ್ದ ಯಂತ್ರಗಳನ್ನು ವಶಕ್ಕೆ ಪಡೆದುಕೊಂಡಿರುವ ಪ್ರಸಂಗ ನಡೆದಿದೆ.
ಮುಟ್ಟಳ್ಳಿಯಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ತಹಸೀಲ್ದಾರ್ ಡಾ. ಸುಮಂತ್ ಬಿ.ಇ., ಭಟ್ಕಳ್ ಕಂದಾಯ ನಿರೀಕ್ಷಕ ವಿಶ್ವನಾಥ್ ಗಾವಂಕರ್, ಗ್ರಾಮ ಲೆಕ್ಕಾಧಿಕಾರಿ ,ಹಾಗೂ ಗ್ರಾಮ ಸಹಾಯಕರು ಕಲ್ಲು ಕ್ವಾರಿಯಲ್ಲಿ ಬಳಸುತ್ತಿದ್ದ ಟಿಲ್ಲರ್ ಯಂತ್ರಗಳನ್ನು ವಶಕ್ಕೆ ಪಡೆದು ಭಟ್ಕಳ್ ಗ್ರಾಮೀಣ ಠಾಣೆಗೆ ಒಪ್ಪಿಸಿದ್ದಾರೆ.
ಅದೇ ರೀತಿ, ಯಾವುದೇ ಪರವಾನಿಗೆಯಿಲ್ಲದೇ ತಾಲೂಕಿನ ಮಾವಳ್ಳಿ-2 ಗ್ರಾಮದ ಸ.ನಂ. 740/1ರ ಮಾಲ್ಕಿ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರು ಬಂದಿದ್ದು ಅಲ್ಲಿಯೂ ಕೂಡ ತಹಸೀಲ್ದಾರ್ ಸುಮಂತ್ , ಮಾವಳ್ಳಿ ಕಂದಾಯ ನಿರೀಕ್ಷಕ ಶ್ರೀನಿವಾಸ, ಗ್ರಾಮ ಲೆಕ್ಕಾಧಿಕಾರಿ ಚರಣ್ ಗೌಡ ಕೂಡಾ ಕೆಂಪು ಕಲ್ಲು ಗಣಿಗಾರಿಕೆಗೆ ಸ್ಥಳಕೆ ದಾಳಿ ಮಾಡಿ ಬಳಸುತ್ತಿದ್ದ ಟಿಲ್ಲರ್ ಯಂತ್ರವನ್ನು ಜಪ್ತು ಮಾಡಿ ಮುರ್ಡೇಶ್ವರ ಠಾಣೆಗೆ ಒಪ್ಪಿಸಿರುವುದಾಗಿ ತಿಳಿದು ಬಂದಿದೆ.
Be the first to comment