ಚೆನ್ನೈ : ಜನರಲ್ಲಿ ಜಾಗೃತಿ ಮೂಡಿಸಲು ಮೀನು ವ್ಯಾಪಾರಿಯೊಬ್ಬ ಕೇವಲ ಒಂದು ರೂಪಾಯಿಗೆ ಒಂದು ಕೆಜಿ ಮೀನನ್ನು ಮಾರಾಟ ಮಾಡಿದ ಘಟನೆ ತಮಿಳುನಾಡಿನ ಮಧುರೈ ನಲ್ಲಿ ನಡೆದಿದೆ.
ಜನರು ತಾಜಾ ಮೀನನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಜನ ಜಾಗೃತಿ ಮೂಡಿಸಲು ಮಧುರೈನ ಕಾರೈಕುಡಿಯ ಮೀನಿನ ವ್ಯಾಪಾರಿ ಸುಮಾರು 500 ಕೆಜಿ ಫ್ರೆಶ್ ಮೀನುಗಳನ್ನು ಒಂದು ರೂಪಾಯಿಗೆ ಒಂದು ಕೆಜಿಯಂತೆ ಮಾರಾಟಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಮೀನು ವ್ಯಾಪಾರಿ , ನನಗೆ ಮೀನುಗಳನ್ನು ಸಂಗ್ರಹಿಸಿಟ್ಟುಕೊಂಡು ಜನರಿಗೆ ಮೋಸ ಮಾಡಿ ಮಾರಾಟಮಾಡಲು ಮನಸ್ಸಿಲ್ಲ. ನಾನು ಯಾವಾಗಲೂ ತಾಜಾ ಮೀನುಗಳನ್ನು ಗ್ರಾಹಕರಿಗೆ ಕೊಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
Be the first to comment