ರಾಯಚೂರು ಹಿಂದುಳಿಯಲು 60 ವರ್ಷ ಕಾಲ ಜಿಲ್ಲೆ ಆಳಿದ ಪಕ್ಷ ಕಾರಣ – ಬಿಜೆಪಿ ರಾಜ್ಯಾಧ್ಯಕ್ಷ ಆರೋಪ

ವರದಿ: ಅಮರೇಶ ಗೋಷಲೆ


   ಜೀಲ್ಲಾ ಸುದ್ದಿಗಳು


ಚಿನ್ನ, ವಿದ್ಯುತ್, ಅನ್ನ ಹಾಗೂ ಬಟ್ಟೆ ನೀಡುವ ರಾಯಚೂರು ಜಿಲ್ಲೆ ಹಿಂದುಳಿಯಲು ಕಳೆದ 60 ವರ್ಷಗಳಿಂದ ಅಧಿಕಾರದಲ್ಲಿದ್ದ ಪಕ್ಷ ಜಿಲ್ಲೆಯ ಅಭಿವೃದ್ಧಿ ಮಾಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಪಾದಿಸಿದರು.

 ರಾಯಚೂರು: ವೀರಶೈವ ಕಲ್ಯಾಣ ಮಂಟಪದಲ್ಲಿ ಭಾರತೀ ಯ ಜನತಾ ಪಕ್ಷ ಜಿಲ್ಲಾ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ನೂತನ ರಾಜ್ಯಾಧ್ಯಕ್ಷರಿಗೆ ಅಭಿನಂದನಾ ಸಮಾರಂಭ ಹಾಗೂ ಕಾರ್ಯಕ ರ್ತರ ಜಿಲ್ಲಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಆದರೆ, ಬಿಎಸ್‌ವೈ ನೇತೃತ್ವದ ರಾಜ್ಯ ಸರಕಾರ ಈ ಭಾಗದ ಅಭಿವೃದ್ದಿಯೇ ನಮ್ಮ ಗುರಿ ಎಂದು ಹೈದ್ರಾಬಾದ ಕರ್ನಾಟಕ ಎಂಬ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಘೋಷಿಸಿ, ಈ ಭಾಗದ ಅಭಿವೃದ್ದಿಗೆ ಬೇಕಾಗುವ ಎಲ್ಲ ರೀತಿಯ ಸಹಾಯ ಸಹಕಾರ ನೀಡಲು ಮುಂದಾಗಿದ್ದಾರೆ ಎಂದರು.


ದೇಶದಲ್ಲಿ ಹಾಗೂ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ದೊಡ್ಡ ಮಟ್ಟದಲ್ಲಿ ಬೆಳೆಯಲು ಮುಖ್ಯ ಕಾರಣ ಕಾರ್ಯಕರ್ತರು. ಕಾರ್ಯಕರ್ತರ ತ್ಯಾಗದಿಂದ ಬಿಜೆಪಿ ಈ ಮಟ್ಟಕ್ಕೆ ಬೆಳೆದಿದೆ ಎಂದು ಅವರು ಹೇಳಿದರು.


ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಜಿಲ್ಲೆಯ ಪಕ್ಷದ ಕಾರ್ಯಕರ್ತರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡುವಂತೆ ರಾಜ್ಯಾಧ್ಯಕ್ಷರಲ್ಲಿ ಮನವಿ ಮಾಡಿದರು.

http://ಗಂಗಮತ ಮ್ಯಾಟ್ರಿಮೋನಿ, ಬೆಂಗಳೂರು ಇವರ ವತಿಯಿಂದ ದಿ. 03.11.2019 3ನೇ ವಧುವರರ ಸಮಾವೇಶ

ಸಂಸದ ರಾಜಾ ಅಮರೇಶ ನಾಯಕ, ಮಾಜಿ ವಿಧಾನ ಪರಿಷತ್ ಸದಸ್ಯ ಎನ್. ಶಂಕ್ರಪ್ಪ ಮಾತನಾಡಿದರು. ಕಾರ್ಯಕ್ರ ಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಅದಿಮನಿ ವೀರಲಕ್ಷ್ಮೀ, ಮಾಜಿ ಶಾಸಕ ತಿಪ್ಪರಾಜ ಹವಾಲ್ದಾರ, ಎ.ಪಾಪರೆಡ್ಡಿ, ಜಿಲ್ಲಾಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ಅಶೋಕ ಗಸ್ತಿ, ಅರುಣ ಕುಮಾರ, ಬಸನಗೌಡ ಬ್ಯಾಗವಾಟ, ಮಾನಪ್ಪ ವಜ್ಜಲ್, ಆರ್.ತಿಮ್ಮಯ್ಯ ಸೇರಿದಂತೆ ಇನ್ನಿತರ ಬಿಜೆಪಿ ಮುಖಂಡರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಇದೇವೇಳೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಜಿಲ್ಲಾ ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು.

Be the first to comment

Leave a Reply

Your email address will not be published.


*