ವಿವಾಹಿತೆಯ ಲಾಡ್ಜಗೆ ಕರೆತಂದು, ಮಹಿಳೆಯ ಚಿನ್ನಾಭರಣ, ಬ್ಯಾಗ್ ದೋಚಿ ಪರಾರಿ..!!

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ರಾಜ್ಯ ಸುದ್ದಿಗಳು 

ಗೋಕರ್ಣ

ನಾಲ್ಕು ತಿಂಗಳ ಹಿಂದೆ ಪರಿಚಯವಾದ ವ್ಯಕ್ತಿಯೊಬ್ಬನ ಮಾತಿಗೆ ಮರುಳಾಗಿ ಸುತ್ತಾಡಲು ಬಂದಿದ್ದ ಮಹಿಳೆಯೊಬ್ಬಳು ಚಿನ್ನಾಭರಣ, ಮೊಬೈಲ್, ನಗದು ಸೇರಿ ಸುಮಾರು 2 ಲಕ್ಷ ಕಳೆದುಕೊಂಡಿರುವ ಘಟನೆ ಗೋಕರ್ಣದಲ್ಲಿ ನಡೆದಿದೆ.ಚಿಕ್ಕೊಡಿಯ ಕರೋಶಿ ಗ್ರಾಮದ ಮಾಲವ್ವ ಗುರಪ್ಪ ನಡುವಿನಕೇರಿ (36) ಮಹಿಳೆಯನ್ನು ಮದುವೆಯಾಗುತ್ತೇನೆಂದು ನಂಬಿಸಿ, ಗೋಕರ್ಣಕ್ಕೆ ಕರೆತಂದು, ಲಾಡ್ಜ್ನಲ್ಲಿ ತಂಗಿದ್ದ ವೇಳೆ, ಮಹಿಳೆಯ ಅರಿವಿಗೆ ಬಾರದಂತೆ ರಾತ್ರಿ ವೇಳೆ ಅವಳ ಬಳಿ ಇದ್ದ ಚಿನ್ನಾಭರಣ, ಮೊಬೈಲ್, ಹಾಗೂ ನಗದು ಎಗರಿಸಿ ಪರಾರಿಯಾಗಿರುವ ಘಟನೆ ಗೋಕರ್ಣದಲ್ಲಿ ನಡೆದಿದೆ.

CHETAN KENDULI

ಗುರುವಾರ ಮಹಿಳೆಗೆ ತಂಪು ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ಕುಡಿಸಿದ್ದು, ಮಹಿಳೆ ಮಲಗಿದ ಸಮಯ ನೋಡಿ ಅವಳ ಹತ್ತಿರ ಇದ್ದ ಸುಮಾರು 1 ಲಕ್ಷ 52 ಸಾವಿರ ರೂಪಾಯಿ ಮೌಲ್ಯದ 38 ಗ್ರಾಂ ಬಂಗಾರ, 12 ಸಾವಿರ ರೂಪಾಯಿ ಮೌಲ್ಯದ 2 ಮೊಬೈಲ್ ಹಾಗೂ 15 ಸಾವಿರ ನಗುದು ಕದ್ದು ರೂಮಿಗೆ ಹೊರಗಿನಿಂದ ಲಾಕ್ ಮಾಡಿ ಪರಾರಿಯಾಗಿರುವ ಶಂಕೆ ಇದೆ ಎಂದು ವ್ಯಕ್ತವಾಗಿದೆ.

ಆರೋಪಿಯ ವಿಳಾಸ, ಮೊಬೈಲ್ ನಂಬರ್ ಯಾವುದನ್ನೂ ತಿಳಿಯದ ಮಹಿಳೆ ಪೊಲೀಸರ ಮೊರೆ ಹೋಗಿದ್ದಾಳೆ. ವಸತಿ ಗೃಹದಲ್ಲಿಯೂ ತಪ್ಪು ವಿಳಾಸ ನೀಡಿದ್ದಾನೆ ಎನ್ನಲಾಗಿದೆ. ಪಿ.ಎಸ್.ಐ ಸುಧಾ ಅಘನಾಶಿನಿ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

Be the first to comment

Leave a Reply

Your email address will not be published.


*