ಜಿಲ್ಲಾ ಸುದ್ದಿಗಳು
ಶಿರಸಿ
ಹೊರಗಿನಿಂದ ಬಂದು ಸ್ಥಳೀಯರ ಮನೆಯನ್ನು ಬಾಡಿಗೆ ಪಡೆದು ಈ ಕೃತ್ಯ ನಡೆಯುತ್ತಿದೆ ಎಂದು ಕೆಲವರು ಆರೋಪಿಸಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಶಿರಸಿ ನಗರದಲ್ಲಿ ವೇಶ್ಯಾವಾಟಿಕೆ ಜಾಲ ವ್ಯಾಪಕವಾಗಿ ಹಬ್ಬಿದ್ದು, ಬಾಡಿಗೆ ಮನೆಗಳನ್ನು ಬಳಸಿ ದಂಧೆ ನಡೆಸಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು.
ನಗರದಲ್ಲಿ ಹಲವೆಡೆ ಮನೆಯನ್ನು ಬಾಡಿಗೆ ಪಡೆದು ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಏಕಾಏಕಿ ದಾಳಿ ನಡೆಸಿದ ಶಿರಸಿ ನಗರ ಠಾಣೆ ಪೋಲೀಸರು ಅಗಸೆ ಬಾಗಿಲಿನ ಮನೆಯೊಂದರ ಮೇಲೆ ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿ ಓರ್ವ ಮಹಿಳೆಯನ್ನು ರಕ್ಷಿಸಿದ್ದಾರೆ. ಈ ರೀತಿಯ ವೇಶ್ಯಾವಾಟಿಕೆ ಇದೀಗ ಶಿರಸಿಯಂತ ಸಣ್ಣನಗರಕ್ಕೂ ವ್ಯಾಪಿಸಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಹೆಣ್ಣು ಮಕ್ಕಳು, ಮಧ್ಯ ವಯಸ್ಸಿನ ಹೆಂಗಸರನ್ನು ಬಳಸಿಕೊಂಡು ವ್ಯವಸ್ಥಿತ ಜಾಲ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಗುಮಾನಿ ಇದೆ.
ಈ ಕೃತ್ಯದಲ್ಲಿ ಕೆಲವು ಸ್ಥಳೀಯ ವ್ಯಕ್ತಿಗಳು ಸಹ ಸಾತ್ ನೀಡುತ್ತಿದ್ದಾರೆ ಎಂಬ ಮಾಹಿತಿಯೂ ದೊರಕಿದೆ. ಅಲ್ಲದೇ ಸ್ಥಳೀಯ ಕೆಲವು ಕಾಲೇಜು ಯುವತಿಯರನ್ನೂ ಪುಸಲಾಯಿಸಿ ಅವರಿಗೆ ಹಣದ ಆಮಿಷವೊಡ್ಡಿ ಈ ಬಳಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.ದೂರದ ಬಾಗಲಕೋಟೆ, ಶಿಗ್ಗಾಂವ, ದಾವಣಗೆರೆ, ಹುಬ್ಬಳ್ಳಿ, ಹಾವೇರಿ, ಹೊಸಪೇಟೆ ಭಾಗದಿಂದಲೂ ಹೆಂಗಸರು, ಹುಡುಗಿಯರನ್ನು ಕರೆತರಲಾಗುತ್ತಿದ್ದು ಅವರನ್ನು ಈ ದಂಧೆಗೆ ಬಳಸಿಕೊಳ್ಳಲಾಗುತ್ತಿದೆ.
Be the first to comment