ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಯ ಬೊಮ್ಮವಾರ ಗ್ರಾಮಸ್ಥರಿಂದ ತ್ರಿಗ್ರಾಮಗಳಾದ ಬೊಮ್ಮವಾರ, ಕೆಂಪಲಿಂಗನಪುರ ಮತ್ತು ಹೊಸಹಳ್ಳಿ ಗ್ರಾಮಗಳ ಕೆರೆ ಕೋಡಿಗೆ ಬೊಮ್ಮವಾರ ಗ್ರಾಮಸ್ಥರಿಂದ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು.ಕೆರೆಯು ಸುಮಾರು 124 ಎಕರೆಯಷ್ಟು ವಿಸ್ತೀರ್ಣ ಹೊಂದಿದ್ದು, 22 ವರ್ಷಗಳಿಂದ ಕೆರೆ ಕೋಡಿಗೆ ಎದುರು ನೋಡುತ್ತಿದ್ದ ಗ್ರಾಮಸ್ಥರಿಗೆ ಇದೀಗ ಕೆರೆ ಸಂಪೂರ್ಣವಾಗಿ ಭರ್ತಿಯಾಗಿರುವುದು ಸಂತಸವನ್ನುಂಟು ಮಾಡಿದೆ. ಗ್ರಾಮದ ಮುಖಂಡರು, ಮಹಿಳೆಯರು ಮತ್ತು ಮಕ್ಕಳು ಕೆರೆಯ ಕೋಡಿ ಹೋಗುವ ಸ್ಥಳದಲ್ಲಿ ಜಟಿಜಟಿ ಮಳೆಯಲ್ಲಿಯೂ ಸಹ ಶಾಸ್ತ್ರೋಸ್ತವಾಗಿ ಕೆರೆಗೆ ಬಾಗಿನ ಅರ್ಪಿಸಿದರು.
ವಿಶ್ವನಾಥಪುರ ಗ್ರಾಪಂ ಮಾಜಿ ಅಧ್ಯಕ್ಷ ಎನ್.ರಾಮಮೂರ್ತಿ ಮಾತನಾಡಿ, ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆಯು ಬಹಳ ವರ್ಷಗಳಿಂದ ಕೆರೆ ಕೋಡಿ ಹರಿದಿರಲಿಲ್ಲ. 22 ವರ್ಷಗಳ ನಂತರ ಕೆರೆಯು ಕೋಡಿ ಹರಿಯುತ್ತಿರುವುದು ಸಂತಸವನ್ನುಂಟು ಮಾಡಿದೆ. ಗ್ರಾಮದ ಜನರೆಲ್ಲರೂ ಒಗ್ಗೂಡಿ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು. ಈ ವೇಳೆಯಲ್ಲಿ ಗ್ರಾಮದ ಮುಖಂಡರಾದ ಬಿ.ಕೆ.ರಮೇಶ್, ನಾರಾಯಣಸ್ವಾಮಿ, ಗೋವಿಂದಪ್ಪ, ರಾಘು, ಬೊಮ್ಮವಾರದ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು, ಮಹಿಳೆಯರು, ಮಕ್ಕಳು, ಗ್ರಾಪಂ ಮಾಜಿ ಸದಸ್ಯ ಎಚ್.ಮುನಿಕೃಷ್ಣ ಇದ್ದರು.
Be the first to comment