ನೂತನ ಎಡ್ರಾಮಿ ತಾಲ್ಲೂಕನಲ್ಲಿ ಕೋಲಿ ಸಮಾಜದ ತಾಲ್ಲೂಕ ಕಾರ್ಯಾಲಯ ಉದ್ಘಾಟನೆ

ವರದಿ: ಅಮರೇಶ ಕಾಮನಕೇರಿ


   ಜೀಲ್ಲಾ ಸುದ್ದಿಗಳು


ಎಡ್ರಾಮಿ:(ಅ:07) ನೂತನವಾಗಿ ರಚನೆಯಾದ ಎಡ್ರಾಮಿ ತಾಲ್ಲೂಕಿನಲ್ಲಿ ಇಂದು ಕೋಲಿ ಸಮಾಜದ ತಾಲ್ಲೂಕು ಕಾರ್ಯಾಲಯವನ್ನು ಉದ್ಘಾಟಿಸಲಾಯಿತು ಕೋಲಿ ಸಮಾಜದ ಪ್ರಮುಖರ ಸಮ್ಮುಖದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು


ಜಾಹೀರಾತು  ನೀಡಲು ಸಂಪರ್ಕಿಸಿ 9008329745



ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಎಡ್ರಾಮಿ ತಾಲ್ಲೂಕು ಅಧ್ಯಕ್ಷರಾದ ಶ್ರೀ ರಾಚಣ್ಣ ಎಚ್ ತಳವಾರವರು ಸಮಾಜ ಬಂದುಗಳೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೋಟ್ಟಾಗ ಮಾತ್ರ ಸಮಾಜಿಕವಾಗಿ,ಆರ್ಥಿಕವಾಗಿ, ಧಾರ್ಮಿಕವಾಗಿ, ಮುಂದುವರೆದು ರಾಜಕೀಯ ರಂಗದಲ್ಲಿ ಬೆಳವಣಿಗೆ ಸಾಧಿಸಲು ಸಾಧ್ಯ ಕೋಲಿ ಸಮಾಜ ಈ ವಿಷಯಗಳ ಬಗ್ಗೆ ಗಂಭೀರವಾಗಿ ಪ್ರತಿಹಳ್ಳಿಯಲು ಜಾಗೃತವಾಗಬೇಕಾಗಿದೆ.

ಸಮಾಜದ ಬೆಳವಣಿಗೆ ಪ್ರತಿಯೊಬ್ಬರು ಹೊಂದಾಣಿಕಯಿಂದ ಇರಬೇಕು ಒಂದು ಸಂಸಾರದಲ್ಲಿ ನೂರು ತಾಪತ್ರಯ ಇದರು ಗಂಡ ಹೆಂಡತಿ ಯಾವ ರೀತಿ ಒಂದು ಗೂಡಿ ನಾಲ್ಕು ಗೋಡೆಯ ಮದ್ಯೆನೆ ಸಮಸ್ಯೆಗಳನ್ನು ಬಗೆಹರಿಸಿಕೋಳುತ್ತಾರೋ ಆಗೆ ಸಮಾಜ ಬಂದುಗಳು ಏನೇ ಸಮಸ್ಯೆ ಬಂದರು ಸಮಾಜದ ಸದಸ್ಯರ ಮದ್ಯೆನೆ ಬಗೆರಿಸಿಕೋಳಬೇಕು ಅಂದಾಗ ಮಾತ್ರ ಸಮಾಜ ಸಮೃದ್ಧವಾಗಿ ಬೆಳವಣಿಗೆ ಹೊಂದುತ್ತದೆ ಗಂಡ ಹೆಂಡರ ಜನಗಳ ಬೀದಿಗೆ ಬಂದರೆ ಯಾವರೀತಿ ಸಂಸಾರ ನೂಚ್ಚುನುರ ಆಗತ್ತದೆಯೋ ಸಮಾಜದ ಜನರ ಮದ್ಯೆ ಇರುವ ಬೀನಾ ಅಭಿಪ್ರಾಯ ಬೀದಿಗೆ ಬಂದರೆ ಸಮಾಜ ಬೀದುಪಾಲುಗುತ್ತದೆ ಆದರಿಂದ ಸಮಾಜದ ಪ್ರತಿಯೊಬ್ಬರೂ ಒಂದುಗೂಡಿ ಬದುಕಬೇಕು ಎಂದು ಹೇಳಿದರು

ಪ್ರಾಸ್ತಾವಿಕವಾಗಿ ಮಾತನಾಡಿದ ವಿಠ್ಠಲ ಕವಲದಾರರವರು ಸಮಾಜದ ಗುರುಗಳಾದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರು ನೇರ,ನಿಷ್ಠುರ,ಹಾಗೂ ಕಠೋರವಾಗಿ 12ನೇ ಶತಮಾನದಲ್ಲೆ ವಚನಗಳ ಮೂಲಕ ಮೌಡ್ಯತೆ, ಅಂದಕಾರ,ಸಮಸಮಾಜ ನಿರ್ಮಿಸಿ ಬೇಕು ಎಂದು ಹೇಳಿದವರು ಇಂತ ಕುಲಗುರುವನ್ನು ಪಡೆದ ನಮ್ಮ ಸಮಾಜವೇ ಧನ್ಯ ಅವರ ವಿಚಾರಗಳನ್ನು ಸಮಾಜದ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು

‌ಈ‌‌ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಜೇವರ್ಗಿ ತಾಲ್ಲೂಕ ಅಧ್ಯಕ್ಷರಾದ ಶ್ರೀ ರೇವಣಸಿದ್ದಪ್ಪಗೌಡ ಕಾಮನಮನಿ ವಿರೇಶ ಹುಡ್ಡೆದ,ಗ್ರಾ,ಪಂ ಅಧ್ಯಕ್ಷರು ಕಡಕೋಳ, ಪಿಂಟು ಆರ್ ಮಾ,ಪಾಟೀಲ್,ವಿಠ್ಠಲ ಹದನೂರ,ಹಣುಮಂತ ನಾಟಿಕಾರ, ಸಿದ್ದಣ್ಣ ನಾಯ್ಕೋಡಿ,ಹಳ್ಳೆಪ್ಪಗೌಡ ಮಾಲಿ ಪಾಟೀಲ್,ಹಲ್ಲಕಟ್ಟೆಪ್ಪ ತಳವಾರ,ಕಾಶಿನಾಥ ಮಾಗಣಗೇರಿ,ಗೋಲ್ಲಾಳ್ಳಪ್ಪ ಜಂಬೆರಾಳ ಸಂತೋಷ ಜಂಬೆರಾಳ,ಮಲ್ಲು ಹಗರಟಗಿ, ಮತ್ತು ಮುಖಂಡರು, ಹಾಜರಿದ್ದರು

ಕಾರ್ಯಕ್ರಮದ ನಿರೂಪಣೆ ಶಂಕರಗೌಡ ಎಂ ಮಾಲಿ ಪಾಟೀಲ್ ನೇರವೆರಸಿದರು

ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ  ಮುನ್ನಡೆಸಲು ಸಾಧ್ಯ

 

ಹನಿ ಹನಿ ಸೇರಿದರೆನೆ ಹಳ್ಳ,ನದಿ,ಸಮುದ್ರ
ಮಾಧ್ಯಮ ಮುನ್ನೆಡೆಯಲ್ಲು ನಿವು 50,100,500,1000,2500,5000,10000,50000,1 ಲಕ್ಷ.  ದೇಣಿಗೆ ಸಹಾಯ ನೀಡಬಹುದು

ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು

    Amaresh kamanakeri

A/c 62053220183 IFC-SBIN0020354 ಪೋನ ನಂ 9008329745

Be the first to comment

Leave a Reply

Your email address will not be published.


*