ಬಾಗಲಕೋಟ ಜೀಲ್ಲಾ ಯುವ ಕಾಂಗ್ರೆಸ್ ವತಿಯಿಂದ ರಾಜ್ಯ ಸರ್ಕಾರ ವಜಾಗೋಳಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ಗಳಿಗೆ ಮನವಿ

ವರದಿ: ಅಮರೇಶ ಕಾಮನಕೇರಿ


     ಜಿಲ್ಲಾ ಸುದ್ದಿಗಳು


ಪ್ರಜಾಪ್ರಭುತ್ವ ಕಗ್ಗೊಲೆ ಮಾಡುತ್ತಿದೆ ಬಿಜೆಪಿ ಇಂತ ನಿಚ್ಚ ರಾಜಕೀಯ ಮಾಡುವ ಬಿಜೆಪಿ ನಾಯಕರನ್ನು ಜೈಲಿಗೆ ಕಳಿಸಬೇಕು   

ಚಿನ್ನು ಅಂಬಿ ಯುವ ಕಾಂಗ್ರೆಸ್  ಜೀಲ್ಲಾ ಪ್ರಧಾನ ಕಾರ್ಯದರ್ಶಿ

ಬಾಗಲಕೋಟ:: ಪ್ರಜಾಪ್ರಭುತ್ವ ಹಾಳು ಮಾಡುವ ನಿಟ್ಟಿನಲ್ಲಿ ದಾಪುಗಾಳು ಹಾಕುತ್ತಿರುವ ಭಾರತೀಯ ಜನತಾ ಪಾರ್ಟಿಯ ವರ್ತನೆಯನ್ನು ಅವಲೋಕಿಸಿದರೆ ದೇಶದಲ್ಲಿ ಪ್ರಜಾಪ್ರಭುತ್ವ ಕಗ್ಗೋಲೆ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ‌. ಯಾಕೆಂದರೆ ಮಾನ್ಯ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರು ತಮ್ಮ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಶಾಸಕರುಗಳ ರಾಜೀನಾಮೆ ಕೊಡಿಸಿ ನಾವು ಸರ್ಕಾರ ರಚನೆ ಮಾಡಿದ್ದೇವೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಹಾಗೂ ಸದರಿ ಸಭೆಯಲ್ಲಿ ಅಮಿತಾ ಶಾ ರವರು ಭಾಗವಹಿಸಿದ್ದಾರೆ. ಆ ವಿಡಿಯೋ ಕೂಡಾ ವೈರಲ್ ಆಗುರುತ್ತದೆ.

ಇದರಿಂದ ಜನತೆಗೆ ಗೊತ್ತಾಗಿದೆ ಈ ಸರ್ಕಾರ ಅಡ್ಡದಾರಿಯಿಂದಾ ಅಧಿಕಾರಕ್ಕೆ ಬಂದಿದೆ ಎಂದು. ಪರಿಣಾಮ ತಕ್ಷಣವೇ ಮಾನ್ಯ ರಾಜ್ಯಪಾಲರು ಇದನ್ನ ಗಂಭೀರವಾಗಿ ಪರಿಗಣಿಸಿ ಯಡಿಯೂರಪ್ಪನವರ ಈ ಸರ್ಕಾರವನ್ನು ವಜಾಗೋಳಿಸಬೇಕು ಹಾಗೂ ಇದಕ್ಕೆಲ್ಲಾ (ಆಪರೇಶನ್ ಕಮಲಕ್ಕೆ) ಸೂತ್ರಧಾರಿಯಾದ ಅಮಿತ ಶಾ ರವರನ್ನು ಕೇಂದ್ರ ಸಂಪುಟದಿಂದಾ ಕೈ ಬಿಡಬೇಕೆಂದು ಮಾನ್ಯ ರಾಷ್ಟ್ರಪತಿಯವರಿಗೆ ಜಿಲ್ಲಾಧಿಕಾಗಳು ಭಾಗಲಕೊಟ ಇವರಿಗೆ ಮನವಿ ಸಲ್ಲಿಸಲಾಯಿತು. ಇದರ ಮುಖಂಡತ್ವವನ್ನು ಜಿಲ್ಲಾ ಯುತ್ ಕಾಂಗ್ರೆಸ್ ಅಧ್ಯಕ್ಷರಾದ ವಿನಯ ಆರ್ ತಿಮ್ಮಾಪೂರ ಇವರು ವಹಿಸಿಕೊಂಡಿದ್ದರು, ಅವರೊಂದಿಗೆ, ರಾಜ್ಯ ಯುತ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಪ್ರವೀಣಗೌಡ ಪಾಟೀಲ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಚಿನ್ನು ಎಸ್ ಅಂಬಿ, ಆರೀಪ ಮೊಮೀನ, ಪ್ರಕಾಶ ಮಾಂಗ, ಯುವ ಮುಖಂಡ ಆಕಾಶ ದೊಡಮನಿ ಯುವ ಕಾಂಗ್ರೆಸ್ ನ ಕಾರ್ಯಕರ್ತರು ಹಾಜರಿದ್ದರು.

Be the first to comment

Leave a Reply

Your email address will not be published.


*