ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಒಬ್ಬ ವ್ಯಕ್ತಿ ಸಾಹಿತ್ಯ ಬರೆದಾಗ ಸಾಹಿತಿಯಾಗಬಹುದು. ಆದರೆ ಬರೆದಂತೆ ಬದುಕಿದರೆ ವಿಶ್ವ ಮಾನವನಾಗಬಹುದು ಎಂಬುದನ್ನು ಕುವೆಂಪು ತೋರಿಸಿಕೊಟ್ಟಿದ್ದಾರೆಂದು ಬಾಗಲಕೋಟೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ ಹೇಳಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸೃತಿ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡ ವಿಶ್ವ ಮಾನವ ದಿನಾಚರಣೆ ಅಂಗವಾಗಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ತಮ್ಮ ಪರಿಕಲ್ಪಣೆಯ ಮೂಲಕ ಕವನಗಳನ್ನು ರಚಿಸಿ ದೇಶದ ಜನತೆಗೆ ಸಂದೇಶವನ್ನು ರವಾನಿಸಿದ್ದಾರೆ. ನಾವೆಲ್ಲರೂ ಕುವೆಂಪು ಅವರು ಹಾಕಿಕೊಟ್ಟ ದ್ಯೇಯ, ಆದರ್ಶಗಳನ್ನು ಪಾಲಿಸುವ ಅಗತ್ಯವಿದೆ ಎಂದು ತಿಳಿಸಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಮುಧೋಳನ ಮೋಡಿ ಲಿಪಿ ತಜ್ಞ ಸಂಗಮೇಶ ಕಲ್ಯಾಣ ಅವರು ಕುವೆಂಪು ಅವರು ಬರೆದ ರಾಮಾಯಣ ದರ್ಶನಂ ಕೃತಿಯನ್ನು ವಿಶ್ಲೇಷಣೆ ಮಾಡುತ್ತಾ, ಇದೊಂದು ಶಾಬ್ದಿಕ ಕಾವ್ಯವಲ್ಲ. ಸಾಮಾಜಿಕ ಸಾಂಸ್ಕøತಿಕ ಮಜಲಿನ ವಾಸ್ತವರದ ಬದುಕನ್ನು ರೂಪಿಸುವ ಸಂವಹನಮುಖಿಯಾಗಿ ಗುರುತಿಸಿದ ಮಹಾಕಾವ್ಯವಾಗಿದೆ. ಕುವೆಂಪು ಸಾಮಾಜಿಕ ಸ್ಥರದಲ್ಲಿ ನಿಂತು ಭೌದ್ದಿಕ ವಿವೇಚನೆಯೊಂದಿಗೆ ಒಂದು ದಶಕದ ಕಾಲ ಶ್ರಮವಹಿಸಿ ಬರೆದಿರುವ ಮಹಾಕಾವ್ಯವೇ ರಾಮಾಯಣ ದರ್ಶನಂ ಎಂದರು.
ಮಹಾಕಾವ್ಯವನ್ನು ಓದಿದಾಗ ಕೇವಲ ಪಾತ್ರಗಳ ಮೂಲಕ ಸಾಮಾಜಿಕ ಸ್ಥರಗಳನ್ನು ಕಟ್ಟಿಕೊಡುವುದಾಗಲಿ, ವಿಶ್ಲೇಷಿಸುವುದಾಗಲಿ, ಭಾವನಾತ್ಮಕವಾಗಿ ನಮ್ಮನ್ನು ಆ ಚಿಂತನೆಯತ್ತ ಕರೆದೊಯ್ಯುತ್ತದೆ. ರಸಋಷಿ ಕುವೆಂಪುರವರು ಋಷಿ ಸಾದೃಶ್ಯ ಹೊತ್ತು ಇಪ್ಪತ್ತೆರಡು ಸಾವಿರದ ಎರಡು ನೂರಾ ತೊಂಬತ್ತೊಂದು ಸಾಲುಗಳ ಕಾವ್ಯವನ್ನು ರಚಿಸಿ ಸಂಸ್ಕøತ ಮತ್ತು ಕನ್ನಡ ಎರಡಕ್ಕೂ ಕೀರ್ತಿ ತಂದ ಶ್ರೇಯಸ್ಸು ಇವರದ್ದಾಗಿದೆ ಎಂದರು.
ರಾಮಾಯಣದ ಕಥೆ ಬಹುತೇಕ ಎಲ್ಲರಿಗೂ ಪ್ರೀಯವಾದದ್ದಾಗಿದ್ದು, ಈ ಕಥೆಯ ಸಾರವನ್ನು ಒಂದೇ ಸಾಲಿನಲ್ಲಿ, ಒಂದೇ ವಾಕ್ಯದಲ್ಲಿ ಹೇಳುದಾದರೆ, ದಶರಥ ಕುಮಾರ, ರಾಮ ರಾವಣನ್ನು ಕೊಂದ, ಸೀತೆಯನ್ನು ತಂದ. ಅನ್ಯರ ಮಾತಿಗೆ ಸೀತೆಯನ್ನು ದೂರ ಸರಿಸಿದ ಇದರಿಂದ ಇಡೀ ಕಾವ್ಯದ ಸಂಪೂರ್ಣ ಇತಿಹಾಸವು ಮುಗಿದುಹೋಗುತ್ತದೆ. ಆದರೆ ಇದನ್ನು ಕುವೆಂಪುರವರು ಪರಿಸರ ಪ್ರೇಮಿಯಾಗಿ ಸಾಹಿತ್ಯವನ್ನು ರಂಜಿಸಿ ಕಾವ್ಯಕ್ಕೆ ಶಕ್ತಿ ತುಂಬಿ, ಭಿನ್ನವಾಗಿ ರಚಿಸಿದ್ದು, ಇದರಿಂದಲೇ. ಕಾವ್ಯವನ್ನು ಓದುವ ಪೂರ್ವದಲ್ಲಿ ಕಾವ್ಯದಲ್ಲಿ ಬಳಸಿದ ವ್ಯಕ್ತಿಗಳ ಹೆಸರು ಕೂಡಾ ಇಲ್ಲಿ ಅರಿಯಬೇಕಿದೆ ಎಂದು ತಿಳಿಸಿದರು.
ಆರ್.ಎಂ.ಎಸ್‍ನ ಉಪಸಮನ್ವಯಾಧಿಕಾರಿ ಜಾಸ್ಮೀನ್ ಕಿಲ್ಲೇದಾರ ಅವರು ಕುವೆಂಪು ಅವರ ಬಗ್ಗೆ ಬರೆದ ಕವನಗಳನ್ನು ಪ್ರಸ್ತುತ ಪಡಿಸಿದರು. ಗಣೇಶ ರಾಯಬಾಗಿ ಮತ್ತು ಸಂಗಡಿಗರಿಂದ ರಾಷ್ಟ್ರಕವಿ ಕುವೆಂಪು ಅವರು ಬರೆದ ಕವನಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಯುಕೆಪಿಯ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆನ್ನೂರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ಎನ್.ಹೇಮಾವತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Be the first to comment