ಮುಂಬೈ: ಇಂದು ಬೆಳಗ್ಗೆ 10:30 ಗಂಟೆಗೆ ಸುಮಾರಿಗೆ ಹೊರಬೀಳಲಿರುವ ಅಯೋಧ್ಯೆ ತೀರ್ಪಿಗಾಗಿ ಇಡೀ ದೇಶವೇ ಕಾದುಕುಳಿತಿದೆ. ಅಲ್ಲದೆ ದೇಶದೆಲ್ಲೆಡೆ ಈ ಹಿನ್ನೆಲೆ ಯಾವುದೇ ಹಿಂಸಾಚಾರ ನಡೆಯಬಾರದೆಂದು ಪೊಲೀಸ್ ಇಲಾಖೆ, ಭದ್ರತಾ ಪಡೆ ಕಟ್ಟೆಚ್ಚರ ವಹಿಸಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್, ಸಂದೇಶ ರವಾನಿಸದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಹೀಗಿದ್ದರೂ ಮಹಾರಾಷ್ಟ್ರದಲ್ಲಿ ಯುವಕನೋರ್ವ ಫೇಸ್‍ಬುಕ್‍ನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.
ಧೂಳೆ ಓಲ್ಡ್ ಆಗ್ರಾ ರೋಡ್‍ನ ನಿವಾಸಿ ಸಂಜಯ್ ರಾಮೇಶ್ವರ್ ಶರ್ಮಾ ಬಂಧಿತ ಆರೋಪಿ. ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಅಯೋಧ್ಯೆ ತೀರ್ಪಿನ ಬಗ್ಗೆ ಪೋಸ್ಟ್ ಹರಿದಾಡದಂತೆ ನಿಗಾವಹಿಸುತ್ತಿದ್ದಾಗ ಶರ್ಮಾ ಅವರ ಫೇಸ್‍ಬುಕ್ ಪೋಸ್ಟ್ ಬೆಳಕಿಗೆ ಬಂದಿದೆ. ಇದು ಸಾಮಾಜಿಕ ಶಾಂತಿ ಕದಡುವ ಪೋಸ್ಟ್, ಇದನ್ನು ಫೇಸ್‍ಬುಕ್‍ನಲ್ಲಿ ಹರಿಬಿಟ್ಟಿರೋದು ತಪ್ಪು ಎಂದು ಪೊಲೀಸರು ಶರ್ಮಾನನ್ನು ಬಂಧಿಸಿದ್ದಾರೆ.
ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 153(1)(ಬಿ), 188 ವಿಧಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಆತನನ್ನು ಕೋರ್ಟಿಗೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಮತ್ತೆ ಹೀಗೆ ಯಾರಾದರೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದರೆ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
Mumbai Police PRO: Mumbai Police is aware of the situation and we are keeping a close watch. Our preparations for tomorrow have begun. Adequate arrangements are being made. #Ayodhya
154 people are talking about this
Be the first to comment