ಬಸ್ ನಿಲ್ದಾಣದ ಸಮೀಪದ ಗಣಪತಿ ದೇವಸ್ಥಾದ ಹುಂಡಿ ಕಳ್ಳತನಕ್ಕೆ ವಿಫಲ ಯತ್ನ…

ವರದಿ-ಕುಮಾರ ನಾಯ್ಕ.ಉಪಸಂಪಾದಕರು

ರಾಜ್ಯ ಸುದ್ದಿಗಳು 

ದಾಂಡೇಲಿ

ಬಸ್ ನಿಲ್ದಾಣದ ಸಮೀಪದ ಗಣಪತಿ ದೇವಸ್ಥಾನದ ಹುಂಡಿ ಕಳ್ಳತನದ ಯತ್ನ ವಿಫಲವಾಗಿದ್ದು ನಗರದಲ್ಲಿ ಇತ್ತಿಚ್ಚಿಗೆ ನಡೆಯುತ್ತಿರುವ ಸಣ್ಣಪುಟ್ಟ ಕಳ್ಳತನ ಪ್ರಕರಣಗಳು ತಡೆಯಿಲ್ಲದೆ ಮುಂದುವರೆದಿದೆ. ಅದರಂತೆ ಶನಿವಾರ ಮುಂಜಾನೆ ನಗರದ ಕೆಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಗಣಪತಿ ದೇವಸ್ಥಾನದಲ್ಲಿನ ಹುಂಡಿಯನ್ನು ಕಳ್ಳತನ ಮಾಡಲು ಕಳ್ಳ ವಿಫಲ ಯತ್ನ ನಡೆಸಿರುವ ಘಟನೆ ನಡೆದಿದೆ.

CHETAN KENDULI

ಮುಂಜಾನೆ ಎಂದಿನಂತೆ ದೇವಸ್ಥಾನದಲ್ಲಿ ಸ್ವಚ್ಚತೆ ಮಾಡುವಾಗ ಹುಂಡಿ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅತ್ತ ಇತ್ತ ಹುಡುಕಿ ನೋಡಿದಾಗ ದೇವಸ್ಥಾನದಲ್ಲಿನ ಕಾಣಿಕೆ ಹುಂಡಿಯು ದೇವಸ್ಥಾನದ ಹಿಂಬದಿಯ ಕಂಪೌಂಡ್ ಆಚೆಯ ಗೀಡಗಂಟಿಗಳಲ್ಲಿ ಮುಚ್ಚಿಟ್ಟಿರುವುದು ಕಂಡು ಬಂದಿದೆ. ದೇವಸ್ಥಾನದ ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಲು ಅರ್ಧ ಯಶಸ್ವಿಯಾಗಿರುವ ಕಳ್ಳ ಅದನ್ನು ಸಾಗಿಸಲಾಗದೆ ಗೀಡಗಂಟಿಗಳಲ್ಲಿ ಮುಚ್ಚಿಟ್ಟು ಹೋಗಿದ್ದಾನೆ. 

ದಾಂಡೇಲಿ ನಗರ ಪೊಲೀಸ್ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ತನಿಖಾ ವಿಭಾಗದ ಪಿಎಸೈ ಕಿರಣ ಪಾಟೀಲ ಮತ್ತು ಪೊಲೀಸ್ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯ ಕುರಿತು ಸಿಸಿ ಟಿವಿಯ ಫೂಟೇಜ್ಗಳನ್ನು ಪರಿಶಿಲನೆ ನಡೆಸಲಾಗುತ್ತಿದೆ ಎಂದು ಪಿಎಸೈ ಕಿರಣ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*