ಬೆಂಗಳೂರಿನ ಫೀನಿಕ್ ಮಾರ್ಕೆಟ್ ಸಿಟಿಯಿಂದ ಫೀನಿಕ್ . ಫೆಸ್ಟಿವಲ್ ಸೀಸನ್ 3 ಆರಂಭ

ವರದಿ: ಮಂಜುಳಾ ರೆಡ್ಡಿ ಬೆಂಗಳೂರು ನಗರ


      ರಾಜ್ಯ ಸುದ್ದಿಗಳು


ಅಕ್ಟೋಬರ್‌ನಿಂದ ಡಿಸೆಂಬರ್ 2019ರವರೆಗೆ 90 ದಿನಗಳ ಮೋಜು , ಆಹಾರ ಸಂಭ್ರಮ ಮತ್ತು ಉಲ್ಲಾಸ ಬೆಂಗಳೂರು , ಅಕ್ಟೋಬರ್ 10 , 2019 : – ಹಬ್ಬದ ಸಾಲಿನ ಹಿನ್ನೆಲೆಯಲ್ಲಿ ಫೀನಿಕ್ಸ್ ಮಾರ್ಕೆಟ್ ಸಿಟಿ ತನ್ನ 3ನೇ ಋತುವಿನ ಫೀನಿಕ್ಸ್ ಉತ್ಸವವನ್ನು ಆಚರಿಸಲು ಮತ್ತು ಸಂದರ್ಶಕರಿಗೆ ಜೀವನಾವಧಿಯ ಅನುಭವವನ್ನು ಸಾದರಪಡಿಸಲು ಸಜ್ಜಾಗಿದೆ . ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಈ ಉತ್ಸವ 90 ದಿನಗಳ ಕಾಲ ನಡೆಯಲಿದ್ದು , ತಡೆಯಿಲ್ಲದ ಮನರಂಜನೆ , ಅಚ್ಚರಿ ಮೂಡಿಸುವ ಆಹಾರ ಪದಾರ್ಥಗಳು ಮತ್ತು ಅನೇಕ ಆಟಗಳು , ಕಾಠ್ಯಕ್ರಮಗಳು , ಶಾಪಿಂಗ್ ಅಚ್ಚರಿಗಳು ಇನ್ನು ಹೆಚ್ಚಿನವುಗಳನ್ನು ಸಾದರಪಡಿಸಲಿದೆ . ಈ ಉತ್ಸವ ಅಕ್ಟೋಬರ್ 5ರಂದು ಹೊಳಪಿನ ಮತ್ತು ಬೆಡಗಿನ ಫೀನಿಕ್ಸ್ ಮೆಗಾ ಮಾಡೆಲ್ ಹಂಟ್‌ನ ಗ್ರಾಂಡ್ ಫೈನಲ್ ಕಾರಕ್ರಮದೊಂದಿಗೆ ಆರಂಭವಾಗಲಿದೆ . ಸ್ಪೆಲ್ ಗುರು ಪ್ರಸಾದ್ ಬಿದ್ದಪ್ಪ ಕಾರಕ್ರಮದ ಅಧ್ಯಕ್ಷತೆ ವಹಿಸಲಿದ್ದು , ಡೀನೋ ಮೋರಿಯಾ ಹಾಜರಾಗಲಿದ್ದಾರೆ . ನಂತರ ಶಾಪ್ ಅಂಡ್ ವಿನ್ ಪ್ರಕಟಣೆಗಳನ್ನು ಮಾಡಲಾಗುವುದು , ಅಕ್ಟೋಬರ್ ತಿಂಗಳಲ್ಲಿ ಮೋಹಿತ್ ಚವ್ಹಾಣ್ ಅವರು ಸುಮಧುರ ಗೀತೆಗಳನ್ನು ಸಾದರಪಡಿಸಲಿದ್ದು , ಅಲೈವ್ ಇಂಡಿಯಾ ಕಾನ್ಸ್ರ್ಟ್ ಸೀಸನ್ – 7ನಲ್ಲಿ ಅಕ್ಟೋಬರ್ 12ರಂದು ಈ ಕಾರಕ್ರಮ ನಡೆಯಲಿದೆ . ಅನನ್ಯ ಬಿರ್ಲಾ ಅವರು ಅಕ್ಟೋಬರ್ 19ರಂದು ಪ್ರದರ್ಶನ ನೀಡಲಿದ್ದಾರೆ . ವಿದ್ಯಾ ವಾಕ್ಸ್ ಅವರು ನವೆಂಬರ್ 8ರಂದು , ನವೆಂಬರ್ 15ರಂದು ಜೀವೇಶು ಅಹ್ಲುವಾಲಿಯಾ ಅವರು ಸ್ಟ್ಯಾಂಡ್ ಅಪ್ ಆಕ್ಸ್ ಅನ್ನು ಸಾದರಪಡಿಸಲಿದ್ದಾರೆ . ದಕ್ಷಿಣದ ಹಿರಿಯ ಕೇಂದ್ರ ನಿರ್ದೇಶಕರಾದ ಗಜೇಂದ್ರ ಸಿಂಗ್ ರಾಥೋಡ್ ಅವರು ಮಾತನಾಡಿ , “ ಈ ವರ್ಷ ಫೀನಿಕ್ಸ್ ಶಾಪಿಂಗ್ ಫೆಸ್ಟಿವಲ್ ಸೀಸನ್ ಉತ್ಸವ ಮತ್ತಷ್ಟು ದೊಡ್ಡ ಅವತಾರದಲ್ಲಿ ಖ್ಯಾತ ಕಲಾವಿದರು ಮತ್ತು ಸಂಗೀತಗಾರರ ಹೆಚ್ಚಿನ ನೇರ ಸಂಗೀತ ಕಛೇರಿಗಳು , ಮೋಡಿ ಮಾಡುವ ಅಲಂಕಾರ , ಒಂದುಕೋಟಿ ಮೌಲ್ಯದ ಬಹುಮಾನಗಳು ಮುಂತಾದವುಗಳೊಂದಿಗೆ ಬಂದಿದೆ ” ಎಂದರು . ಸಂಭ್ರಮಾಚರಣೆಗಳು ಕೇವಲ ಸಂಗೀತ ಮತ್ತು ಫ್ಯಾಷನ್‌ಗೆ ಸೀಮಿತವಾಗಿರದೆ ಅಕ್ಟೋಬರ್ 20ರಂದು ಸ್ಟೆಪ್‌ಇನ್‌ಔಟ್ ಆಹಾರ ಉತ್ಸವ ಕೂಡ ನಡೆಯಲಿದೆ . ಜಗತ್ತಿನ ಎಲ್ಲೆಡೆಯ ಆಹಾರಗಳನ್ನು ನಿಮ್ಮ ತಟ್ಟೆಗೆ ತಂದು ನೀಡುವ ಮತ್ತು ಜೊತೆಗೆ ಬಹಳಷ್ಟು ಬೀರ್ ಸಾದರಪಡಿಸಲಾಗುತ್ತಿದೆ . ಜೊತೆಗೆ ನವೆಂಬರ್‌ನಲ್ಲಿ ಫ್ಯಾಷನ್ ಮತ್ತು ಮೋಜಿನ ಮಿಶ್ರಣವಾದ ಡೆನಿಮ್ ಫೆಸ್ಟಿವಲ್ ಕೂಡ ನಡೆಯಲಿದೆ . ಈ ಬಾರಿ ದೀಪಾವಳಿ ಸಂದರ್ಭದಲ್ಲಿ ಮಾಲ್‌ನಲ್ಲಿನ ಅಲಂಕಾರಕ್ಕೆ ದೇವಿ ಮಹಾಲಕ್ಷ್ಮಿ ಸ್ಫೂರ್ತಿಯಾಗಲಿದ್ದಾರೆ . ಬೃಹತ್ ಗಾತ್ರದ ಕಮಲ , ನವಿಲುಗಳ ಆಕಾರಗಳನ್ನು ಕ್ರಿಸ್ಟೆಲ್‌ಗಳಲ್ಲಿ ಸಿದ್ಧಪಡಿಸಲಾಗುತ್ತಿದ್ದು , ಇವು

ಸಂದರ್ಶಕರಿಗೆ ಅದ್ಭುತವಾದ ಸ್ವಾಗತ ನೀಡಲಿವೆ . ಹೊಳಪಿನ ವಜ್ರದ ಪರಿಣಾಮ ನೀಡಲು ಕ್ರಿಸ್ಟಿಲ್‌ಗಳು , ಕನ್ನಡಿಗಳು ಮುಂತಾದವುಗಳನ್ನು ಪ್ರಮುಖವಾಗಿ ಬಳಸಲಾಗಿದೆ . ಆಕರ್ಷನೀಯ ಬ್ಯಾಂಡೇಲಿಯರ್‌ಗಳು ಮಾಲ್‌ಗಳಲ್ಲಿ ಎಲ್ಲಾ ಕಡೆ ಗಮನಸೆಳೆಯಲಿವೆ . ದೀಪಾವಳಿಯ ಹೊಳಪಿಗೆ ಮತ್ತಷ್ಟು ಮೆರುಗು ನೀಡಲು ಜ್ಯುವೆಲರಿ ಫೆಸ್ಟ್ – 19 ನಡೆಯಲಿದ್ದು , ಈ ಕಾಠ್ಯಕ್ರಮದಲ್ಲಿ ನಿಮ್ಮ ಎಲ್ಲಾ ಫ್ಯಾಷನ್ ಅಗತ್ಯಗಳು ಒಂದೇ ಸೂರಿನಡಿ ಪೂರ್ಣವಾಗಲಿವೆ . ತನಿಷ್ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ , ಜಾಯಲುಕಾಸ್ , ಭೀಮಾ ಜ್ಯುವೆಲರ್ , ಸೆಂಕೊ ಗೋಲ್ಡ್ ಮತ್ತು ಡೈಮಂಡ್ಸ್ , ಸಿ . ಕೃಷ್ಣಯ್ಯಶೆಟ್ಟಿ ಜ್ಯುವೆಲರ್ , ಕ್ಯಾರೆಟ್ಲೇನ್ , ಮಿಯಾ ಬೈ ತನಿಷ್ , ಓರಾ ಡೈಮಂಡ್ ಮುಂತಾದ ಬ್ರಾಂಡ್‌ಗಳು ಉತ್ಸಾಹಕರ ಕೊಡುಗೆಗಳನ್ನು ನೀಡಲಿವೆ . ಸಂಪ್ರದಾಯಿವಾಗಿ ಕ್ರಿಸ್ಮಸ್ ಈ ಸಂದರ್ಭದಲ್ಲಿ ಬರುತ್ತಿದ್ದು , ಫೀನಿಕ್ಸ್ ಮಾರ್ಕೆಟ್ ಸಿಟಿ ಬೆಂಗಳೂರು ಜಾದೂ ಉಂಟು ಮಾಡಲಿದೆ . ನವೆಂಬರ್ 29ರಿಂದ ಡಿಸೆಂಬರ್‌ 25ರ ಕ್ರಿಸ್ಮಸ್ ದಿನದವರೆಗೆ ವರ್ಲ್ಡ್ ಆಫ್ ಕ್ರಿಸ್ಮಸ್ ಆಗಿ ಇಲ್ಲಿನ ವಾತಾವರಣ ಪರಿವರ್ತನೆಯಾಗಲಿದೆ . ಕ್ರಿಸ್ಮಸ್ ಅಲಂಕಾರವನ್ನು ಯುರೋಪಿಯನ್ ಕ್ರಿಸ್ಮಸ್ ಮಾರುಕಟ್ಟೆಯಂತೆ ಮಾಡಲಾಗುವುದು . ಅಂತಾರಾಷ್ಟ್ರೀಯ ಪಾಕಶೈಲಿಯ ಆಹಾರ , ಕ್ರಿಸ್ಮಸ್ ಅಲಂಕಾರ , ನೇರ ಪ್ರದರ್ಶನಗಳು ಮತ್ತು ಮೋಡಿ ಮಾಡುವ ಕ್ರಿಸ್ಮಸ್ ಮಾರುಕಟ್ಟೆಗಳ ಮೂಲಕ ಯುರೋಪಿಯನ್ ಆಚರಣೆಯನ್ನು ಇದು ನೆನಪಿಗೆ ತರಲಿದ್ದು , ಜಗತ್ತಿನ ಬೇರೆ ಬೇರೆ ಸ್ಥಳಗಳ ಉತ್ಸವ ಉತ್ಪನ್ನಗಳನ್ನು ಸಾದರಪಡಿಸಲಿದೆ . ಈ ಕಾರಕ್ರಮದಲ್ಲಿ ಭಾರತದ ಅತ್ಯಂತ ದೊಡ್ಡ ಕ್ರಿಸ್ಮಸ್ ಮಾರುಕಟ್ಟೆ 25 ದಿನಗಳ ಕಾಲ ಪ್ರತ್ಯೇಕ ಖರೀದಿ ಆಯ್ಕೆಗಳನ್ನು , ರುಚಿಕರ ಆಹಾರ ಪದಾರ್ಥಗಳನ್ನು , ಅದ್ಭುತ ಸಂಗೀತವನ್ನು , ಸಂಗೀತ ಕಛೇರಿ ಕಾಠ್ಯಕ್ರಮಗಳನ್ನು , ಪ್ರತಿಭಾ ಪ್ರದರ್ಶನಗಳನ್ನು ಮತ್ತು ಇನ್ನು ಅನೇಕ ಹಬ್ಬದ ಉತ್ಸಾಹವನ್ನು ಸಾದರಪಡಿಸಲಾಗುತ್ತಿದೆ . ಸ್ಪಾನಿಷ್ ಕಲಾವಿದರಿಂದ ವಿನ್ಯಾಸಗೊಳಿಸಲಾದ ಅದ್ಭುತವಾದ ಕ್ರಿಸ್ಮಸ್ ಟ್ರೇ ಅನ್ನು ಸೊಗಸಾದ ಬಿಳಿ ಬಣ್ಣದಲ್ಲಿ ಬೆಳಗಿಸಲಾಗುವುದು .

ವಿನ್ಯಾಸಗೊಳಿಸಲಾದ ಅದ್ಭುತವಾದ ಕ್ರಿಸ್ಮಸ್ ಟ್ರೇ ಅನ್ನು ಸೊಗಸಾದ ಬಿಳಿ ಬಣ್ಣದಲ್ಲಿ ಬೆಳಗಿಸಲಾಗುವುದು . ಸಂದರ್ಶಕರು ಒಳಗೆ ಬರುತ್ತಿದ್ದಂತೆ ಪ್ರತ್ಯೇಕ ಕ್ರಿಸ್ಮಸ್ ಅಲಂಕಾರ ಜೊತೆಗೆ ಆಕರ್ಷಕ ಶ್ಯಾಂಡೆಲಿಯರ್‌ಗಳು , ಮಾಲ್‌ನ ಎಲ್ಲೆಡೆ ಹರಡಿ ಈ ಋತುವಿನ ಚೇತನವನ್ನು ಹಿಡಿದಿಡಲಿವೆ . ಅವೆಂಜರ್ ಸ್ಟೇಷನ್‌ನಲ್ಲಿ ಕಾಮಿಕ್ ಅಭಿಮಾನಿಗಳಾಗಿರುವ ಎಳೆಯರಿಗೆ ಬಹಳಷ್ಟು ಮೋಜು ಲಭಿಸಲಿದೆ . ಫೀನಿಕ್ಸ್ ಫೆಸ್ಟಿವಲ್ ಸೀಸನ್ 3 ಮೂರು ತಿಂಗಳ ಕಾಲ ಸಂತಸ , ಮನರಂಜನೆ ಮತ್ತು ಆಹಾರಪದಾರ್ಥಗಳನ್ನು ಸಾದರಪಡಿಸಲಿದೆ . ಈ ಹಬ್ಬದ ಸಾಲಿನಲ್ಲಿ ನೀವು ಆನಂದಿಸಲು ಫೀನಿಕ್ಸ್ ಮಾರ್ಕೆಟ್ ಸಿಟಿ ಸರಿಯಾದ ಸ್ಥಳ ಎಂಬುದರ ಖಾತ್ರಿ ಮಾಡಿಕೊಳ್ಳಿರಿ .

Be the first to comment

Leave a Reply

Your email address will not be published.


*