ಭಟ್ಕಳ ತಾಲೂಕ ಸಿ.ಐ.ಟಿ.ಯು ಸಮಿತಿಯಿಂದ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶಾಸಕ ಸುನೀಲ್ ನಾಯ್ಕ ಅವರಿಗೆ ಮನವಿ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ಜಿಲ್ಲಾ ಸುದ್ದಿಗಳು 

ಭಟ್ಕಳ

ಟ್ಕಳ ತಾಲೂಕಿನಲ್ಲಿ 60 ವರ್ಷದ ನಿವೃತ್ತಿ ನೆಪವನ್ನು ಮುಂದಿಟ್ಟುಕೊಂಡು 19 ವರ್ಷಗಳ ಕಾಲ ನಿರಂತರವಾಗಿ ಶಿಕ್ಷಣ ಇಲಾಖೆಯ ಸರ್ಕಾರಿ ಮತ್ತು ಅನುಧಾನಿತ ಶಾಲೆ ಕರ್ತವ್ಯ ನಿರ್ವಹಿಸುತ್ತಿದ್ದ ಅಡುಗೆಯವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿರುವುದನ್ನು ವಿರೋದಿಸಿ ಅಕ್ಷರ ದಾಸೋಹ ನೌಕರರ ಸಂಘದ ಭಟ್ಕಳ ಘಟಕವು ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ಸುನಿಲ್‌ ನಾಯ್ಕ ಅವರಿಗೆ ಮನವಿಯನ್ನು ಸಲ್ಲಿಸಿದರು.

CHETAN KENDULI

ಸತತ 19 ವರ್ಷಗಳ ವರೆಗೆ ಈ ಮಹಿಳೆಯರಿಂದ ಸೇವೆಯನ್ನು ಪಡೆದುಕೊಂಡು ಈಗ ಏಕಾಏಕಿ ನಿವೃತ್ತಿ ನೇಪವನ್ನು ಮುಂದಿಟ್ಟುಕೊಂಡು ಸೇವೆಯಿಂದ ಬಿಡುಗಡೆ ಗೊಳಿಸಿದ್ದಾರೆ 2001-02 ರಲ್ಲಿ ಅಡುಗೆ ಕೆಲಸಕಕೆ ಸೇರ್ಪಡೆ ಮಾಡಿಕೊಳ್ಳುವಾಗ ವಿಧ್ಯಾಭ್ಯಾಸ ಮತ್ತು ವಯಸ್ಸಿನ ಅರ್ಹತೆ ಮಾತ್ರ ನಿಗದಿ ಮಾಡಲಾಗಿತ್ತು ಅದರಲ್ಲಿ ನಿವೃತ್ತಿ ವಯಸ್ಸನ್ನು ಸರ್ಕಾರದ ಕೈಪಿಡಿಯಲ್ಲಿ ನಿಗದಿಪಡಿಸಿರುವುದಿಲ್ಲಾ ಅಕ್ಷರದಾಸೋಹ ನೌಕರರ ಸಂಘ 2016 ರಿಂದಲೂ ವಯಸ್ಸಿನ ಆದರದಲ್ಲಿ ನಿವೃತ್ತಿ ಸೌಲಬ್ಯ ಕೊಡ ಬೇಕು ಎಂದು ಹಲವಾರು ಬಾರಿ ಸರಕಾರಕ್ಕೆ ಮತ್ತು ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡರು ಇದರ ಬಗ್ಗೆ ಸರಕಾರವಾಗಲಿ ಶಿಕ್ಷಣ ಇಲಾಖೆಯಾಗಲಿ ಹೆಚ್ಚಿನ ಮುತುವರ್ಜಿ ವಹಿಸಲಿಲ್ಲಾ . ಆದರೆ ಬಿಸಿಯೂಟ ನೌಕರರ ನಿವೃತ್ತಿ ವಿಷಯಕ್ಕೆ ಸಂಬಂದಿಸಿದಂತೆ ಶಿಕ್ಷಣ ಇಲಾಖೆಯ ಸಚಿವರೊಂದಿಗೆ ಶಿಕ್ಷಣ ಇಲಾಖಾ ಪ್ರಧಾನ ಕಾರ್ಯದರ್ಶಿ ಆಯುಕ್ತರು ಎಲ್‌ ಐ ಸಿ ಪಿಂಚಣಿ ವಿಭಾಗದ ಮುಖ್ಯಸ್ಥರು ಹಾಗು ಸಂಘಟನೆಯ ಮುಖಂಡರೊಂದಿಗೆ ಜಂಟಿಯಾಗಿ ಹಲವು ಭಾರಿ ಸಭೇಯಲ್ಲಿ ಬಿಸಿಯೂಟ ನೌಕರರ ವೇತನದಲ್ಲಿ ರೂ 100 ಹಾಗು ಸರ್ಕಾರ ರೂ 100 ನೀಡಿ ಈ ಹಣವನ್ನು ಎಲ್‌ ಐ ಸಿ ಮುಖಾಂತರ ವಿಷೇಶ ಪಿಂಚಣಿ ಯೋಜನೆಯನ್ನು ರೂಪಿಸಲು ಒಪ್ಪಿಗೆ ಸೂಚಿಸಲಾಗಿತ್ತು ಹಾಗು ಇಲಾಖಾ ಅಧಿಕಾರಿ ಮತ್ತು ನಮ್ಮ ಸಂಘಟನೆಯ ಮುಖಂಡರನ್ನು ಒಳಗೊಂಡಂತೆ ಸಮಿತಿಯೊಂದನ್ನು ರಚನೆ ಮಾಡಲಾಗಿತ್ತು . ಆದರೆ ಈ ಎಲ್ಲಾ ಕ್ರಮ ಜಾರಿಯಾಗುವ ಮೊದಲೆ ಸರಕಾರ ಏಕಾಏಕಿ ಬಿಸಿಯೂಟ ನೌಕರರನ್ನು ಕೆಲಸದಿಂದ ನಿವೃತ್ತಿ ಮಾಡುತ್ತಿರುವುದು ಅಮಾನವಿಯ ಮಹಿಳಾ ವಿರೋದಿ ದೋರಣೆಯಾಗಿದೆ ಇದರಿಂದಾಗಿ ರಾಜ್ಯದಲ್ಲಿ 11000 ದಿಂದ 12000 ನೌಕರರು ನಿವೃತ್ತಿ ಸೌಲಬ್ಯವಿಲ್ಲದೆ ಕೆಲಸದಿಂದ ತೆಗೆದು ಹಾಕುವ ಕೆಲಸಕ್ಕೆ ಮುಂದಾಗಿದೆ ಇದನ್ನು ನಮ್ಮ ಸಂಘಟನೆ ತಿವೃವಾಗಿ ಖಂಡಿಸುತ್ತದೆ ಸರ್ಕಾರ ಈ ಸುತ್ತೋಲೆಯನ್ನು ಈ ಕೂಡಲೆ ಹಿಂಪಡೆಯ ಬೇಕು ಬಡ ವಿದವಾ ಅಲ್ಪ ಸಂಖ್ಯಾತ ದಲಿತ ಕೂಲಿಕಾರ ಮಹಿಳೆಯರಿಗೆ ನ್ಯಾಯ ಒದಗಿಸಬೇಕು ಈ ಮಹಿಳೆಯರಿಗೆ ನಿರ್ವತ್ತಿ ವೇತನ ನೀಡಬೇಕು ಬಿಸಿಯೂಟ ಯೋಜನೆ ಖಾಯಂ ಮಾಡಬೇಕು ಹೀಗೆ ಅನೇಕ ಬೇಡಿಕೆಯನ್ನು ಮುಂದಿಟ್ಟುಕೊಂಡು ತಾಲೂಕಿ ಶಿರಾಲಿಯಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ಶಾಸಕ ಸುನಿಲ್‌ ನಾಯ್ಕ ಅವರಿಗೆ ಮನವಿಯನ್ನು ನೀಡಲಾಯಿತು .ಈ ಸಂದರ್ಬದಲ್ಲಿ ಸಿ ಐ ಟಿ ಯು ತಾಲೂಕ ಅಧ್ಯಕ್ಷರಾದ ಪುಂಡಲಿಕ್‌ ನಾಯ್ಕ ಮತ್ತು ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷರು ಪಧಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*