ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ಹುನಗುಂದ ತಾಲೂಕಿನ 33/11 ಕೆವಿ ವಿದುತ್ ವಿತರಣಾ ಕೇಂದ್ರ ಕಮತಗಿಯಲ್ಲಿ 33 ಕೆವಿ ಮಾರ್ಗದ ಮತ್ತು ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ತುರ್ತು ನಿರ್ವಹಣೆ ಕೆಲಸದ ನಿಮಿತ್ಯ ಜನವರಿ 13 ರಂದು ಬೆಳಿಗ್ಗೆ 10 ರಿಂದ ಸಂಜೆ 4 ವರೆಗೆ ಕಮತಗಿ ಪಟ್ಟಣ ಪಂಚಾಯತ ವ್ಯಾಪ್ತಿಯ ಹಾಗೂ ಕಮತಗಿ ಉಪ ಕೇಂದ್ರದಿಂದ ಸರಬರಾಜು ಆಗುವ ಬೇನಾಳ, ರಾಮತಾಳ, ಹಿರೇಮಾಗಿ ಮತ್ತು ಚಿಕ್ಕಮಾಗಿ, ಅಂಲ್ಲಿಕೊಪ್ಪ, ಕಡಿವಾಲ, ಸುರಳಿಕಲ್ಲ, ಬೂದಿಹಾಳ ಮತ್ತು ಬಸನಾಳ ಗ್ರಾಮಗಳಿಗೆ ಹಾಗೂ ಸುತ್ತಮುತ್ತಲಿನ ಆಯ್.ಪಿ.ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಬಾಗಲಕೋಟೆ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment