ವೀರ ಮಹಿಳೆ ಒನಕೆ ಓಬವ್ವನ ಇತಿಹಾಸ ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡಿ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

CHETAN KENDULI

ಗ್ರಾಮೀಣ ಭಾಗದಲ್ಲಿ ಛಲವಾದಿ ಜನಾಂಗಕ್ಕೆ ಸೇರಿದ ಮಹಾನ್ ವೀರ ಮಹಿಳೆ ಒನಕೆ ಓಬವ್ವನ ಇತಿಹಾಸ ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡಬೇಕು.ಬಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡರುವ ಸಂವಿಧಾನ ಪ್ರತಿ ಸಮುದಾಯಕ್ಕೆ ಸಮಾನತೆ ತಂದಿದೆ. ಮೇಲ್ವರ್ಗದ ಜನರು ನಮ್ಮ ಸಮಾಜಕ್ಕೆ ಮೀಸಲಾತಿ ಕೊಡುತ್ತಾರೋ, ಇಲ್ಲವೋ ಎಂಬುದನ್ನು ಅರಿತು ಪ್ರತಿ ಸಮುದಾಯಕ್ಕೆ ಮೀಸಲಾತಿ ನೀಡಿ ಸಮಾಜಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ.

ಬಾಬಾ ಸಾಹೇಬ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಎಲ್ಲರೂ ಪಾಲಿಸಬೇಕು. ಪ್ರತಿಯೊಬ್ಬರು ವಿದ್ಯಾವಂತರಾಗಿ, ಸಂಘಟಿತರಾಗಿ, ಹೋರಾಟ ಮಾಡುವಂತಾಗಬೇಕು. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕಳೆದ 25 ವರ್ಷದಿಂದ ಸಂಘಟನೆಗಳು ಸಾಕಷ್ಟು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾರೆ. ಹೀಗೆ ಹಲವು ರೀತಿಯಲ್ಲಿ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.ವೀರ ಮಹಿಳೆ ಒನಕೆ ಓಬವ್ವ ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಕರ್ತವ್ಯ ನಿರ್ವಹಿಸುವ ಒನಕೆ ಓಬವ್ವನ ಗಂಡ ಮುದ್ದಹನುಮಯ್ಯ ಕೋಟೆಕಾವಲುಗಾರನಾಗಿರುತ್ತಾನೆ. ಇವರ ಇತಿಹಾಸ ಇಡೀ ಮಹಿಳೆಯರಿಗೆ ಸ್ಪೂರ್ತಿ ತರುವಂತಹದ್ದು ಎಂದರು.

ಸರ್ಕಾರಕ್ಕೆ ಮನವಿ: ಒನಕೆ ಓಬವ್ವ ಅಭಿವೃದ್ಧಿ ಮಂಡಳಿ, ಓಬವ್ವನ ಭವನ ಸರ್ಕಾರದ ಹಂತದಲ್ಲಿ ಸ್ಥಾಪನೆಯಾಗಬೇಕು ಎಂದು ಸರ್ಕಾರಕ್ಕೆ ಸಮಾಜದ ಮುಖಂಡರು ಮನವಿ ಮಾಡಿದರು.ಸಂದರ್ಭದಲ್ಲಿ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ಮುನಿರಾಜು, ತಾಲೂಕು ಅಧ್ಯಕ್ಷ ಕೆ.ವೌ.ಸ್ವಾಮಿ, ಹಿರಿಯ ಮುಖಂಡರಾದ ಸಿ.ಮುನಿಯಪ್ಪ, ಬಿದಲೂರು ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್, ನಾರಾಯಣಸ್ವಾಮಿ (ಡೇವಿಡ್), ಗಂಗಾಧರ್, ಶ್ರೀನಿವಾಸ್ ಗಾಂಧಿ, ರಮೇಶ್, ಶ್ರೀನಿವಾಸ್ ಹಾಗೂ ಮುಖಂಡರು ಇದ್ದರು.

Be the first to comment

Leave a Reply

Your email address will not be published.


*