ಬೇಡ ಜಂಗಮರ ಹಕ್ಕಿಗೆ ಚ್ಯುತಿ ತಂದರೆ ಸಮಾಜ ಸಹಿಸದು: ನಾಗೇಂದ್ರ ಸ್ವಾಮಿ

ವರದಿ:: ಸುನೀಲ್ ಬಾವಿಕಟ್ಟಿ ಬೀದರ್


  ಜೀಲ್ಲಾ ಸುದ್ದಿಗಳು


ಬೀದರ್,  ಬೇಡ ಜಂಗಮರು ಈ ದೇಶದ ಓರ್ವ ಪುರಾತನರು. ಶತಮಾನಗಳ ಇತಿಹಾಸ ಈ ಸಮಾಜಕ್ಕಿದೆ. ಪರಿಶಿಷ್ಟ ಜಾತಿ ಯಾದಿಯಲ್ಲೂ ಬಹು ಕಾಲದಿಂದಲೂ ಈ ಸಮಾಜ ಗುರುತಿಸಿದೆ. ಇಂಥ ಶ್ರೇಷ್ಠ ಇತಿಹಾಸವುಳ್ಳ ಸಮಾಜದ ವಿರೂದ್ಧ ಇಲ್ಲ ಸಲ್ಲದ ಹೇಳಿಕೆ ನೀಡಿ ಸಮಾಜವನ್ನು ಅವಮಾನ ಮಾಡುವವರ ವಿರೂದ್ಧ ಸಮಾಜ ಸುಮ್ಮನಿರಲ್ಲ ಎಂದು ನ್ಯಾಯವಾದಿಗಳೂ ಹಾಗೂ ಅಖಿಲ ಕರ್ನಾಟಕ ಬೇಡ ಜಂಗಮ ಸಮಾಜ ಸಂಘಟನೆ ಜಿಲ್ಲಾ ಘಟಕದ ಉಪಾಧ್ಯಕ್ಷ ನಾಗೇಂದ್ರ ಸ್ವಾಮಿ ಎಚ್ಚರಿಸಿದರು.

ಮಂಗಳವಾರ ನಗರದ ಶಿವನಗರ ಉತ್ತರದಲ್ಲಿರುವ ಹೋಟಲ ಕಸ್ತುರಿ ಇಂಟರ್‍ನ್ಯಾಶ್ನಲ್ ಅವರಣದಲ್ಲಿ ಪತ್ರಿಕಾ ಗೋಷ್ಟಿ ಉದ್ದೇಶಿಸಿ ಮಾತನಾಡಿದರು.
ಬೇಡ ಜಂಗಮರು ಪರಿಶಿಷ್ಟರು ಎಂಬುದಕ್ಕೆ ಸ್ವತಂತ್ರ ಪೂರ್ವದ ಇತಿಹಾಸವಿದೆ. ಸೆನ್ಸೆಸ್ ಆಫ್ ಇಂಡಿಯಾ 1921ರ ಸಂಪೂಟದ ಪ್ರಕಾರ ಜಂಗಮ ಜಾತಿಯನ್ನು ದಿ ಡಿಪ್ರೆಸ್ಡ್ ಕ್ಲಾಸ್, 1935 36ರಲ್ಲಿ, ದಿ ಫಸ್ಟ್ ಸೆಡ್ಯುಲ್ಡ್ ಕಾಸ್ಟ್ ಪಟ್ಟಿಯಲ್ಲಿ ಜಂಗಮ ಜಾತಿಯನ್ನು ಸೇರಿಸಲಾಗಿರುತ್ತದೆ. ನಂತರ ಭಾರತ ಸ್ವತಂತ್ರವಾದ ಬಳಿಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಜಂಗಮರು ಪರಿಶಿಷ್ಟರು ಎಂದು ಉಲ್ಲೆಖಿಸಿ, ಪರಿಶಿಷ್ಟ ಜಾತಿಯ ಯಾದಿಯಲ್ಲಿ ಬರಲು ಅಸ್ಪ್ರಶ್ಯತೆ ಮಾನದಂಡವಲ್ಲ ಎಂದು ತಿಳಿಸಿದ್ದಾರೆ. ಆಗಿನ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರು ಅಂದಿನ ಪರಿಶಿಷ್ಟ ಯಾದಿಯಲ್ಲಿ ಬೇಡ ಜಂಗಮರನ್ನು ಸೇರಿಸಿ, ಆದೇಶ ನೀಡಿರುತ್ತಾರೆ. ನಂತರ 1956ರಲ್ಲಿ ರಾಜ್ಯಗಳ ಪೂನರ್ ವಿಂಗಡಣೆಯಾದ ಬಳಿಕ ಪರಿಶಿಷ್ಟ ಜಾತಿ ಪಟ್ಟಿಯನ್ನು ಪುನರ್ ತಿದ್ದುಪಡಿ ಮಾಡಿ, ಆಂದ್ರ ಪ್ರದೇಶದಲ್ಲಿ 9 ಜಿಲ್ಲೆಗಳು, ಮಹಾರಾಷ್ಟ್ರದಲ್ಲಿ 5 ಮತ್ತು ನಮ್ಮ ರಾಜ್ಯದಲ್ಲಿ ಬೀದರ್, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿಯ ಬೇಡ ಜಂಗಮರು ವಾಸಿಸುತ್ತಾರೆ ಎಂದು ರಾಷ್ಟ್ರಪತಿಗಳು ಆದೇಶಿಸಿದ್ದಾರೆ. 1977ರಲ್ಲಿ ಆಗಿನ ರಾಷ್ಟ್ರಪತಿಗಳು ನಮ್ಮ ರಾಜ್ಯದ ಮೂರು ಜಿಲ್ಲೆಗಳ ಕ್ಷೇತ್ರ ನಿರ್ಭಂದನೆ ತೆಗೆದು ಹಾಕಿ, ಬೇಡ ಜಂಗಮರು ಇಡೀ ರಾಜ್ಯಾದ್ಯಂತ ವಾಸಿಸಿರುತ್ತಾರೆ ಎಂದು ಆದೇಶ ಹೊರಡಿಸಿರುತ್ತಾರೆ ಎಂದು ವಿವರಿಸಿದರು.

ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡುವಾಗ ಕರ್ನಾಟಕ ಮುಖ್ಯ ಗೆಜೆಟಿಯರ್ ಡಾ.ಯು.ಸೂರ್ಯನಾಥ ಕಾಮತ್ ಅವರ ವರದಿಯನ್ನು ಪಾಲನೆ ಮಾಡಲು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಎಲ್ಲ ಜಿಲ್ಲೆಗಳ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಈ ವರದಿಯಲ್ಲಿ ಮಾಮುಲಿ ಜಂಗಮರೆ ಬೇಡ ಜಂಗಮರೆಂದು, ವೀರಶೈವ ಲಿಂಗಾಯತ ಜಂಗಮರೆ ಬೇಡ ಜಂಗಮರೆಂದು ಸ್ಪಷ್ಟವಾಗಿ ನಮೂದಿಸಿ ಬೇಡ ಜಂಗಮರಿಗೆ ಗ್ರಾಮಗಳಲ್ಲಿ ಸ್ವಾಮಿ, ಅಯ್ಯಗೊಳು ಮತ್ತು ಜಂಗಮ ಎಂದು ಕರೆಯುತ್ತಾರೆ. ಇವರು ಗಂಟೆ ಕಟ್ಟಿದ ಕೋಲು ಮತ್ತು ಜೋಳಿಗೆಯೊಂದಿಗೆ ಕಾಂತಿ ಭಿಕ್ಷೆ ಬೇಡಿ ಜೀವನ ನಡೆಸುತ್ತಾರೆ ಎಂದು ತಮ್ಮ ವರದಿಯಲ್ಲಿ ಉಲ್ಲೆಖಿಸಿದ್ದಾರೆ. ಇತ್ತಿಚೀನ ದಿನಗಳಲ್ಲಿ ರವಿಂದ್ರ ಸ್ವಾಮಿ ಅವರಿಗೆ ತಹಸಿಲ್ದಾರರು ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದ್ದು, ಇದರ ಬಗ್ಗೆ ಕೆಲವು ಸಂಘಟನೆಗಳು ಜಿಲ್ಲಾ ಉಸ್ತುವಾರಿ ಮಂತ್ರಿ ಪ್ರಭು ಚೌಹಾಣ ಅವರಿಗೆ ದೂರು ನೀಡಿದ್ದೂ, ದೂರಿನನ್ವಯ ಉಸ್ತುವಾರಿ ಸಚಿವರು ಮೌಖಿಕವಾಗಿ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗಳಿಗೆ ರವಿಂದ್ರ ಸ್ವಾಮಿ ಪಡೆದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ರದ್ದು ಪಡಿಸಲು ಮತ್ತು ಇದರ ಬಗ್ಗೆ ತನಿಖೆ ಮಾಡಲು ಸಮಿತಿ ರಚಸಬೇಕು ಹಾಗೇ ಪ್ರಮಾಣ ಪತ್ರ ನೀಡಿರುವ ತಹಸಿಲ್ದಾರರನ್ನು ಅಮಾನತ್ತು ಮಾಡುವಂತೆ ಸೂಚಿಸಿರುವ ಕ್ರಮ ನ್ಯಾಯಾಲಯದ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ ಎಂಬುದನ್ನು ಜಿಲ್ಲಾಧಿಕಾರಿಗಳು ಉಸ್ತುವಾರಿ ಸಚಿವರಿಗೆ ಮನವರಿಕೆ ಮಾಡಿ ಕೊಡಬೇಕೆಂದು ಆಗ್ರಹಿಸಿದರು.

ನ್ಯಾಯವಾದಿ ಸಂಜಯ ಮಠಪತಿ ಮಾತನಾಡಿ, ಬೀದರ್ ತಹಸಿಲ್ದಾರರು ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದಲ್ಲಿ ನೀಡಿರುವ ನಿರ್ದೇಶನ ಪಾಲಿಸಿ ಮತ್ತು ವಿಚಾರಣೆ ಕೈಗೊಂಡು ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಿರುತ್ತಾರೆ. ಉಚ್ಛ ನ್ಯಾಯಾಲಯದಲ್ಲಿ ರಾಜ್ಯ ಸರ್ಕಾರ ಬೀದರ್ ಜಿಲ್ಲಾಧಿಕಾರಿ, ಸ್ಥಳಿಯ ತಹಸಿಲ್ದಾರರು ಮತ್ತು ಇತರರು ಪಕ್ಷಗಾರರಾಗಿದ್ದು, ಅವರ ವಾದ ಮತ್ತು ದಾಖಲೆಗಳು ಪರಿಗಣಿಸಿ ಆದೇಶ ಹೊರಡಿಸಿರುತ್ತಾರೆ. ಆದ್ದರಿಂದ ಉಚ್ಛ ನ್ಯಾಯಾಲಯದ ಆದೇಶ ಚಾಚೂ ತಪ್ಪದೆ ಪಾಲಿಸುವುದು ಜಿಲ್ಲಾಧಿಕಾರಿಗಳ ನ್ಯಾಯಯುತ ಕರ್ತವ್ಯವಾಗಿದೆ. ಹೀಗಿರುವಾಗ ಕೆಲವು ಸಂಘಟನೆಗಳು ಮತ್ತು ಜಿಲ್ಲೆಯ ಮಂತ್ರಿಗಳ ಒತ್ತಡಕ್ಕೆ ಮಣಿದು ಸಮಿತಿ ರಚಿಸಿದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದರು.
ರವಿಂದ್ರ ಸ್ವಾಮಿ ಮಾತನಾಡಿ, ತಾನು 2013ರಲ್ಲಿ ಎಲ್ಲ ದಾಖಲೆಗಳ ಸಮೇತ ಪರಿಶಿಷ್ಟ ಜಾತಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು. ಅಂದಿನ ಡಿ.ಸಿ ಅವರು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಮೂಲಕ ವರದಿ ತರಿಸಿಕೊಂಡರು. ವರದಿ ತನ್ನ ಪರವಾಗಿದೆ. 2016ರಲ್ಲಿ ಬೀದರ್ ತಹಸಿಲ್ದಾರರರಿಗೆ ಶಾಲಾ ದಾಖಲಾತಿಯೊಂದಿಗೆ ಸುಮಾರು 110 ಪುಟಗಳ ದಾಖಲೆ ಸಲ್ಲಿಸಲಾಗಿತ್ತು. ಅದಕ್ಕೆ ಗ್ರಾಮ ಲೆಕ್ಕಿಗ ಮತ್ತು ಕಂದಾಯ ನಿರಿಕ್ಷಕರು ಪಂಚನಾಮೆ ಮಾಡಿ, ಬೇಡ ಜಂಗಮ ಪ್ರಮಾಣ ಪತ್ರ ನೀಡಲು ಶಿಫಾರಸ್ಸು ಮಾಡಿದರು. ಆದರೆ ಅದಕ್ಕೆ ತಹಸಿಲ್ದಾರರು ತಿರಸ್ಕರಿಸಿದರು. ನಂತರ ಸಹಾಯಕ ಆಯುಕ್ತರ ಬಳಿ ಮೇಲ್ಮನವಿ ಸಲ್ಲಿಸಲಾಗಿ ಅವರು ಅದನ್ನು ತಿರಸ್ಕರಿಸಿದ ಕಾರಣ ಜಿಲ್ಲಾಧಿಕಾರಿಗಳ ಬಳಿ ಮೇಲ್ಮನವಿ ಸಲ್ಲಿಸಲಾಗಿತ್ತು. ಈಲ್ಲಾಧಿಕಾರಿಗಳು ಸಹ ಅದನ್ನು ಮನ್ನಿಸದ ಕಾರಣ ಕರ್ನಾಟಕ ಉಚ್ಛ ನ್ಯಾಯಾಲಯ ಕಲಬುರಗಿ ಸಂಚಾರಿ ಪೀಠಕ್ಕೆ ರಿಟ್ ಅರ್ಜಿ ಸಲ್ಲಿಸಲಾಯಿತು. 2018ರಲ್ಲಿ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಮತ್ತೆ ಉಚ್ಛ ನ್ಯಾಯಾಲಯದಲ್ಲಿ ಚುನಾವಣೆಯಲ್ಲಿ ನಿಲ್ಲಲು ಪ್ರತ್ಯೇಕ ಅರ್ಜಿ ಸಲ್ಲಿಸಲಾಯಿತು. ನ್ಯಾಯಾಲಯ ಅದಕ್ಕೆ ಪುರಸ್ಕರಿಸಿತು. ಆದರೆ, ಚುನಾವಣೆ ಅಧಿಕಾರಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಇಲ್ಲದ ಕಾರಣ ಅದನ್ನು ತಿರಸ್ಕರಿಸಿದರು. ಇದನ್ನು ಪ್ರಶ್ನಿಸಿ ಮತ್ತೊಮ್ಮೆ ನ್ಯಾಯಾಲಯದ ಮೇಟ್ಟಿಲೇರಿದಾಗ ತನ್ನ ಪರವಗಿ ಆದೇಶ ಹೊರಡಿಸಿತು. ಬೀದರ್ ತಹಸಿಲ್ದಾರರು ಇಲ್ಲ ಸಲ್ಲದ ಸಬುಬು ತೋರಿಸಿ ತಿರಸ್ಕರಿಸಿದರು. ಪುನಃ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿ ಬೀದರ್ ತಹಸಿಲ್ದಾರರಿಗೆ ನಿರ್ದಿಷ್ಟ ನಿರ್ದೇಶನ ನೀಡಿ ಜಾತಿ ಪ್ರಮಾಣ ಪತ್ರ ನೀಡಲು ಆದೇಶಿಸಿರುತ್ತಾರೆ. ನ್ಯಾಯಾಲಯದ ಆದೇಶದಂತೆ ತಹಸಿಲ್ದಾರರು ತನಗೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಿರುತ್ತಾರೆ ಎಂದು ವಿವರಿಸಿದರು.
ಸಮಾಜದ ಕಾರ್ಯಾಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಮಾತನಾಡಿ, ರವಿಂದ್ರ ಸ್ವಾಮಿ ಅವರಿಗೆ ನೀಡಿರುವ ಜಾತಿ ಪ್ರಮಾಣ ಪತ್ರ ಕಾನೂನು ಬದ್ದವಾಗಿದ್ದು, ಈ ವಿಚಾರವಾಗಿ ವಿರೋಧಿಸುವವರು ಅಧಿಕಾರಿಗಳಿಗಾಗಲಿ ಅಥವಾ ಪತ್ರಕರ್ತರಿಗೆ ತಮ್ಮ ಬಳಿ ಸಾಕ್ಷಾಧಾರ ಒದಗಿಸುವಂತೆ ಸವಾಲೆಸೆದ ಅವರು, ಈ ವಿಚಾರದಲ್ಲಿ ಸಮಾಜದಲ್ಲಿ ಅನಗತ್ಯ ಗೊಂದಲ ಉಂಟು ಮಾಡಬಾರದೆಂದು ಎಚ್ಚರಿಸಿದರು. ಸಮಾಜದ ಮುಖಂಡರಾದ ಮಹೇಶ್ವರ ಸ್ವಾಮಿ, ವರದಯ್ಯ ಸ್ವಾಮಿ, ಸಂಜು ಸ್ವಾಮಿ ಸೇರಿದಂತೆ ಇತರರಿದ್ದರು.

Be the first to comment

Leave a Reply

Your email address will not be published.


*