ರಾಜ್ಯ ಸುದ್ದಿಗಳು
ನಿಜಶರಣರ ಮೂರ್ತಿ ಭಗ್ನ ಮಾಡಿದು ಘೋರ ಅಪರಾಧ ಅಂತ ವ್ಯಕ್ತಿ ಗಳಿಗೆ ಕಠಿನ ಶಿಕ್ಷೆಯಾಗಬೇಕು
ಅಶೋಕ ವಾಲಿಕಾರ
ಕಾರ್ಯಾಧ್ಯಕ್ಷರು
ಶ್ರೀಗುರು ಪೀಠ ನರಸೀಪುರ ಹಾವೇರಿ
ಆಳಂದ:ಆಳಂದ ತಾಲ್ಲೂಕಿನ ಯಳಸಂಗಿ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನವರ ಮೂರ್ತಿ ಭಗ್ನ ಗೋಳಿದನ್ನು ಖಂಡಿಸಿ ರಾಜ್ಯದ ನಾನಾ ಜೀಲ್ಲೆಗಳಿಂದ ಆಗಮಿಸಿದ ಕೋಲಿ ಸಮಾಜದ ಬಂದುಗಳು ರಸ್ತೆ ತಡೆದು ಪ್ರತಿಭಟನೆ ಮಾಡಿದರು ಈ ಸಂದರ್ಭದಲ್ಲಿ ಮಾತನಾಡಿದ ಶಿವಾಜಿ ಮೆಟಗಾರ ನಿಜಶರಣರ ಅಂಬಿಗರ ಚೌಡಯ್ಯ ನವರ ಮೂರ್ತಿ ಭಗ್ನ ಗೋಳಿಸದ ಕಿಡಿಗೇಡಿಗೆ ಕಠಿಣ ಶಿಕ್ಷೆ ಆಗಬೇಕು ನಾನ ಬೇಲ್ ಲೆಬಲ್ ಸೆಕ್ಷನ್ ಗಳನ್ನು ಹಾಕಬೇಕು ಎಂದು ಆಗ್ರಹಿಸಿದರು.
ಅಫಜಲಪೂರದ ವಕೀಲರಾದ ದತ್ತಾತ್ರೇಯ ದೇವರನಾವದಗಿ ಮಾತನಾಡಿ ಕೀಡಗೇಡಿಗೆ ವಕೀಲರ ಬಾರ ಅಸೋಸಿಯೇಷನ್ ನಿಂದ ಯಾರು ಕೂಡ ಅವನ ಪರ ಬೇಲ ಅಪ್ಲೈ ಮಾಡಬೇಡಿ ಎಂದು ಮನವಿ ಮಾಡಿದೆನೆ ಬರಿ ಮಾತಾಡಿ ಹೋಗುವದರಿಂದ ಇಂತ ಕೀಡಗೇಡಿ ಗಳಿಗೆ ಬುದ್ದಿ ಕಲಿಸಲಿಕ್ಕೆ ಆಗುವುದಿಲ್ಲ ಇಂತವರನ್ನು ಕಾನೂನು ರೀತಿಯಲ್ಲಿ ಶಿಕ್ಷೆಗೆ ಗುರಿಯಾಗುವಂತೆ ಹೋರಾಟ ಮಾಡಬೇಕು ಎಂದು ಹೇಳಿದರು.
ಸಿಂದಗಿಯ ಡಾ.ನರಗೋದಿ ಯವರು ಮಾತನಾಡಿ ಕೋಲಿ ಸಮಾಜ ವಿಠ್ಠಲ ಹೆರೂರ ರವರ ಮಾರ್ಗದರ್ಶನದಲ್ಲಿ ಬೆಳದಿದೆ ಅವರು ಹೇಳಿಕೊಟ್ಟ ನಿಜವಾದ ಹೋರಾಟ ನಾವುಗಳು ಮಾಡಬೇಕು ಸಮಾಜಕ್ಕೆ ಅನ್ಯಾಯವಾದಾಗ ನಮ್ಮ ಪ್ರಾಣಕೋಡಲು ಸಿದ್ದರಾಗಿರಬೇಕು ಅಂತ ಹೋರಾಟ ಮಾಡಿದಾಗ ಮಾತ್ರ ನಾವು ನಮ್ಮ ಸಮಾಜಕ್ಕೆ ನ್ಯಾಯ ಕೋಡಲು ಸಾಧ್ಯ ಎಂದು ಹೇಳಿದರು.
ಅಫಜಲಪೂರದ ಲಚ್ಚಪ ಜಮಾದಾರ ಮಾತನಾಡಿ ಮೂರ್ತಿ ಭಗ್ನ ಮಾಡಿದ ಕೀಡಗೇಡಿ ಮತ್ತು ಅವನಿಗೆ ಕುಮ್ಮಕ್ಕು ನೀಡಿದ ವ್ಯಕ್ತಿಗಳಿ ಶಿಕ್ಷೆ ಆಗಬೇಕು ಪೋಲಿಸ ಇಲಾಖೆಯವರು ಈ ಒಬ್ಬ ವ್ಯಕ್ತಿಯನ್ನು ಬಂಧಿಸಿ ಕೋಲಿ ಸಮಾಜದ ಕಣ್ಣ ಹೊರೆಸುವ ತಂತ್ರ ಮಾಡಬಾರದು ಇವನ ಹಿಂದೆ ಇರುವ ಕಾಣದ ಕೈಗಳಿಗೂ ಕೋಳತ್ತೋಡಿಸಿ ಕೋಲಿ ಸಮಾಜಕ್ಕೆ ನ್ಯಾಯ ಕೋಡಿಸಬೇಕು ಎಂದು ಆಗ್ರಹಿಸಿದರು.ಕಲಬುರಗಿಯ ಅವ್ವಣ್ಣಗೌಡ ಪಾಟೀಲ್ ಮಾತನಾಡಿ ಆಳಂದ ತಾಲ್ಲೂಕಿನಲ್ಲಿ ಕೋಲಿ ಸಮಾಜದ ಜನರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು ಇದನ್ನು ತಡೆಯಬೇಕಾದ ತಾಲ್ಲೂಕ ಆಡಳಿತ ಕಣ್ಣ ಮುಚ್ಚಿ ಕಳಿತ್ತಿದ್ದಕ್ಕೆ ಈ ಘಟನೆಯೇ ಉದಾಹರಣೆ ಇದನ್ನು ಇಡೀ ಕೋಲಿ ಸಮಾಜ ಖಂಡಿಸುತ್ತದೆ.ದೇಶದ ಮಾಹಾನ ಪುರುಷ ಶ್ರೀ ನಿಜಶರಣರು ಮೌಡ್ಯತೆಯ ವಿರುದ್ಧ ಹೋರಾಡಿದ ಮಾನವ ಕುಲದ ಶ್ರೇಯಸ್ಸು ಬಯಸಿದಂತವರು ಅಂತಹಾ ಮಾನ ಪುರುಷನ ಚೌಡಯ್ಯ ನವರ ಮೂರ್ತಿ ಭಗ್ನ ಮಾಡಿದ ವ್ಯಕ್ತಿ ಗೆ ಕಠಿಣ ಶಿಕ್ಷೆಯಾಗಬೇಕು ಸರಕಾರವೇ ನಿಜಶರಣ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಕೋಡಬೇಕು ಎಂದು ಒತ್ತಾಯ ಮಾಡಿದರು.
Be the first to comment