ಯಾದಗಿರಿ ಜಿಲ್ಲೆಯ ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕ್ಷೇತ್ರದ ಮಕ್ಕಳ ಪೋಷಕರ ಪರವಾಗಿ ಮತ್ತು ಶಿಕ್ಷಣ ಪ್ರೇಮಿಗಳ ಪರವಾಗಿ ಒಂದು ಪ್ರಶ್ನೆ?
ಗುರಮಿಠಕಲ್ ಶಾಸಕರು, ಅವರ ಪುತ್ರ, ಅವರ ತಂಡದವರು ಸಹಾಯದ ನೆಪದಲ್ಲಿ ಇನ್ನೂ ಪ್ರೌಢಿಮೆಗೆ ಬರದ ಮಕ್ಕಳಿಂದ ತಮ್ಮ ರಾಜಕೀಯ ಲಾಭಕ್ಕೆ ಹೇಳಿಕೆ ಪಡೆದುಕೊಳ್ಳುತ್ತಿರುವುದು ಮತ್ತು ಏನು ತಿಳಿಯದ ಶಾಲೆಯ ಮಕ್ಕಳಿಗೆ ರಾಜಕೀಯ ಉದ್ದೇಶವನ್ನಿಟ್ಟುಕೊಂಡು ಪರೀಕ್ಷೆ ಕಿಟ್ ಹಂಚಿಕೆ ಮಾಡುತ್ತಿರುವುನ್ನು ನೋಡಿ ನೋಡದಂತೆ ಕಣ್ಮುಚ್ಚಿ ಕುಳಿತಿರುವ ಶಿಕ್ಷಣ ಇಲಾಖೆಯ ಆಧಿಕಾರಿಗಳೇ ಏನು ಇದರಲ್ಲಿ ಶಮೀಲಾಗಿದ್ದೀರಿಯೇ ಎನ್ನುವ ಭಾವನೆ ಕ್ಷೇತ್ರದ ಮಕ್ಕಳ ಪೋಷಕರಲ್ಲಿ ಮೂಡುತ್ತಿದೆ, ಅಥವಾ ಮೇಲೆ ನಮೂದಿಸಿದ ಅಧಿಕಾರಿಗಳ ಗಮನಕ್ಕಿಟ್ಟು ಶಾಸಕರು ಮತ್ತು ಪುತ್ರರು ಚುನಾವಣೆ ಪ್ರಚಾರ ಪೂರ್ವಭಾವಿಯಾಗಿ ಮಾಡುತ್ತಿದ್ದಾರೆಯೇ ಅಥವಾ ನಿಮ್ಮ ಗಮನಿಕ್ಕಿಲ್ಲವೆ?
https://m.facebook.com/story.php?story_fbid=2751084148530155&id=100008857898521&sfnsn=wiwspmo
ಒಂದು ವೇಳೆ ಅವರು ಸಹಾಯ ಮಾಡಿದರು ಮತ್ತು ಅದಕ್ಕೆ ನಿಮ್ಮ ಬೆಂಬಲವಿದ್ದರು ಆ ಕೈಚೀಲದ ಮೇಲೆ ಶಾಸಕರ ಭಾವಚಿತ್ರ ಮತ್ತು ಅವರ ಪುತ್ರನ ಭಾವಚಿತ್ರ ಹಾಕಿ ಕೊಟ್ಟಿರುವುದು ಖಂಡನೀಯ ಮತ್ತು ಮಕ್ಕಳು ಶಿಕ್ಷಣಕ್ಕೆ ಒತ್ತು ಕೊಡುವುದು ಬಿಟ್ಟು ಮಕ್ಕಳ ಮುಗ್ಧತೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಕೆಲಸ ನಡೆಯುತ್ತಿದೆ,
https://m.facebook.com/story.php?story_fbid=2751084148530155&id=100008857898521&sfnsn=wiwspmo
ಇದಲ್ಲದೆ ಒತ್ತಾಯಪೂರ್ವಕವಾಗಿ ಒಂದು ಕಾಗದದ ಮೇಲೆ ಬರೆದು ವಿದ್ಯಾರ್ಥಿಗಳ ಬಾಯಲ್ಲಿ ಭಾಷಣ ಮಾಡಿಸುತ್ತಿರುವ ಜೆಡಿಎಸ್ ಕಾರ್ಯಕರ್ತರು
ಈ ಬಗ್ಗೆ ಗಮನಹರಿಸ ಬೇಕಾದ ಜಿಲ್ಲಾ ಮತ್ತು ತಾಲೂಕು ಶಿಕ್ಷಣ ಅಧಿಕಾರಿಗಳು ಇದ್ದು ಇಲ್ಲದಂತಾಗಿದೆ ಮತ್ತು ಗುರಮಿಠಕಲ್ ಮತಕ್ಷೇತ್ರದಲ್ಲಿ ವಿರೋಧ ಪಕ್ಷದ ನಾಯಕರು ಇದ್ದು ಇಲ್ಲಂದಂತಾಗಿದ್ದಾರೆ,
ಮಾನ್ಯ ಶಾಸಕರೇ ಮತ್ತು ಅವರ ಪುತ್ರರೇ ನಿಮಗೂ ಈ ಕೀಳುಮಟ್ಟದ ರಾಜಕೀಯವನ್ನು ನಿಲ್ಲಿಸುವಂತೆ ನಿಮ್ಮ ಕಾಯ೯ಕತ೯ರಿಗೆ ತಿಳಿಹೇಳಲು ಆಗುತ್ತಿಲ್ಲವೇ ಅಥವಾ ಇದರ ಹಿಂದಿನ ಮಾಸ್ಟರ್ ಮೈಂಡ್ ನೀವುಗಳೇ ಎಂಬುದನ್ನು ಕ್ಷೇತ್ರದ ಜನರಿಗೆ ತಿಳಿಸಿ
ಅದು ಬ್ಯಾರೇನೆ ಐತಿ
ಅಂಜನೇಯ ಕಟ್ಟಿಮನಿ ರಾಂಪೂರ
ಜಿಲ್ಲಾ ಉಪಾಧ್ಯಕ್ಷರು
ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಯಾದಗಿರಿ ಜಿಲ್ಲೆ
Be the first to comment