ಮಹರ್ಷಿ ಶ್ರೀ ವಾಲ್ಮೀಕಿ ಗುರು ಜೀಯ ಜಯಂತಿ ಅದ್ದೂರಿ ಮೆರವಣಿಗೆ ಹಿಂದು ಧರ್ಮದ ಮೂಲ ಮಹಾ ಕಾವ್ಯ ರಾಮಾಯಣ ನೀಡಿದ ಧರ್ಮದ ಶ್ರೇಷ್ಠ ಗುರು ವಾಲ್ಮೀಕಿ

ವರದಿ: ದಯಾನಂದ ಮಿತ್ರಿ ಹುಮನಬಾದ


    ಜೀಲ್ಲಾ ಸುದ್ದಿಗಳು


ಹುಮನಾಬಾದ : ದೇಶ ಎಂದೂ ಮರೆಯಲಾಗದ ಮಹಾ ಕಾವ್ಯ ನೀಡಿದ ವಾಲ್ಮೀಕಿ ಅವರನ್ನು ಸ್ಮರಿಸುವುದು ಎಲ್ಲರ ಕರ್ತವ್ಯ ಎಂದು ಪುರಸಭೆ ಸದಸ್ಯ ಸುನೀಲ ( ಕಾಳಪ್ಪ ) ಪಾಟೀಲ್ ಹೇಳಿದರು . ತಾಲೂಕಿನ ಬೇನಚಿಂಚೋಳಿ ಗ್ರಾಮದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು . ಮಹರ್ಷಿ ವಾಲ್ಮೀಕಿ ರಾಮಾಯಣದ ಮೂಲಕ ಸಂಸ್ಕೃತಿ ಪರಂಪರೆ ಪರಿಚಯಿಸಿದ್ದಾರೆ . ಜತೆಗೆ ರಾಜನೀತಿ , ಸಾಮಾಜಿಕ ವ್ಯವಸ್ಥೆ ಸೇರಿದಂತೆ ಬದುಕಿಗೆ ಪೂರಕವಾದ ಅಂಶಗಳನ್ನು ತಿಳಿಸಿಕೊಟ್ಟಿದ್ದಾರೆ . ತ್ಯಾಗ ಮತ್ತು ಸಹೋದರತ್ವದ ಮಹತ್ವ ತುಂಬಿರುವ

ರಾಮಾಯಣವನ್ನು ಓದಿ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು . ಸಮಾಜ ಅಭಿವೃದಿಯಾಗಬೇಕಾದರೆ ಶಿಕ್ಷಣ ಅತ್ಯಂತ ಮುಖ್ಯ . ಹೆಣ್ಣು ಮಕ್ಕಳಲ್ಲಿ ಆಗಾಧವಾದ ಪ್ರತಿಭೆ ಇದ್ದು , ಅವರಿಗೆ ಗುಣ ಮಟ್ಟದ ಶಿಕ್ಷಣ ಕೊಡಿಸಬೇಕು . ಅವರಲ್ಲಿ ಆತ್ಮಸ್ಥೆರ್ಯ ತುಂಬಿ ಸ್ವತಂತ್ರವಾಗಿ ಬದುಕುವಂತೆ ಮಾಡಬೇಕು ಎಂದರು . ಸಾನಿಧ್ಯ ವಹಿಸಿದ ಹಳ್ಳಿಖೇಡ ( ಕೆ ) ವಾಲ್ಮೀಕಿ ಆಶ್ರಮದ ದತ್ತಾತ್ರೆಯ ಗುರುಜಿ ಮಾತನಾಡಿ , ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಭಾರತದ ಸಂಸ್ಕೃತಿಯ ಪ್ರತೀಕ . ರಾಮಾಯಣ ಕಲೆ , ಸಾಹಿತ್ಯ , ಸಂಸ್ಕೃತಿಯ ಸಂಗಮವಾಗಿದೆ . ಅಲ್ಲಿ ಬರುವ ಪಾತ್ರಗಳು , ಸನ್ನಿವೇಶಗಳು ನಮ್ಮನ್ನು

ರಾಮಾಯಣ ಜಾಗೃತಗೊಳಿಸಿ ಪರಿಪೂರ್ಣತೆಯತ್ತ ಕರೆದು ಕೊಂಡು ಹೋಗುವ ಶಕ್ತಿ ಹೊಂದಿವೆ ಎಂದು ಬಣ್ಣಿಸಿದರು . – ಮಾನವೀಯ ಮೌಲ್ಯಗಳು ರಾಮಾಯಣ ದಲ್ಲಿವೆ . ರಾಮಾಯಣ ಜಗತ್ತು ಇರುವ ತನಕ ಅಜರಾಮರವಾಗಿ ಇರುತ್ತದೆ . ಇಂತಹ ಮಹಾ ಕಾವ್ಯ ರಚಿಸಿದ ವಾಲ್ಮೀಕಿ ಜೀವನ ಆದರ್ಶಗಳನ್ನು ಸ್ಫೂರ್ತಿಯಾಗಿಟ್ಟುಕೊಂಡು ಸಾಧನೆ ಮಾಡಲು ಮುಂದಾದಾಗ ಅವರ ಜಯಂತಿ ಆಚರಣೆಗೆ ನಿಜವಾದ ಅರ್ಥ ಬರಲಿದೆ ಎಂದರು . ಕೋಳಿ ಸಮಾಜ ಪ್ರಧಾನ ಕಾರ್ಯದರ್ಶಿ ದಯಾ ನಂದ ಮೇತ್ರಿ ಮಾತನಾಡಿ , ಸರಕಾರದ ಸವಲತ್ತುಗಳನ್ನು ಬಳಕೆ ಮಾಡಿಕೊಂಡು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂದರು . ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಕಿಣಿಬಾಯಿ ಭಂಡಾರಿ , ದಯಾನಂದ ಪಾಟೀಲ್ , ಶಶಿಕಾಂತ ಭಂಡಾರಿ , ಘಾಳಪ್ಪಾ ಮಾಸ್ಟರ್ , ವಿನೋದಕುಮಾರ ಶೇರೊಜಿ , ಮಂಜುನಾಥ ಶೇರೊಜಿ , ಕರಬಸಪ್ಪಾ ಪಾಟೀಲ್ , ಹಣಮಂತರಡ್ಡಿ ಕೋರಿ , ಗಣಪತಿ , ಬಳಿರಾಮ , ಸೀರೆಪ್ಪಾ ಜಮಾದಾರ , ರಾಜಶೇಖರ ಜಮದಾರ , ಬಸವರಾಜ ಜಮಾದಾರ , ವೀರಶಟ್ಟಿ ಕಮಲಪೂರ ಇದ್ದರು .



 

ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ  ಮುನ್ನಡೆಸಲು ಸಾಧ್ಯ

ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000 ಕ್ಕೂ ಹೆಚ್ಚುನ ದೇಣಿಗೆ ಸಹಾಯ ನೀಡಬಹುದು
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು

Amaresh
A/c 62053220183
IFC sbin 0020354


 

Be the first to comment

Leave a Reply

Your email address will not be published.


*