ಜಿಲ್ಲಾ ಸುದ್ದಿಗಳು
ಭಟ್ಕಳ
ಭಟ್ಕಳ ತಾಲೂಕಾ ಪಂಚಾಯತ್ ಆವರಣದಲ್ಲಿ ಶಾಸಕ ಸುನಿಲ ನಾಯ್ಕ ರವರು ಶಾಸಕರ ನಿಧಿಯಿಂದ ಅಂಗವಿಕಲರಿಗೆ 16 ದ್ವೀಚಕ್ರ ವಾಹನಗಳನ್ನುನೀಡಿದರು. ಸೋಮವಾರದಂದು ಬೆಳಗ್ಗೆ 10-00 ಗಂಟೆಗೆ ಭಟ್ಕಳ ತಾಲೂಕಾ ಪಂಚಾಯತ್ ಆವರಣದಲ್ಲಿ ಶಾಸಕ ಸುನಿಲ್ ನಾಯ್ಕರವರು ಅಂಗವಿಕಲರಿಗೆ ದ್ವಿಚಕ್ರ ವಾಹನ ಮತ್ತು ಕೀಗಳನ್ನು ಹಸ್ತಾಂತರಿಸಿದರು
ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಶಾಸಕರು ನನ್ನ ಕ್ಷೇತ್ರದಲ್ಲಿ ಎಷ್ಟೇ ಅಂಗವಿಕಲರಿದ್ದರು ನನ್ನ ಗಮನಕ್ಕೆ ತನ್ನಿ ಮತ್ತು ನನ್ನ ಆಪ್ತ ಸಹಾಯಕರನ್ನು ಸಂಪರ್ಕಿಸಬಹುದು. ಮುಂದಿನ ದಿನಗಳಲ್ಲಿ ನನ್ನ ಕ್ಷೇತ್ರದಲ್ಲಿನ ಎಲ್ಲ ಅಂಗವಿಕಲರಿಗೂ ದ್ವೀಚಕ್ರ ವಾಹನಗಳನ್ನು ನಿಡುತ್ತೇನೆಂದು ಆಶ್ವಾಸನೆ ನೀಡಿದರು. ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕರ್ತರು ಅಂಗವಿಕಲರ ಮನೆಬಾಗಿಲಿಗೆ ಬಂದು ಅರ್ಜಿಗಳನ್ನು ಸ್ವೀಕಾರ ಮಾಡಿ ದ್ವೀಚಕ್ರ ವಾಹನಗಳನ್ನ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ್ ಇಒ ಪ್ರಬಾಕರ ಚಿಕ್ಕನಮನೆ, ಪಿಎಲ್ಡಿ ಬ್ಯಾಂಕ ನಿರ್ದೇಶಕ ಸಂತೋಷ ನಾಯ್ಕ ರಾಮಾ ನಾಯ್ಕ ಚೌಥನಿ, ಮುಂತಾದವರು ಉಪಸ್ಥಿರಿದ್ದರು.
Be the first to comment