ವೈದ್ಯರು, ಶುಶ್ರೂಷಾ ಸಿಬ್ಬಂದಿಗಳಿಗೆ ಐಸಿಯು ತರಬೇತಿ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮತ್ತು ಕೇರ್ ಇಂಡಿಯಾ ಸಹಯೋಗದಲ್ಲಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಶುಶೂಷಾ ಸಿಬ್ಬಂದಿಗಾಗಿ 3 ದಿನಗಳ ಕಾಲ ಇತ್ತೀಚೆಗೆ ಕಾರ್ಯಾಗಾರ ಜರುಗಿತು.

ಕಾರ್ಯಕ್ರಮವನ್ನು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಪ್ರಕಾಶ ಬಿರಾದಾರ ಅವರು ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಐಸಿಯು, ವೆಂಟಿಲೇಟರ್ ಬಗ್ಗೆ ತರಬೇತಿ ಹೊಂದಿದವರು ತುಂಬಾ ವಿರಳವಿರುದನ್ನು ಮನಗಂಡ ಜಿಲ್ಲಾಧಿಕಾರಿಗಳು ಮಣಿಪಾಲ ಆಸ್ಪತ್ರೆ ಮಲ್ಲೇಶ್ವರಂ ಮತ್ತು ಬೆಂಗಳೂರಿನ ಬಿಎಂಜೆಎಚ್ ಆಸ್ಪತ್ರೆಯ ಕನ್ಸಲ್ಟೆಂಟ್ ಇಂಟೆನ್ಸಿವಿಸ್ಟ್ ಅವರ ಜೊತೆ ಮಾತನಾಡಿ ತರಬೇತಿ ನೀಡಲು ಕೇಳಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ 3 ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಕೋವಿಡ್ ಐಸಿಯು ಮತ್ತು ಕೋವಿಡ್ ಅಲ್ಲದ ಐಸಿಯು ಆರೈಕೆಗಾಗಿ ಬಾಗಲಕೋಟ ಜಿಲ್ಲಾ ಆಸ್ಪತ್ರೆಯ ಪ್ರಸ್ತುತ ಕಾರ್ಯ ಘಟಕವನ್ನು ಉತ್ತೇಜಿಸುವ ನಿಟ್ಟಿನಲ್ಲಿ ತರಬೇತಿ ಸಹಾಯಕಾರಿಯಾಗಲಿದೆ. ಒಟ್ಟು 17 ವೈದ್ಯರು ಹಾಗೂ 45 ಜನ ಶುಶ್ರೂಷಿಯರಿಗೆ ತರಬೇತಿ ಪಡೆಯಲಿದ್ದು, ಈ ರೀತಿಯ ತರಬೇತಿ ಹಮ್ಮಿಕೊಂಡಿದ್ದು, ರಾಜ್ಯದಲ್ಲಿಯೇ ಪ್ರಥಮ ಎಂದರು.

ನಂತರ ಮೂರು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಮಣಿಪಾಲ ಆಸ್ಪತ್ರೆ ಮಲ್ಲೇಶ್ವರಂ ಮತ್ತು ಬೆಂಗಳೂರಿನ ಬಿ.ಎಂ.ಜೆ.ಎಚ್ ಆಸ್ಪತ್ರೆಯ ಕನ್ಸಲ್ಟೆಂಟ್ ಇಂಟೆನ್ಸಿವಿಸ್ಟ್ ಮತ್ತು ವೈದ್ಯ ಡಾ.ಬಸವರಾಜ್ ಕುಂಟೋಜಿ ಅವರ ನೇತೃತ್ವದ ತಂಡ ತರಬೇತುದಾರರಾದ ಡಾ.ಬಾಲಸುಬ್ರಮಣ್ಯಂ ಇವಿ, ಡಾ. ರಾಘವೇಂದ್ರ ವನಕಿ (ಮಕ್ಕಳ ತೀವ್ರ ತಜ್ಞ), ಸತೀಶ್, ಸಂತೋಷ, ಮತ್ತು ಕೇರ್ ಇಂಡಿಯಾ ತಂಡದ ಬೆಂಬಲದೊಂದಿಗೆ ಡಾ.ಸೆಂಡಿಲ್, ಡಾ.ಆನಂದ್ ರೆಡ್ಡಿ ಮತ್ತು ಬೆಂಗಳೂರಿನ ಜಯಶ್ರೀ ಅವರು ಐಸಿಯು, ವೆಂಟಿಲೇಟರ್ ಹಾಗೂ ಎಮರಜೇನ್ಸಿ ಕೇರ್ ಬಗ್ಗೆ ತರಬೇತಿ ನೀಡಿದರು.

ತರಬೇತಿ ತಂಡವು ಐಸಿಯು ಮತ್ತು ತುರ್ತು ಆರೈಕೆಯ ಬಗ್ಗೆ ವಿವರವಾದ ಚರ್ಚೆಯನ್ನು ನಡೆಸಿತು. ಮತ್ತು ವಯಸ್ಕ ಐಸಿಯು ಮತ್ತು ಮಕ್ಕಳ ಐಸಿಯುಗಾಗಿ ವಿಶೇಷವಾಗಿ 3 ಆರ್ಡಿ ಕೋವಿಡ್ ತರಂಗವನ್ನು ಮನಸ್ಸಿನಲ್ಲಿಟ್ಟುಕೊಂಡು ವೆಂಟಿಲೇಟರ್‍ಗಳು ಮತ್ತು ಎಚ್‍ಎಫ್‍ಎನ್‍ಸಿ ಮತ್ತು ಆಮ್ಲಜನಕ ಸಾಧನಗಳನ್ನು ಬಳಸಲು ಅನುಭವವನ್ನು ನೀಡಿದರು. ವಯಸ್ಕರು, ಮಗು ಮತ್ತು ಶಿಶುಗಳಿಗೆ ಬೇಸಿಕ್ ಜೀವನ ಬೆಂಬಲ ಕೌಶಲ್ಯಗಳ ತರಬೇತಿಯನ್ನು ಸಹ ನೀಡಲಾಯಿತು.

Be the first to comment

Leave a Reply

Your email address will not be published.


*