ಜಿಲ್ಲಾ ಸುದ್ದಿಗಳು
ಬಾಗಲಕೋಟರ: ಕರ್ನಾಟಕ ವಿಧಾನ ಪರಿಷತ್ ಚುನಾವಣಾ ನಿಮಿತ್ಯವಾಗಿ ಜಮಖಂಡಿ ಮತಕ್ಷೇತ್ರದ ಮುತ್ತೂರ, ಮೈಗೂರ, ಕಂಕನವಾಡಿ, ಕಡಪಟ್ಟಿ, ಹುನ್ನೂರು ಹಾಗೂ ಸಿದ್ದಾಪುರ ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರೊಡನೆ ಹಾಗೂ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ಸುನಿಲ್ ಗೌಡ ಪಾಟೀಲ್ ರವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಎಂದು ಮತಯಾಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಸಕ ಆನಂದ ನ್ಯಾಮಗೌಡ, ಎನ್ ಎಸ್ ದೇವರವರ್, ಅರುಣಕುಮಾರ್ ಶಹಾ, ವರ್ಧಮಾನ ನ್ಯಾಮಗೌಡ, ಭಸ್ಕರ್ ಬಡಿಗೇರ, ಎ ಆರ್ ಶಿಂಧೇ, ಸಿದ್ದು ಮೀಸಿ ಹಾಗೂ ಗ್ರಾಮದ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು ಉಪಸ್ಥಿತರಿದ್ದರು.
Be the first to comment