ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಗ್ರಾಹಕ ಸಂರಕ್ಷಣಾ ಕಾಯ್ದೆ-1986 ಹಾಗೂ ತಿದ್ದುಪಡಿ ಕಾಯ್ದೆ-2019ರ ಅನ್ವಯ ಗ್ರಾಹಕರಿಗೆ ಹೆಚ್ಚಿನ ತಿಳುವಳಿಕೆ ನೀಡುವ ಸಲುವಾಗಿ ಗ್ರಾಹಕರ ಸಂಬಂಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಪ್ರತಿ ಜಿಲ್ಲೆಯಲ್ಲಿ ಗ್ರಾಹಕರ ಚಟುವಟಿಕೆ ನಡೆಸುತ್ತಿರುವ ಎನ್.ಜಿ.ಓ, ವಿಸಿಓಸ್ ಯಿಂದ ಒಂದು ಗ್ರಾಹಕರ ಮಾಹಿತಿ ಕೇಂದ್ರವನ್ನು ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ವ್ಯಾಪ್ತಿಯಲ್ಲಿ ಗ್ರಾಹಕ ಕಾರ್ಯ ಚಟುವಟಿಕೆ ಕಾರ್ಯನಿರ್ವಹಿಸುತ್ತಿರುವ ನೋಂದಾಯಿತ ಎನ್.ಜಿ.ಓ, ವಿಸಿಏಸ್‍ಗಳು ಅರ್ಜಿ ನಮೂನೆಯಲ್ಲಿ ಪೂರ್ತಿ ಮಾಹಿತಿ ಭರ್ತಿ ಮಾಡಿ ಫೆಬ್ರವರಿ 5 ರೊಳಗಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬಾಗಲಕೋಟೆ (ಆಹಾರ ಶಾಖೆ) ಅವರಿಗೆ ಅಗತ್ಯ ದಾಖಲಾತಿಗೊಂದಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಹಾಗೂ ಫಾರ್ಮ-ಎ1ಗಾಗಿ ಜಂಟಿ ನಿರ್ದೇಶಕರು, ಆಹಾರ ಇಲಾಖೆ ದೂಸಂ.08354-235094ಗೆ ಸಂಪರ್ಕಿಸಬಹುದಾಗಿದೆ.
Be the first to comment