ರಾಜ್ಯ ಸುದ್ದಿ
ಕರೋನಾ ಮಹಾಮಾರಿ ಯಿಂದ ತಪ್ಪಿಸಿಕೊಳ್ಳಲು ಇರುವ ಏಕೈಕ ಮಾರ್ಗ ಲಸಿಕೆ ಇದರ ಮೂಲಕ ಕರೋನ ಸೋಂಕನ್ನು ತಡೆಗಟ್ಟಲು ಹೆಚ್ಚು ಸಹಕಾರಿಯಾಗಿದ್ದು ಕೂಡಲೇ ದೇಶ ಹಾಗೂ ರಾಜ್ಯದ ಜನತೆಗೆ ತುರ್ತಾಗಿ ಲಸಿಕೆ ನೀಡಲು ಕಾರ್ಯಪ್ರವೃತ್ತವಾಗಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಮಾಜಿ ಸಚಿವರು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ಟಿ ಬಿ ಜಯಚಂದ್ರ ರವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.ತುಮಕೂರಿನ ಖಾಸಗಿ ಹೋಟೆಲ್ ನಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವರು ಕರೋನ ಸೋಂಕನ್ನು ತಡೆಗಟ್ಟುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದ್ದು ಇದರ ಮೂಲಕ ಸಾಕಷ್ಟು ಸಾವು ನೋವುಗಳು ಸಂಭವಿಸಿದೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತ್ವರಿತಗತಿಯಲ್ಲಿ ಸಾರ್ವಜನಿಕರಿಗೆ ಲಸಿಕೆ ನೀಡಲು ಕಾರ್ಯಪ್ರವೃತ್ತರಾದ ಬೇಕಾಗಿದೆ ಎಂದರು.
ಇನ್ನು ಕೇಂದ್ರ ಸರ್ಕಾರದ ನಡೆಗೆ ಸುಪ್ರೀಂಕೋರ್ಟ್ ಪದೇಪದೇ ಚಾಟಿ ಬೀಸುವ ಮೂಲಕ ಕೇಂದ್ರ ಸರ್ಕಾರವನ್ನು ಎಚ್ಚರಿಸುತ್ತಿದೆ. ಅದರ ಮೂಲಕ ಇಂದು ದೇಶದ ನಾಗರಿಕರಿಗೆ ಉಚಿತವಾಗಿ ಲಸಿಕೆ ಲಭ್ಯವಾಗುತ್ತಿದೆ ಎಂದರು.ಕರೋನಾ ಎರಡನೇ ಆಲೆಯಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸುವ ಮೂಲಕ ದೇಶದ ನಾಗರಿಕರು ತತ್ತರಿಸಿದ್ದಾರೆ. ಮುಂದಿನ ಎರಡು ಎರಡು ತಿಂಗಳಿನಲ್ಲಿ ಕರೋನ ಮೂರನೇ ಅಲೆ ಮತ್ತಷ್ಟು ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಹಿರಿಯ ವಿಜ್ಞಾನಿಗಳು ಹಾಗೂ ವೈದ್ಯರ ತಂಡ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಚ್ಚರಿಸಿದೆ.
ಆದ್ದರಿಂದ ಕೂಡಲೇ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಲಸಿಕೆ ನೀಡಬೇಕಾಗಿದ್ದು ಇದರ ಮೂಲಕ ಕರೋನ ಸೋಂಕನ್ನು ತಡೆಗಟ್ಟಬೇಕಾಗಿದೆ.ಈಗ ರೂಪಾಂತರಗೊಂಡಿರುವ ಡೆಲ್ಟಾ ಪ್ಲಸ್ ವೇಗವಾಗಿ ಹರಡುತ್ತಿದ್ದು ಈಗಾಗಲೇ ನೂರಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಡೆಲ್ಟಾ ಪ್ಲಸ್ ಸೋಂಕು ಕಾಣಿಸಿಕೊಂಡಿದೆ . ಕರುನಾ ಸೋಂಕು ತಡೆಯಬೇಕಾದರೆ ಎಲ್ಲರಲ್ಲೂ ದೇಹದಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚಾಗಬೇಕಾಗಿದೆ ಆದ್ದರಿಂದ ಕೂಡಲೇ ಲಸಿಕೆ ವಿತರಿಸಲು ಕೇಂದ್ರ ಹಾಗೂ ರಾಜ್ಯಸರ್ಕಾರಗಳ ಒತ್ತಾಯಿಸಿದ್ದಾರೆ.
Be the first to comment