ಹೆದ್ದಾರಿ ಇಲಾಖೆಯ ಜಾಗವನ್ನೇ ಒತ್ತುವರಿ ಮಾಡಿ ಹೋಟೆಲ್ ನಿರ್ಮಿಸಿದ ಭೂಪ :ಕಣ್ಮುಚ್ಚಿ ಕುಳಿತ ಏನ್ ಎಚ್ ಆಯ್   

ಜಿಲ್ಲಾ ಸುದ್ದಿಗಳು 

 ಕುಮಟಾ

ತಾಲ್ಲೂಕಿನ ಮಿರ್ಜಾನ್ ಹತ್ತಿರದ ಕೊಡಕಣಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಹೆದ್ದಾರಿ ಇಲಾಖೆಯ ಜಾಗವನ್ನು ಆತಿಕ್ರಮಿಸಿ ಹೋಟೆಲ್ ನಿರ್ಮಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಕಳೆದ ಹಲವಾರು ವರ್ಷಗಳಿಂದ ಕೊಡಕಣಿ ಮೂಲದ ವ್ಯಕ್ತಿಯೋರ್ವ ಕೋಡಕಣಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಬೆಲೆ ಬಾಳುವ ಜಾಗವನ್ನು ಆತಿಕ್ರಮಿಸಿ ಅಂಗಡಿ , ಮುಂಗಟ್ಟು ನಿರ್ಮಿಸಿಕೊಂಡಿದ್ದ. ಈ ಕುರಿತು ಸಾರ್ವಜನಿಕರು ಹಲವಾರು ಬಾರಿ ಹೆದ್ದಾರಿ ಇಲಾಖೆ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಿದರು ಪ್ರಯೋಜನವಾಗಿಲ್ಲ. ವಿಪರ್ಯಾಸ ವೆಂದರೆ ಮಿರ್ಜಾನ್ ಗ್ರಾಮ ಪಂಚಾಯತ್ ಸಹ ಈತನಿಗೆ ನಿರಾಫೇಕ್ಸಣ(N O C) ಪತ್ರ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಶೇಷ ವೆಂದರೆ ಈ ವ್ಯಕ್ತಿ ಆಫರಾಧಿ ಹಿನ್ನೆಯುಳ್ಳವನಾಗಿದ್ದು ಕೋಕಾ ಕಳುವು, ಲಾರಿಗಳ ಡೀಸೆಲ್ ಕಳುಹು ಇನ್ನಿತರ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸ್ ಅತಿಥಿಯಾಗಿದ್ದ ಎನ್ನಲಾಗುತ್ತಿದೆ.

ಈತ ತಾನೊಬ್ಬ ಸಭ್ಯ ವ್ಯಕ್ತಿಯಂತೆ ಪೋಸ್ ಕೊಟ್ಟು ಅಧಿಕಾರಿಗಳನ್ನು ಹೆದರಿಸಿ ಬ್ಲಾಕ್ ಮೆಲ್ ಮಾಡಿ ಅಧಿಕಾರಿಗಳು, ಗುತ್ತಿಗೆದಾರರು ಮರಳು, ಚಿರೇಕಲ್ಲು ತೆಗೆಯುವವರು ಸಣ್ಣ ಪುಟ್ಟ ವ್ಯಾಪಾರರಸ್ಥರು ಸೇರಿದಂತೆ ಎಲ್ಲರನ್ನು ಬ್ಲಾಕ್ ಮೆಲ್ ಮಾಡಿ ತಿಂಗಳಿಗೆ ಲಕ್ಷಕ್ಕೂ ಹೆಚ್ಚು ಹಣವನ್ನೂ ಬೇನಾಮಿಯಾಗಿ ಪಡೆಯುತ್ತಿದ್ದ ಎನ್ನಲಾಗುತ್ತಿದೆ. ಅಲ್ಲದೆ ತಾನೊಬ್ಬ ಆರ್ ಟಿ ಆಯ್ ಕಾರ್ಯಕರ್ತ. ನಾನೊಬ್ಬನೇ ಜಿಲ್ಲೆಯಲ್ಲಿ ಆರ್ ಟಿ ಆಯ್ ಕಾರ್ಯಕರ್ತ್ ಏನುಬೇಕಾದರೂ ಮಾಡಬಲ್ಲೆ ಪೊಲೀಸ್ ಅಧಿಕಾರಿಗಳು, ಎಸಿ, ಎಸ್ಪಿ, ಡಿ ಆಯ್ ಜಿ, ಗಣಿ ಮತ್ತು ಭೂಗರ್ಭ ಇಲಾಖೆಯ ಅಧಿಕಾರಿಗಳು ನನ್ನ ಕಿಸೆಯಲ್ಲಿದ್ದಾರೆ ಎನ್ನುವ ರೀತಿಯಲ್ಲಿ ಪ್ರತಿಯೊಬ್ಬರನ್ನು ಯಾಮಾರಿಸಿದ್ದಾನೆ. ಹೀಗಾಗಿ ಸಾರ್ವಜನಿಕರು ಈತನ ಗುಂಡಾವರ್ತನೆಗೆ ಬೇಸತ್ತು ಪ್ರತಿಭಟನೆ ಗೆ ಮುಂದಾಗಿದ್ದಾರೆ. ಕಾರಣ ಹೆದ್ದಾರಿ ಇಲಾಖೆ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಈತನ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕ್ಯೆಗೊಳ್ಳಬೇಕು. ಅಲ್ಲದೆ ಒತ್ತುವರಿ ಮಾಡಿಕೊಂಡ ಹೆದ್ದಾರಿ ಇಲಾಖೆಯ ಜಾಗವನ್ನು ಖುಲ್ಲಾಪಡಿಸಬೇಕು ಎಂಬುದು ನೊಂದವರ ಅಗ್ರಹವಾಗಿದೆ.

Be the first to comment

Leave a Reply

Your email address will not be published.


*