ಲಿಂಗಸುಗೂರ ವರದಿ. ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಅಧಿಕಾರಿಗಳಾದ 1 ) ಪ್ರಕಾಶ ಪ್ರಸ್ತುತ ಕಾರ್ಯಾನಿರ್ವಾಹಕ ನಿರ್ದೇಶಕರು ಮತ್ತು 2 ) ಟಿ ರವಿಕುಮಾರ್ ಹಾಗೂ ಸಿ ) ಎ.ಆರ್ . ವಾಲ್ಮೀಕಿ ರಿಟೇಡರ್ , ಎಕ್ಯೂಟಿವ್ ಡೈರೆಕ್ಟರ್ , 4 ) ಬಿಜೆ ಕುಲಕರ್ಣಿ ರಿಟೇಡರ್ , ಡಿಜಿಎಂ ( ಇಜಿನಿಯರ ) , 5 ) ಸೈಯಾದ್ ಜೀಲಾನಿ ರಿಟೇಡರ್ ಡಿವೈ , ಮ್ಯಾನೇಜರ್ ( ಮೆಕನಿಕಲ್ ) ಈ 5 ಜನರು ಹಟ್ಟಿ ಚಿನ್ನದ ಗಣಿಯನ್ನು ಸಂಪೂರ್ಣ ಲೂಟಿ ಮಾಡಿರುತ್ತಾರೆ : ಇಂತಹ ಭ್ರಷ್ಟ ಅಧಿಕಾರಿಗಳನ್ನು ಜೈಲಿಗೆ ಕಳಿಸಬೇಕು . ಲೂಟಿ ಮಾಡಿದ ಹಣವನ್ನು ಸರಕಾರದ ಖಾಜಾನಿಗೆ ಹಿಂದುರುಗಿಸಬೇಕು ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಅಪಚಾರ ವೆಸಗಿದಂತಾಗಿದೆ . ಈ ಭ್ರಷ್ಟ ಅಧಿಕಾರಿಗಳು ಸೇರಿಕೊಂಡು ಅಂದಾಜು 100 ಕೋಟಿ ಅಧಿಕ ಹಣ ಅವ್ಯವಾಹರಗಳು ಮಾಡಿದ್ದು ಸಮಸ್ತ ಕಾರ್ಮಿಕರಿಗೆ ಅನ್ಯಾಯ ಮಾಡಿದ್ದಾರೆ ಎಂದು 24-06-2018 ರಂದು 100 ಕೋಟಿಗಿಂತ ಹೆಚ್ಚು ಹಣವನ್ನು ದುರೋಪಯೋಗ ಮಾಡಿದ್ದರೆ ಬೋರ್ಡ ಮಿಟಿಂಗ್‌ನಲ್ಲಿ ಸಾಬಿತ್ತು ಆಗಿ ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆದೇಶ ಮಾಡಿ 4 ವರ್ಷ ಕಳೆದರು ಕೂಡ ಇಂತಹ ಭ್ರಷ್ಟ ಅಧಿಕಾರಿಗಳ ಯಾವುದೇ ಕ್ರಮ ತೆಗೆದುಕೊಂಡಿಲ್ಲಾ ಬದಲಿಗೆ ಅವರಿಗೆ ಮುಂಬಡ್ತಿ ಕೊಟ್ಟು ಇನ್ನು ಹಣವನ್ನು ಲೂಟಿ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ . ಹಟ್ಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕಂಪನಿಯ ಅಧ್ಯಕ್ಷರಾದ ಮಾನಪ್ಪ ಡಿ.ವಜ್ಜಲ ಕೂಡಲೇ ಇಂತ ಭ್ರಷ್ಟರ ಮೇಲೆ ಕ್ರಮ ತೆಗೆದುಕೊಂಡು ಕೆಲಸದಿಂದ ವಜಾ ಮಾಡಿ ಜೈಲಿಗೆ ಕಳಿಸಬೇಕು . ಇಲ್ಲದಿದ್ದಲ್ಲಿ ನಾವು ಕನ್ನಡ ಸೇನೆ , ಕರ್ನಾಟಕ ಸಂಘಟನೆಯು ಉಗ್ರ ಹೋರಾಟ ಮಾಡುತ್ತೇವೆ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ . ಲಿಂಗಸಗೂರು ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದರು ಈ ಸಂದರ್ಭದಲ್ಲಿ ಶಿವು ಕೆಂಪು.ಅಮರೇಶ. ಮುತ್ತು. ಅದಪ್ಪ ನಾಯಕ. ದುರಗೇಶ ಶರಣೋಜಿ ಪವಾರ ಕನ್ನಡ ಸೇನೆ ಕರ್ನಾಟಕ ತಾಲೂಕು ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು
Be the first to comment