ಕಬ್ಬು ಬೆಳೆಗಾರರ ಕನ್ನಸು ಕತ್ತಲು ::ಆಕಾಶ ನೋಡುತ್ತಿದ್ದಾರೆ ಬೆಳೆಗಾರರು

ವರದಿ:ಪ್ರಭಾಕರ್ ಉಕ್ಕಲಿ  ಅಫಜಲಪುರ

(ಕಟ್ಟಾವು ಸಮಯ ಮೀರಿದ್ದರು ಹೆಚ್ಚಿದ ಗ್ಯಾಂಗ್ ರೇಟು | ಹಣಕ್ಕಾಗಿ ನಿಂತ ಕಬ್ಬು ಕಟಾವು ಗ್ಯಾಂಗ್)

ಮೊದಲೆಲ್ಲ ಕಬ್ಬು ಬೆಳೆದರೆ ಬದುಕು ಬಂಗಾರ ಎನ್ನುತ್ತಿದ ರೈತರಿಗೆ ಈಗ ಬವಣೆ ಎಂದು ಕಂಗಲಾದ್ದ ರೈತ.
ಸಮಯ ಕಳೆಯುತ್ತಿದ್ದರು,ಕಟ್ಟಾವು ಗ್ಯಾಂಗ್ ಬೆಲೆ ಹೆಚ್ಚುತ್ತಿದೆ .ಅತಿದ್ರುಷ್ಟಿ ಯಿಂದ ಮತ್ತು ಅನಾದ್ರುಷ್ಟಿ ಯಿಂದ ರೈತ ಕಂಗಲಾದರು ಸಹ ಕಬ್ಬಿನ ಮೇಲೆ ಕನ್ನಸು ಕಟ್ಟಿ ಕಬ್ಬು ಬೆಳೆದ ರೈತ.ಕಬ್ಬು ಕಾರ್ಖಾನೆಗೆ ಹೋಗುವ ಹಂತಕ್ಕೆ ಬಂದ್ರು ಕಬ್ಬು ಸಾಗಿಸಲು ಟೋಳಿ ಇಲ್ಲದೆ ಇರುವುದರಿಂದ ಪರದಾಡ್ಡುತಿದ್ದ ರೈತ.

ಸುಲಿಗೆಗೆ ನಿಂತ ಕಬ್ಬಿನ ಟೋಳಿ:ರೈತನ ಸಂಕಷ್ಟ ತಿಳಿದು ಟೋಳಿ ಅವರು ಹಣ ವಸೂಲಿಗೆ ಕೈ ಜಾರಿದ್ದಾರೆ.ಕೆಲವು ರೈತರು ಹೆಚ್ಚು ಹೆಚ್ಚಾಗಿ ಹಣ ಕೊಟ್ಟು ಮನಸ್ಸಿಗೆ ಬಂದಂತೆ ತಮ್ಮ ಜಮೀನಿಗೆ ಕರೆದೊವ್ದು ಕಬ್ಬು ಕಟಾವು ಮಾಡಿಸಿ ಕಾರ್ಖಾನೆಗೆ ಸಾಗಿಸುತ್ತಿರುವುದನ್ನೇ ತಮ್ಮ ಡಿಮೆಂಟ್ ಅಂತ ಟೋಳಿ ಅವರು ಒಂದು ಲೋಡಿಗೆ ಮತ್ತು ಒಂದು ಎಕರೆಕ್ಕೆ ಇಷ್ಟು ಹಣ ಕೊಟ್ಟರೆ ಕಬ್ಬು ಕಟಾವು ಮಾಡುತ್ತೇವೆ ಎಂದು ಡಿಮೆಂಡ್ ಮಾಡುತ್ತಿದ್ದಾರೆ ಬಡರೈತರ ಬಾಳಿಗೆ ಕಬ್ಬು ಬವಣೆ ಎಂದು ಆಲೋಚಿಸುತ್ತಿದ್ದಾರೆ.

ರೈತರ ನೆರವಿಗೆ ಸರ್ಕಾರ ಪರಿಗಣಿಸಬೇಕ್ಕು:ರೈತರು ಕಬ್ಬು ಕಳಿಸುವುದರ ಬಗ್ಗೆ ತಾಲೂಕ ಆಡಳಿತ,ಜಿಲ್ಲಾಆಡಳಿತ ಸೂಕ್ಷ್ಮವಾಗಿ ಪರಿಗಣಿಸಬೆಕ್ಕು ಕಂದಾಯ ಇಲಾಖೆ ಅಧಿಕಾರಿಗಳು ಮಧ್ಯಸ್ಥಿಕ ವಹಿಸಿ ಕಾರ್ಖಾನೆಯವರಿಗೆ ಎಚ್ಚರಿಕೆ ನೀಡಿದ್ದಾರೆ.ಆದ್ರೂ ಸಹಿತ ಕಾರ್ಖಾನೆಯವರು ಗೊತ್ತಿದ್ದರು ಸಹ ಗೊತ್ತಿಲ್ಲದಂತ ಮೌನವಾಗಿದ್ದಾರೆ.ಕೊಡಲೇ ಸರ್ಕಾರ ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಜನ ಬೆಂಬಲ ವೇದಿಕೆಯ ತಾಲೂಕ ಅಧ್ಯಕ್ಷರಾದ ಉಮೇಶ ಅಂದೋಡಗಿ ಅವರು ಪತ್ರಿಕೆ ಮುಂಖಾತರ ರೈತರ ಕಷ್ಟ ಹಂಚಿಕೊಳ್ಳುತ್ತಿದ್ದಾರೆ

ಭೀಮಾತೀರದ ರೈತರ ಬೆನ್ನಲೆಬು ವಾಗಿ ನಿಂತ ಅಂದೋಡಗಿ

Be the first to comment

Leave a Reply

Your email address will not be published.


*