ಕುರುಬ ಕಬ್ಬಲಿಗ ಒಂದೇ ನಾಣ್ಯದ ಏರಡು ಮುಖಗಳಿದ್ದಂತೆ – ಶಾಸಕ ಬಂಡೆಪ್ಪಾ ಖಾಶೆಂಪೂರ್

ವರದಿ:ಶರಣಪ್ಪ ಖಾಶಂಪೂರ ಬೀದರ್


 



ಮರಕುಂದಾ : ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ
ಕುರುಬ ಕಬ್ಬಲಿಗ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ – ಶಾಸಕ ಬಂಡೆಪ್ಪಾ ಖಾಶೆಂಪೂರ್

ಬೀದರ್ ಅ.28: ತ್ರೇತಾಯುಗದಲ್ಲಿ ಮಹರ್ಷಿ ವಾಲ್ಮೀಕಿಯವರು ರಚಿಸಿದ ಮಹಾ ಕಾವ್ಯ ರಾಮಾಯಣದಲ್ಲಿ ಅಣ್ಣ ತಮ್ಮಂದಿರು ಹೇಗೆ ಇರಬೇಕೆಂದು ತೋರಿಸಿಕೊಟ್ಟಿದ್ದಾರೆ. ರಾಮ-ಲಕ್ಷ್ಮಣರ ಸಂಬಂಧ, ಲವ-ಕುಶರ ಸಂಬಂಧ ಉತ್ತಮವಾಗಿ ಮತ್ತು ಆದರ್ಶವಾಗಿ ಚಿತ್ರಿಸಿದ್ದಾರೆ. ಮತ್ತು ವಾಲಿ ಮತ್ತು ಸುಗ್ರೀವ ಅಣ್ಣ-ತಮ್ಮಂದಿರ ಜಗಳ ವಿನಾಶಕ್ಕೆ ಕಾರಣ ಎಂಬುವುದನ್ನು ತೋರಿಸಿದ್ದಾರೆ. ಇಂದಿನ ಸಮಾಜದಲ್ಲಿ ನಾವು ಯಂತ್ರ ತಂತ್ರಜ್ಞಾನದಿಂದ ಮುಂದುವರೆದಿದ್ದರೂ ಭಾತೃತ್ವದ ತತ್ವವನ್ನು ಮರೆತು ಸಂಬಂಧಗಳಿಗೆ ಬೆಲೆ ಇಲ್ಲದಾಗಿ ಅನಾಗರಿಕರಾಗಿ ಬಾಳುತ್ತಿದ್ದೇವೆ. ಇಂದಿನ ಸಮಾಜಕ್ಕೆ ವಾಲ್ಮೀಕಿ ರಚಿಸಿದ ಮಹಾ ಕಾವ್ಯದ ಆದರ್ಶವನ್ನು ಎಲ್ಲರೂ ಅರಿತುಕೊಳ್ಳುವುದು ಸೂಕ್ತವೂ ಅವಶ್ಯಕವೂ ಆಗಿದೆ ಎಂದು ಬೀದರ ದಕ್ಷಿಣ ಕ್ಷೇತ್ರದ ಶಾಸಕ ಮಾಜಿ ಸಚಿವ ಬಂಡೆಪ್ಪಾ ಖಾಶೆಂಪೂರ್ ಅವರು

ಹೆಳಿದರು.
ಅವರು ಇತ್ತಿಚೆಗೆ ಬೀದರ ತಾಲೂಕಿನ ಮರಕುಂದಾ ಗ್ರಾಮದಲ್ಲಿ ಟೋಕರೆ ಕೋಲಿ ಸಮಾಜ ಸಂಘದ ಗ್ರಾಮ ಘಟಕದಿಂದ ಏರ್ಪಡಿಸಿದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ಮಂದಿರದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

ಕುರುಬ ಹಾಗೂ ಕಬ್ಬಲಿಗ ಸಮಾಜದವರು ಒಂದೇ ನಾಣ್ಯದ ಏರಡು ಮಖಗಳಿದ್ದಂತೆ, ಈ ಏರಡು ಸಮಾಜದವರು ಸಹೊದರರಂತೆ ಬಾಳುತ್ತಿದ್ದೆವೆ. ನನ್ನ ಕ್ಷೇತ್ರದಲ್ಲಿ ಯಾವೂದೆ ತಾರತಮ್ಯ ಮಾಡದೇ, ಸರ್ವ ಸಮಾಜದ ವಳತಿಗಾಗಿ ಶ್ರಮಿಸುತ್ತಿದ್ದೇನೆ. ಯಾವೂದೆ ರೀತಿಯ ಸರ್ಕಾರಿ ಸೌಲಭ್ಯ ಒದಗಿಸುವುದರಲ್ಲಿ ಯಾವೂದೆ ರೀತಿಯ ತಾರತಮ್ಯ ಮಾಡಿಲ್ಲ ಎನ್ನುತ್ತಾ, ಅಂಬಿಗ ಸಮಾಜ ನಂಬಿಗಸ್ಥ ಸಮಾಜವಾಗಿದೆ, ಒಂದು ದಡದಿಂದ ಮತ್ತೊಂದು ದಡಕ್ಕೆ ಪ್ರಾಮಾಣಿಕತೆಯಿಂದ ತಲುಪಿಸುವ ಕಾಯಕ ಮಾಡುವ ಸಮಾಜವೇ ಅಂಬಿಗ, ಕೋಲಿ ಸಮಾಜವಾಗಿದೆ ಎಂದು ಹೇಳಿದರು.

ಕಾಂಗ್ರೇಸ್ ಪಕ್ಷದ ಯುವ ಮುಖಂಡ ಚಂದ್ರಸಿಂಗ್ ಅವರು ಮಾತನಾಡಿ, ಟೋಕರಿ ಕೋಳಿ ಸಮಾಜಕ್ಕೆ ಎಸ್.ಟಿ. ಪ್ರಮಾಣ ಪತ್ರ ನಿಡುತ್ತಿರುವುದು ಬೀದರ ಜಿಲ್ಲೆಯಲ್ಲಿ ಮಾತ್ರ. ಇದಕ್ಕೆ ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಸಾಹೇಬರÀ ಕೊಡುಗೆ ಅಪಾರವಾಗಿದೆ. ದಕ್ಷಿಣ ಕ್ಷೇತ್ರದ ಎಸ್.ಟಿ. ಜನರ ಹಕ್ಕಿಗಾಗಿ ಹೋರಾಟಕ್ಕೆ ಸದಾ ನಮ್ಮ ಬೆಂಬಲವಿದೆ ಎಂದರು.
ವಿಠಲರಾವ್ ಭೂತಾಳಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಟೋಕರಿ ಕೋಳಿ ಸಮಾಜ ಸಂಘದ ಅಧ್ಯಕ್ಷ ಜಗನ್ನಾಥ ಜಮಾದಾರ್ ಸಹ ಮಾತನಾಡಿದರು. ಹಳ್ಳಿಖೇಡ (ಕೆ) ಆಶ್ರಮದ ಪರಮ ಪೂಜ್ಯ ದತ್ತಾತ್ರೇಯ ಗೂರುಜಿ, ವಿಠಲಪೂರ್ ಮಾತಾ ಮಾಣಿಕೇಶ್ವರಿ ಆಶ್ರಮದ ಪರಮ ಪೂಜ್ಯ ಶಾಂತಿಬಾಬಾ, ರೇಕುಳಗಿಯ ಮಹರ್ಷಿ ವಾಲ್ಮೀಕಿ ಆಶ್ರಮದ ಪರಮ ಪೂಜ್ಯ ಬಕ್ಕಪ್ಪಾ ಆಶಿರ್ವಚನ ನೀಡಿದರು. ಪರಿಸರ ಪ್ರೇಮಿ ಶೈಲೇಂದ್ರ ಕಾವಡಿ, ಅಂಬಿಗರ ಚೌಡಯ್ಯ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ, ಬೀದರ ತಾಲೂಕಾ ಪಂಚಾಯತ್ ಅಧ್ಯಕ್ಷ ವಿಜಯಕುಮಾರ ಬರೂರ್, ಟೋಕರೆ ಕೋಲಿ ಸಮಾಜ ಸಂಘದ ದಕ್ಷೀಣ ಕ್ಷೇತ್ರದ ಅಧ್ಯಕ್ಷ ಶನ್ಮೂಖಪ್ಪಾ ಶೇಕಾಪೂರ್, ಗ್ರಾಮ ಪಂಚಾಯತ್ ಅಧ್ಯಕ್ಷ ಗೀತಾ ಕೋರಿ, ಉಪಾಧ್ಯಕ್ಷ ಮಾರುತಿ ಶಾಹಾಬಾದ್, ಪಿಡಿಓ ಶಶಿಕಲಾ, ಮಾರುತಿ ಮಾಸ್ಟರ್, ಮಲ್ಲಿಕಾರ್ಜುನ ಅಂಬಿಗಾರ್, ಪುಂಡ್ಲೀಕಪ್ಪಾ ಲಿಂಗನಬಾಡ್, ಜಕಿ ಅಹೇಮದ್, ಏಕಬಾಲ್ ಶರೀಫ್, ಮಾಣೀಕ ಭೂತಾಳೆ,  ಬಾಳಪ್ಪಾ ಅರ್ಕಿ,  ತುಕಾರಾಮ್ ಚಿನಕೇರಾ, ಶಾಮರಾವ್ ಹುಡೇದ್, ಇತರರು ವೇದಿಕೆಮೇಲೆ ಇದ್ದರು.

ರತ್ನಪ್ಪಾ ಇಳಗೇರೆ ಪ್ರಾಸ್ತಾವಿಕವಾಗಿ ಮಾನತಾಡಿದರು, ಚಂದ್ರಕಾಂತ ಹಳ್ಳಿಖೇಡಕರ್ ನಿರೂಪಿಸಿರೇ, ಮಲ್ಲಿಕಾರ್ಜುನ್ ಅಂಬಿಗಾರ್ ವಂದಿಸಿದರು.

ಈ ಕಾರ್ಯಕ್ರಮದಲ್ಲಿ ಶರಣಪ್ಪಾ ಖಾಶೆಂಪೂರ್, ಬಲವಂತ ಮಂದಕನಳ್ಳಿ, ಅಶೋಕ ಬಗದಲ್, ಸಂಜುಕುಮಾರ ಸಿರ್ಸೇ ಅಲಿಯಂಬರ್, ನರಸಪ್ಪಾ ಕಮಠಾಣ, ಸತೀಷ ಘತವಾಡಿ, ಶಾಮಣ್ಣಾ ಪಾತರಪಳ್ಳಿ, ವಿರಶೇಟ್ಟಿ ವಿಠಲಪೂರ್, ಹಣಮಂತ ವಿಠಲಪೂರ್, ಬಸವರಾಜ ಗಾಂಧಿನಗರ, ಸುಭಾಷ ರೇಕುಳಗಿ, ಹಾಗೂ ಗ್ರಾಮದ ಹಿರಿಯರು, ಮಹಿಳೆಯರು, ಮಕ್ಕಳು ಇದ್ದರು.

ಮೊದಲಿಗೆ ಮಹರ್ಷಿ ವಾಲ್ಮೀಕಿ ಮಂದಿರದ ಶಂಕುಸ್ಥಾಪನೆಗೆ ಶಾಸಕ ಬಂಡೆಪ್ಪಾ ಖಾಶೆಂಪೂರ್ ಅವರು ಗುದುಳಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.

ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ  ಮುನ್ನಡೆಸಲು ಸಾಧ್ಯ

ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000 ಕ್ಕೂ ಹೆಚ್ಚುನ ದೇಣಿಗೆ ಸಹಾಯ ನೀಡಬಹುದು
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು

Amaresh
A/c 62053220183
IFC sbin 0020354

Be the first to comment

Leave a Reply

Your email address will not be published.


*