ರಾಜ್ಯ ಸುದ್ದಿಗಳು
ದೇವನಹಳ್ಳಿ
ದಿನಾಂಕ :07.11.2021ರ ಭಾನುವಾರದಂದು ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ಮನಗೊಂಡಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಸಾರ್ವಜನಿಕ ಸಂಪರ್ಕ ಕೇಂದ್ರದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಹೋಬಳಿ ಮಟ್ಟದ ಕಾರ್ಯಕ್ರಮವನ್ನು ರಾಜ್ಯ ಕೆ.ಪಿ.ಸಿ.ಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾದ ಡಾ. ಅಕ್ಕಯಮ್ಮ ಮುನಿಯಪ್ಪ ರವರು ತಾಯಿ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿದರು. ನಂತರ ಮಾತನಾಡಿ ನೆಲ, ಜಲ ಕನ್ನಡವೇ ನಮ್ಮೂಸಿರು, ಕನ್ನಡ ಭಾಷೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಕನ್ನಡ ಮಾತನಾಡಲು ಒತ್ತು ಕೊಡಬೇಕು, ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಬೇಕು, ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವವರು ಐ.ಎ.ಎಸ್, ಕೆ.ಎ.ಎಸ್ ಮುಂತಾದ ಉನ್ನತ ಹುದ್ದೆಗಲ್ಲಿರುವುದು ನಮ್ಮ ಕನ್ನಡದ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು. ನಂತರ ಮುಖ್ಯ ಅತಿಥಿಗಳಾದ ಭಾರತ ಜನಜಾಗೃತಿ ಸೇನೆಯ ರಾಜ್ಯ ಅಧ್ಯಕ್ಷರಾದ ಶ್ರೀ ಸಿ. ಮುನಿಯಪ್ಪ ರವರು ಮಾತನಾಡಿ ಕನ್ನಡವನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು. ತದ ನಂತರ ಸಂಸ್ಥಾಪಕರಾದ ಶ್ರೀ ಟಿ.ಎಂ.ಸಹದೇಶ್ ರವರು ಮಾತನಾಡಿ ದೇವನಹಳ್ಳಿ ತಾಲ್ಲೂಕಿನಲ್ಲಿ ಹಳ್ಳಿ ಹಳ್ಳಿಗಳಲ್ಲಿಯೂ ಕನ್ನಡದ ಕಂಪನ್ನು ಹರಡುವಂತೆ ಮಾಡುವುದೇ ನಮ್ಮ ಮುಖ್ಯ ಉದ್ದೇಶ ಎಂದು ಹೇಳಿದರು. ಈ ಸಮಯದಲ್ಲಿ ಸಮಾಜದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಮಾಜ ಸೇವಕರಿಗೆ, ರೈತರಿಗೆ, ಕಾರ್ಮಿಕರಿಗೆ, ಹಿರಿಯರಿಗೆ ಗುರುತಿಸಿ, ಹಳ್ಳಿ ಸೊಗಡಿನ ಜಾನಪದ ಆಕಾಶವಾಣಿ ಕಲಾವಿದರಾದ ಶ್ರೀಮತಿ ಮುನಿನರಸಮ್ಮ ರವರು, ಆಶ್ರಿತ ಸೇವಾ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೆ.ಎಂ. ಕೃಷ್ಣಮೂರ್ತಿ ರವರು, ಶ್ರೀ ಅಂಬರೀಷ್ ರವರು, ಶ್ರೀ ಸುರೇಶ್ ರವರು ಮತ್ತು ಶ್ರೀ ಶಿವಕುಮಾರ್ ರವರು ಹಾಗೂ ಊರಿನ ಹಿರಿಯರಿಗೆ ಕನ್ನಡ ಶಾಲುಗಳನ್ನು ಹಾಕಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕುಂದಾಣ ಹೋಬಳಿಯ ಊರಿನ ಕೆಲವು ಮುಖಂಡರು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.
Be the first to comment