ಕಾಶೀ ನಗರದ ಹನುಮಾನ್ ಘಾಟ, ಛೇದ್ ಸಿಂಗ ಪ್ಯಾಲೆಸ್ ಅವರಣದಲ್ಲಿ.
ಕಾರ್ತೀಕ ಮಾಸದ ಪ್ರಮೂಖ್ಯವನ್ನು ಜನರಿಗೆ ಅರಿವುಮಾಡಲು ಮೈಸೂರಿನ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿ ಅವರು ಉತ್ತರ ಪ್ರದೇಶದ ಕಾಶೀ ಕ್ಷೇತ್ರದಲ್ಲಿ 10 ದಿನಗಳ ಕಾಲ ಪ್ರವಚವನ್ನು ಹಮ್ಮಿಕೊಂಡಿದ್ದರು.
ಕಾಶಿ ಖಂಡ , ಶಿವ ಪುರಾಣ ಮುಂತಾದ ಪ್ರವಚನಗಳನ್ನು ಹಮ್ಮಿಕೊಂಡಿದ್ದು ಜನರಿಗೆ ಒಳ್ಳೆಯ ಉಪದೇಶಗಳನ್ನು ನೀಡಿದರು .
ಈ ಕಾರ್ಯಕ್ರಮಕ್ಕೆ ಆಂದ್ರಪ್ರದೇಶದ, ತೆಲಂಗಾಣ , ಕರ್ನಾಟಕ , ತಮಿಳುನಾಡು ಭಕ್ತರು ಲಕ್ಷಾಂತರ ಜನ ಸೇರಿರುವುದು ಆಶ್ಚರ್ಯಕರವಾಗಿತ್ತು , ಉಚಿತ ಊಟದ ವ್ಯವಸ್ಥೆಯನ್ನು ಮೈಸೂರು ಮಠದ ಕಡೆಯಿಂದ ಆಯೋಜಿಸಲಾಗಿತ್ತು .
ಈ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಪ್ರಮುಖ ರಾಜಕೀಯ ವ್ಯಕ್ತಿಗಳು ಬಾಗವಹಿಸಿದ್ದರು, ಇದೇ ತಿಂಗಳು ಕಡೆಯ ಶೊಮವಾರ ಪ್ರವಚನ ಮುಕ್ತವಾಗಿದ್ದು ಮುಕ್ತಾಯಕ್ಕೆ ಆಂದ್ರಪ್ರದೇಶದ ಮತ್ತು ತೆಲಂಗಾಣದ
ಬಿಜೆಪಿಯ ಕಾರ್ಯದರ್ಶಿ ಗಳು ಹಾಜರಿದ್ದರು.
ಕಾಶಿಯಲ್ಲಿ ಮೈಸೂರು ಶ್ರೀ ಅವಧೂತ ದತ್ತ ಪೀಠಾಧಿಪತಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು ಲೋಕ ಕಲ್ಯಾಣಕ್ಕಾಗಿ ಸರ್ವರಿಗೂ ಭಗವಂತ ಒಳಿತನ್ನುಂಟು ಮಾಡಲೆಂದು ನೆರವೇರಿಸುತ್ತಿರುವ ಅತಿರುದ್ರ ಯಾಗ ಈ ತಿಂಗಳ 13 ರಿಂದ 24ರವರೆಗೆ ಗಂಗಾ ನದಿಯ ಹತ್ತಿರ ಹನುಮಾನ್ ಘಾಟ್ ಬಳಿ , ಛೆದ್ ಸಿಂಗ್ ಪ್ಯಾಲೆಸ್ ಹತ್ತಿರ ಅತ್ಯಂತ ವೈಭೋಗವಾಗಿ ನೆರವೇರಿತು.
ಭಾರತದೇಶದ ಮೂಲೇ ಮೂಲೆಯಿಂದ ಸಾವಿರಾರು ಭಕ್ತರು ಈ ಅತಿರುದ್ರ ಯಾಗದಲ್ಲಿ ಪಾಲ್ಗೊಳ್ಳಲು, ಕಣ್ತುಂಬಿಕೊಳ್ಳಲು ಸ್ವತಃ ಕಾರ್ಯಕ್ರಮವನ್ನು ನೋಡಲು ಸಾವಿರಾರು ಭಕ್ತರು ಇವರೆಗೆ ಕಾಶಿಗೆ ಬಂದು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅತಿರುದ್ರ ಮಹಾಯಾಗದ ಕೊನೆಯ ದಿನವಾದ ಇಂದು ಬೆಳಿಗ್ಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು, ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮಿಜಿಗಳು ಮತ್ತು 109 ಮಂದಿ ವೇದ ರುತ್ವಿಕರು ಗಂಗೆಯಲ್ಲಿ ಪವಿತ್ರ ಸ್ನಾನ ಮಾಡಿ ಅಲ್ಲಿಂದ ಗಂಗಾ ನೀರನ್ನು ತಂದು ಯೋಗಶಾಲ ಸುತ್ತಮುತ್ತ ಪ್ರೋಕ್ಷಣೆ ಮಾಡಿ ಶಿವಲಿಂಗಕ್ಕೆ ರುದ್ರಾಭಿಷೇಕ ಮಾಡಿ ನಂತರ ಅತಿರುದ್ರ ಯಾಗ ಪ್ರಾರಂಭಿಸಿದರು.
ರುದ್ರಾಭಿಷೇಕ ಆದ ನಂತರ ಬೆಳಿಗ್ಗೆ ವೇದ ಪಂಡಿತರ ಮಂತ್ರೋಚ್ಛಾರಣೆಯ ಮಧ್ಯ ಅಗ್ನಿ ಸ್ಥಾಪನೆ ಮಾಡಿ ಅತಿರುದ್ರ ಯಾಗವನ್ನು ಶ್ರೀ ಗಣಪತಿ ಸಚ್ಛಿದಾನಂದ ಸ್ವಾಮೀಜಿ ಪ್ರಾರಂಭಿಸಿದರು.
ಭಕ್ತರಿಗೆ ಶ್ರೀ ಸ್ವಾಮೀಜಿಗಳು ಹೋಮವಿಭೂತಿಯನ್ನು ಪ್ರಸಾದವಾಗಿ ಕೊಟ್ಟು ಪ್ರತಿ ದಿನ ಸ್ನಾನ ಮಾಡುವಾಗ ಸ್ವಲ್ಪ ವಿಭೂತಿಯನ್ನು ಮತ್ತು ಪವಿತ್ರ ಕಾಶಿ ಗಂಗ ನೀರನ್ನು ಬಕೇಟ್ ಹಾಕಿಕೊಂಡು ಸ್ನಾನ ಮಾಡುವುದರಿಂದ ಅನೇಕ ಖಾಯಿಲೆಗಳು ಇದ್ದವರಿಗೆ ವಾಸಿಯಾಗುವುದು ಎಂದು ತಿಳಿಸಿದರು.
ಪವಿತ್ರ ಕಾರ್ತೀಕಮಾಸದಲ್ಲಿ ಕಾಶಿ ಕ್ಷೇತ್ರದಲ್ಲಿ ಈ ರೀತಿಯ ಅತಿರುದ್ರಯಾಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಶಿನಾಥನ ಸ್ಮರಣೆ ಮಾಡಿ ದೇವರ ದರ್ಶನ ಮಾಡಿದರೆ ಪುಣ್ಯ ಲಭಿಸುವುದೆಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಭಕ್ತರಿಗೆ ತಿಳಿಸಿದರು.
ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಗಳ ಸಹಭಾಗಿತ್ವದಲ್ಲಿ ವೇದಪಂಡಿತರ ಮಂತ್ರೋಚ್ಚಾರಣೆಯಿಂದ ಕಾಶಿ ಕ್ಷೇತ್ರವೆಲ್ಲಾ ಶಿವನಾಮ ಸ್ಮರಣೆಯಿಂದ ತುಂಬಿತು.
ಈ ತಿಂಗಳ 24ರವರೆಗೆ ನೆರವೇರಿದ ಈ ಅತಿರುದ್ರ ಯಾಗಕ್ಕೆ ಅನೇಕ ಭಕ್ತರು ಪಾಲ್ಗೊಂಡಿದ್ದರು. ಪ್ರತಿಯೊಬ್ಬ ಭಕ್ತರಿಗೂ ಉಚಿತ ವಸತಿ ಭೋಜನ ಸೌಕರ್ಯವನ್ನು ಆಶ್ರಮದ ಕಮಿಟಿ ನೋಡಿಕೊಂಡು ಯಾವುದೇ ರೀತಿಯ ಕುಂದು ಕೊರತೆ ಉಂಟಾಗದಂತೆ ನೋಡಿಕೊಂಡಿರುವದು ಭಕ್ತರಲ್ಲಿ ಸಂತಸವನ್ನು ಉಂಟುಮಾಡಿದ್ದಲ್ಲದೆ ಧನ್ಯತಾಭಾವ ಮೂಡಿತು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಲಕ್ಷಾಂತರ ಭಕ್ತರಿಗೆ ಉಚಿತ ವೈದ್ಯಕೀಯ ಪೂರೈಕೆ, ಉಚಿತ ವಸತಿ ಮತ್ತು ಉಚಿತ ಊಟದ ಸೌಲಭ್ಯವನ್ನು ಒದಗಿಸಲು ಸುಮಾರು 7500 ಸ್ವಯಂಸೇವಕರು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿ ಭಕ್ತರ ಮೆಚ್ಚುಗೆಗೆ ಪಾತ್ರರಾದರು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು ಕರ್ನಾಟ, ಆಂಧ್ರಪ್ರದೇಶ ಸೇರಿದಂತೆ ದೇಶದಲ್ಲಿ ಸುಮಾರು ಹದಿನೈದು ಶಾಖಾಮಠಗಳನ್ನು ಹೊಂದಿದ್ದು ಈಗ ಕಾಶಿಯಲ್ಲಿ ಹದಿನಾರನೇ ಶಾಖಾಮಠವನ್ನು ಪ್ರಾರಂಭಿಸಿ ಲೋಕಕಲ್ಯಾಣಕ್ಕಾಗಿ ನಿರಂತರವಾಗಿ ಸೇವೆಸಲ್ಲಿಸುವ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ. ಕಾಶಿಯಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚಿರುವ ಆಂಧ್ರ, ತೆಲಂಗಾಣದ ನಿವಾಸಿಗಳಿಗೆ ಶ್ರೀ ಮಠವು ಕಾಯಕಲ್ಪವಾಗಿದೆ.
Be the first to comment