ಸಾಧನೆಗೆ ಮನಸ್ಸು,ಪ್ರಯತ್ನ ಬಹಳ ಮುಖ್ಯ: ಎಸ್.ಆರ್.ಮನಹಳ್ಳಿ

ವರದಿ:ಶರಣಪ್ಪ ಬಾಗಲಕೋಟ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ಇಳಕಲ್ಲ ತಾಲೂಕಿನ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆ ಕೆಲೂರಿನಲ್ಲಿಂದು ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಹಾಗೂ ಸಾಧನೆಗೈದ ಗ್ರಾಮದ ಯುವಕ ಶಿವಕಾಂತ ಕುಮಾರ ಅಧಿಕಾರಿಗೆ ಪ್ರೌಢಶಾಲೆಯ ವತಿಯಿಂದ ಸನ್ಮಾನ ಏರ್ಪಡಿಸಲಾಯಿತು.

ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದಲ್ಲಿ ಕೃಷಿ ವಿಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಬಸವೇಶ್ವರ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಕೆಲೂರ ಗ್ರಾಮದ ಯುವಕ ಶಿವಕಾಂತ ಕುಮಾರ ಅಧಿಕಾರಿಗೆ ಪ್ರೌಢಶಾಲಾವತಿಯಿಂದ ಸನ್ಮಾನ ಏರ್ಪಡಿಸಲಾಯಿತು.

ಸನ್ಮಾನ ಸ್ವಿಕರಿಸಿದ ಶಿವಕಾಂತಕುಮಾರ ಮಾತನಾಡಿ ನನ್ನ ಈ ಸಾಧನೆಗೆ ಸ್ಪೂರ್ತಿ ನನ್ನ ತಂದೆ ತಾಯಿ ಹಾಗೂ ನನ್ನ ಗುರುಗಳು ಎಂದರು.ಪ್ರತಿಯೊಬ್ಬ ಮಗು ಧನಾತ್ಮಕ ವಿಚಾರಗಳ ಮೂಲಕ ತಂದೆ ತಾಯಿ ಗುರುಗಳು ಹಾಕಿಕೊಟ್ಟ ಮಾರ್ಗದ ಮೂಲಕ ಮುನ್ನಡೆಯಬೇಕು ಎಂದರು.

ಬವಿವಿ ಸಂಘದ ಬಿ.ಹೆಚ್.ಆರ್.ಡಿ ನಿರ್ದೇಶಕರಾದ ಎಸ್.ಆರ್.ಮನಹಳ್ಳಿಯವರು ಮಾತನಾಡಿ ಪ್ರತಿಯೊಬ್ಬರು ಯಶಸ್ವಿಪಡೆಯಬೇಕಾದರೆ ಮನಸ್ಸು,ಪ್ರಯತ್ನ ಫಲಿತಾಂಶಕ್ಕಾಗಿ ಕಾಯುವಿಕೆ ಬಹಳ ಮುಖ್ಯ ಎಂದರು.

ಮುಖ್ಯ ಅತಿಥಿಗಳಾಗಿ ಬವಿವಿ ಸಂಘದ ಶಿಕ್ಷಣ ವಿಸ್ತೀರ್ಣಾಧಿಕಾರಿ ಬಿ.ಆರ್.ಬೋಳಿಶಟ್ಟಿ ಹಾಗೂ ಪಾಲಕರಾದ ಶರಣಪ್ಪ ಅಧಿಕಾರಿ,ಶ್ರೀಮತಿ ಬೋರಮ್ಮ ಅಧಿಕಾರಿ ಉಪಸ್ಥಿತರಿದ್ದರು.ಪ್ರೌಢ ಶಾಲಾ ಮುಖ್ಯೋಪಾಧ್ಯಾರಾದ ಎಸ್.ಬಿ.ದಾಸರ ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಕರಾದ ಬಿ.ಹೆಚ್. ನಾಲತವಾಡ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು, ಎಸ್.ಬಿ.ಹೆಳವರ ಸ್ವಾಗತಿಸಿದರು, ಎಸ್.ಬಿ.ಯಾವಗಲ್ಲಮಠ ನಿರೂಪಿಸಿದರು, ಎಸ್.ಎಮ್.ಕೆಂಧೂಳ್ಳಿ ವಂದಿಸಿದರು.ಶಿಕ್ಷಕರಾದ ಬಿ.ಎಸ್.ಕಮತರ, ವಾಯ್.ಎಸ್.ವಾಲಿಕಾರ,ಸಿಬ್ಬಂದಿ ಆಯ್.ಎಸ್.ಮಂಡಿ,ಎಸ್.ಬಿ.ನಾಯ್ಕರ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*