ಜಿಲ್ಲಾ ಸುದ್ದಿಗಳು
ಸಪಾಯಿ ಕರ್ಮಚಾರಿಗಳಿಗೆ ನಿವೇಶನಕ್ಕೆ ಕ್ರಮ
ಜಿಲ್ಲೆಯಲ್ಲಿರುವ ನಿವೇಶನ ರಹಿತ ಸಫಾಯಿ ಕರ್ಮಚಾರಿಗಳಿಗೆ ನಿವೇಶನ ಒದಗಿಸಲು ಕ್ರಮವಹಿಸುವಂತೆ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಾಯನಗೌಡ ಅವರಿಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸೂಚಿಸಿದರು. ಈಗಾಗಲೇ 45 ಜನರ ಪೈಕಿ 20 ಜನರಿಗೆ ನಿವೇಶನ ಗುರುತಿಸಿದ್ದು, ಉಳಿದ 25 ಜನಕ್ಕೆ ನಿವೇಶನ ನೀಡಲು ಕ್ರಮವಹಿಸಲು ತಿಳಿಸಿದರು. ಒಟ್ಟಾರೆಯಾಗಿ ಜಿಲ್ಲೆಯಲ್ಲಿರುವ ಸಫಾಯಿ ಕರ್ಮಚಾರಿಗಳಿಗೆ ಸೂರು ಇಲ್ಲವೆಂಬ ಕೂಗು ಕೇಳಬಾರದೆಂದು ತಿಳಿಸಿದರು.
ಎಸ್‍ಸಿಪಿ & ಟಿಎಸ್‍ಪಿ ಪ್ರಗತಿ
ಪ್ರಸಕ್ತ ಸಾಲಿನ ವಿವಿಧ ಇಲಾಖೆಯಿಂದ ವಿಶೇಷ ಘಟಕ ಯೋಜನೆಯಡಿ ನಿಗದಿಪಡಿಸಿದ 94 ಕೋಟಿ ರೂ.ಗಳ ಅನುದಾನ ಪೈಕಿ ಬಿಡುಗಡೆಯಾದ 60.95 ಕೋಟಿ ರೂ.ಗಳ ಪೈಕಿ 33.79 ಕೋಟಿ ರೂ. ಖರ್ಚು ಮಾಡಲಾಗಿದೆ. ಅದೇ ರೀತಿ ಗಿರಿಜನ ಉಪಯೋಜನೆಯಡಿ ನಿಗದಿಪಡಿಸಿದ 37.13 ಕೋಟಿ ರೂ.ಗಳ ಪೈಕಿ 22.29 ಕೋಟಿ ರೂ. ಬಿಡುಗಡೆಯಾಗಿದ್ದು, 15.29 ಕೋಟಿ ರೂ.ಗಳಷ್ಟು ಖರ್ಚು ಮಾಡಲಾಗಿದೆ.
ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾಧಿಕಾರಿ
ಬಾಗಲಕೋಟೆ:ಅಲೆಮಾರಿ ಅಭಿವೃದ್ದಿ ಕೋಶ ಹಾಗೂ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ಆಯ್ಕೆಯಾದ 10 ಜನ ಫಲಾನುಭವಿಗಳಿಗೆ ತಲಾ 1.75 ಲಕ್ಷ ರೂ.ಗಳ ಚೆಕ್‍ಗಳನ್ನು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸೋಮವಾರ ವಿತರಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಅಲೆಮಾರಿ, ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯಗಳ ಅಭಿವೃದ್ದಿ ನಿಗಮದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿತರಿಸಿ ಮಾತನಾಡಿದ ಅವರು ರಾಜೀವ್ ಗಾಂಧಿ ವಸತಿ ಯೋಜನೆಯಡಿ ಈಗಾಗಲೇ 10 ಜನ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, 1.75 ಲಕ್ಷ ರೂ.ಗಳ ಅನುದಾನ ಮನೆಯನ್ನು ಕಟ್ಟಿಕೊಂಡಿದ್ದು, ಮನೆಗಳು ಪೂರ್ಣಗೊಳ್ಳದ ಕಾರಣ ಅಂತಿಮ ಕಂತಿನ ಅನುದಾನ ಅಲೆಮಾರಿ ಅಭಿವೃದ್ದಿ ಕೋಶದಿಂದ ಬಿಡುಗಡೆಯಾಗಿದ್ದು, ಆಯ್ಕೆಯಾದ 10 ಜನ ಫಲಾನುಭವಿಗಳಿಗೆ ತಲಾ 1.75 ಲಕ್ಷ ರೂ.ಗಳ ಚೆಕ್‍ನ್ನು ವಿತರಿಸಿರುವುದಾಗಿ ತಿಳಿಸಿದರು.
ನಿಗಮದಿಂದ ಪ್ರಸಕ್ತ ಸಾಲಿಗೆ ಉದ್ಯಮಶೀಲತಾ, ಸ್ವಯಂ ಉದ್ಯೋಗ ಹಾಗೂ ಮೈಕ್ರೋ ಕ್ರೆಡಿಟ್ ಯೋಜನೆಯಡಿ ಒಟ್ಟು 448 ಗುರಿಗೆ 162 ಭೌತಿಕ ಸಾಧನೆ ಮಾಡಲಾಗಿದೆ. ಕಳೆದ ಸಾಲಿನಲ್ಲಿ ಅಲೆಮಾರಿ ಅಭಿವೃದ್ದಿ ಕೋಶದದಿಂದ ಉದ್ಯಮ ಶೀಲತಾ ಅಭಿವೃದ್ದಿ ಯೋಜನೆಯಡಿ 67 ಫಲಾನುಭವಿಗಳ ಬಾಕಿ ಉಳಿದಿದೆ. ಮೈಕ್ರೋ ಕ್ರೆಡಿಟ್ ಕಿರುಸಾಲ ಯೋಜನೆಯಡಿ ಮುಧೋಳ ತಾಲೂಕಿನ ಚನ್ನದಾಸರ ಮಹಿಳಾ ಪರಿಶಿಷ್ಟ ಜಾತಿ ಅಭಿವೃದ್ದಿ ಸಂಘಕ್ಕೆ ಮಂಜೂರಾತಿ ಮಾತ್ರ ಬಾಕಿ ಇರುತ್ತದೆ ಎಂದು ಸಭೆಗೆ ತಿಳಿಸಲಾಯಿತು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಹಾಗೂ ವಿವಿಧ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಮಹೇಶ ಪೋತದಾರ, ನಗರಸಭೆ ಪೌರಾಯುಕ್ತ ಮುನಿಷಾಮಪ್ಪ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಾಯನಗೌಡ, ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಸದಸ್ಯರಾದ ಶಂಕ್ರಪ್ಪ ರುದ್ರಾಕ್ಷಿ, ಬಸವರಾಜ ದಾಸರ, ಮದ್ದಾನಪ್ಪ ಕಿಳ್ಳಿಕೇತರ, ಬಸಪ್ಪ ಹುನಕುಂಟಿ, ಅಂಬೇಡ್ಕರ ಅಭಿವೃದ್ದಿ ನಿಗಮದ ಕಚೇರಿ ಅಧೀಕ್ಷಕ ಗೋಪಾಲ ಲಮಾಣಿ ಸೇರಿದಂತೆ ಇತರರು ಉಪಸ್ಥಿರಿದ್ದರು.
Be the first to comment