ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ಬೆಂಗಳೂರಿಗೆ ವರ್ಗಾವಣೆ…

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಕಾರವಾರ

ಕಾರವಾರ ಉಪ ವಿಭಾಗದ ಸಹಾಯಕ ಕಮಿಷನರ್ ಆಗಿದ್ದ ವಿದ್ಯಾಶ್ರೀ ಚಂದರಗಿ ಅವರನ್ನು ಸರ್ಕಾರ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಪ್ರಧಾನ ವ್ಯವಸ್ಥಾಪಕಿಯಾಗಿ ನೇಮಿಸಿ ಸರ್ಕಾರ ವರ್ಗಾವಣೆ ಮಾಡಿದೆ.ವಿದ್ಯಾಶ್ರೀ ಅವರು ಕಾರವಾರ ಸಹಾಯಕ ಕಮಿಷನರ್ ಹುದ್ದೆಯಿಂದ ಬುಧವಾರ ರಿಲೀವ್ ಆಗಿದ್ದು, ಇಂದು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಅವರ ಸ್ಥಾನಕ್ಕೆ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಕಚೇರಿಯಲ್ಲಿ ಕರ್ತವ್ಯ ಮಾಡುತ್ತಿದ್ದ ಕೆಎಎಸ್ (ಕಿರಿಯ ಶ್ರೇಣಿ ) ಅಧಿಕಾರಿ ಜಯಲಕ್ಷಿ ಅವರನ್ನು ವರ್ಗಾಯಿಸಲಾಗಿದೆ. ಅವರು ಕರ್ತವ್ಯಕ್ಕೆ ಇಂದೇ ಹಾಜರಾಗಿದ್ದಾರೆ.

CHETAN KENDULI

ವಿದ್ಯಾಶ್ರೀ ಅವರು ಉಪ ವಿಭಾಗದಲ್ಲಿ ಚುರುಕಿನಿಂದ ಕೆಲಸ ಮಾಡಿದ್ದರು, ನೆರೆಯ ಸಂದರ್ಭದಲ್ಲಿ ಸಂತ್ರಸ್ತರ ಜೊತೆ ಉಳಿದು ಅವರ ಕಷ್ಟಗಳಿಗೆ ನೆರವಾಗಿದ್ದರು. ಕದ್ರಾ ಅಣೆಕಟ್ಟಿನಿಂದ ನೀರು ಹೊರಬಿಡುವ ಕರ್ತವ್ಯವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದ್ದರು. ನೆರೆ ಪರಿಹಾರ ನೀಡಿಕೆಯಲ್ಲಿ ಸಹ ಪಾರದರ್ಶಕತೆ ಮೆರೆದು ಸಂತ್ರಸ್ತರಿಗೆ ನೆರವಾಗಿದ್ದರು.

Be the first to comment

Leave a Reply

Your email address will not be published.


*