ರಾಜ್ಯ ಸುದ್ದಿಗಳು
ಬೆಂಗಳೂರು
ಇತ್ತೀಚೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿತ್ತು. ಎಸಿಬಿ ದಾಳಿಯ ಬಳಿಕ ಪಾಲಿಕೆ ವಿರುದ್ಧ ಎಸಿಬಿಗೆ ನೂರಾರು ದೂರುಗಳು ಹರಿದು ಬರುತ್ತಿವೆ.ಎಸಿಬಿಗೆ ಬಿಬಿಎಂಪಿಯ ಟಿಡಿಆರ್, ಡಿಆರ್ ಸಿ ಗೆ ಸಂಬಂಧಿಸಿದ ದೂರುಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಎಸಿಬಿ ಇದೀಗ 2018 ರಿಂದು 2022 ರವರೆಗಿನ ತೆರಿಗೆ ವಂಚನೆ ಸಂಬಂಧ ಮಾಹಿತಿ ಕಲೆ ಹಾಕುತ್ತಿದೆ. ಟ್ಯಾಕ್ಸ್ ವಿಭಾಗದಲ್ಲೇ ಸುಮಾರು 1 ಸಾವಿರ ಕೋಟಿಯಷ್ಟು ತೆರಿಗೆ ವಂಚನೆಯಾಗಿರುವ ಮಾಹಿತಿ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಟೌನ್ ಪ್ಲ್ಯಾನಿಂಗ್ ಹಾಗೂ ಟ್ಯಾಕ್ಸ್ ವಿಭಾಗವನ್ನು ಒಗ್ಗೂಡಿಸಿ ಕಡತಗಳನ್ನು ಪರಿಶೀಲಿಸಲು ಎಸಿಬಿ ಮುಂದಾಗಿದೆ. ಅದರಲ್ಲೂ 10 ಅಂತಸ್ತಿಗಿಂತ ಹೆಚ್ಚು ಅಂತಸ್ತುಗಳಿರುವ ಕಟ್ಟಡಗಳನ್ನೇ ಟಾರ್ಗೆಟ್ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ. ಮಾರತ್ತಹಳ್ಳಿ, ವೈಟ್ ಫೀಲ್ಡ್, ಹೆಚ್ ಎಸ್ ಆರ್ ಲೇಔಟ್, ಮಹದೇವಪುರ, ಬೊಮ್ಮನಹಳ್ಳಿ ಭಾಗದಲ್ಲೇ ದೊಡ್ಡ ದೊಡ್ಡ ಕಟ್ಟಡಗಳ ಮಾಲೀಕರು ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.ಸರ್ವೆ ಇಂಜಿನಿಯರ್ ಗಳ ಕುಮ್ಮಕ್ಕಿನಿಂದಲೇ ಬಿಲ್ಡರ್ ಗಳೂ ಮತ್ತು ಕಟ್ಟಡ ಮಾಲೀಕರು ತೆರಿಗೆ ವಂಚಿಸುತ್ತಿದ್ದಾರೆ. ಎಸಿಬಿ ತನಿಖೆ ಹಿನ್ನೆಲೆಯಲ್ಲಿ 2018 ರಿಂದ ಇಲ್ಲಿಯವರೆಗೆ ಪಾಲಿಕೆಯಲ್ಲಿ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳಿಗೆ ನಡುಕ ಶುರುವಾಗಿದ್ದು, ಸದ್ಯದಲ್ಲೇ ನುಂಗಣ್ಣರ ನಿಜ ಭವಿಷ್ಯವನ್ನು ಎಸಿಬಿ ಬಯಲಿಗೆ ತರಲಿದೆ.
Be the first to comment