ಸಾರ್ವಜನಿಕರ ಸೇವೆಗೆ ದಾನವಾಗಿ ಕೊಟ್ಟ ಮುಕ್ತಿ ವಾಹನ ಸೇವೆ ಸಾರ್ವಜನಿಕರಿಗೆ ಅರ್ಪಿಸದೇ – ಇನ್ನೂ ಸಾಗರ ಉಪ ವಿಭಾಗೀಯ ಆಸ್ಪತ್ರೆ ಆವರಣದಲ್ಲೇ ….?!

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಸಾಗರ

*ಕಣ್ಣಿದ್ದು ಜಾಣ ಕುರುಡುತ್ತನದತ್ತ ಸಾಗರ ನಗರಸಭೆ ಆಡಳಿತ ಮಂಡಳಿ & ಸಾಗರ ಉಪ ವಿಭಾಗೀಯ ಆಸ್ಪತ್ರೆ ಆಡಳಿತ ಮಂಡಳಿ*
*ಡಾ. ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ ) ಉಡುಪಿ ಹಾಗೂ ಸಾಗರ ತಾಲ್ಲೂಕು ಮೊಗವೀರ ಮಹಾಜನ ಸಂಘ, ಸಾಗರ ಸೇವಾ ಸಂಸ್ಥೆಯು ಒಂದು ಸುಸಜ್ಜಿತ ಬಡವರ ಶೋಷಿತರ ಸೇವೆಗಾಗಿ ಮುಕ್ತಿ ವಾಹನವನ್ನು ನೀಡಿದ್ದೂ, ನಿರ್ವಹಣೆ ಮಾಡಬೇಕಾದ ನಗರಸಭೆ ಸಾಗರ ಕುಂಭ ಕರ್ಣ ನಿದ್ರೆಗೆ ಜಾರಿದ್ದು ಸಾಗರದ ಉಪ ವಿಭಾಗೀಯ ಆಸ್ಪತ್ರೆಯ ಆವರಣದಲ್ಲಿ ಕಳೆದ ಎರಡು ತಿಂಗಳಿಗಿಂತ ಹೆಚ್ಚಿನ ಮಾಸಗಳು ಕಳೆದರೂ ಇದುವರೆಗೂ ಡಾ. ಜಿ ರಮೇಶ್ ಫ್ಯಾಮಿಲಿ (ರಿ )ಟ್ರಸ್ಟ್ ಹಾಗೂ ಸಾಗರ ತಾಲ್ಲೂಕು ಮೊಗವೀರ ಮಹಾಜನ ಸಂಘ ಸಾಗರ ನೀಡಿದ ಮುಕ್ತಿ ವಾಹನ ಸೇವೆಯು ಗಗನಕುಸುಮವಾಗಿರುವ ಹಿಂದೇ ಯಾವುದೋ ಖಾಸಗಿ ವ್ಯಕ್ತಿಗಳ ಪ್ರಭಾವ ಇದೆಯೆಂದು ಹಿಡಿಶಾಪ ಹಾಕುತ್ತಿರುವ ಸಾಗರೀಕರು….. ಈ ಸುಸಜ್ಜಿತ ಮುಕ್ತಿ ವಾಹನದ ಸೂಕ್ತ ನಿರ್ವಹಣೆಯತ್ತ ನಿರ್ಲಕ್ಷತನದ ಸಾಗರ ನಗರಸಭೆ ಧೋರಣೆ ಹಿಂದಿನ ಮರ್ಮವೇನು…….?! ದೇವರು ಕೊಟ್ಟರೂ ಪೂಜಾರಿ ಕೊಡೋಲ್ಲ ಅಂತಾಗಿದೆ ಈ ಮುಕ್ತಿ ವಾಹನ…. ಇನ್ನಾದರೂ ಸಾಗರ ನಗರಸಭೆಯ ಆಡಳಿತ ಮಂಡಳಿ ಇತ್ತ ಗಮನ ಹರಿಸುವರೋ ಕಾದು ನೋಡೋಣ.

CHETAN KENDULI

Be the first to comment

Leave a Reply

Your email address will not be published.


*