ಎಎಸ್ ಐ ಸೇರಿ ಹನ್ನೊಂದು ಪೊಲೀಸರ ಅಮಾನತು

ವರದಿ: ಅಮರೇಶ ಕಾಮನಕೇರಿ


       ಕ್ರೈಂ-ಪೋಕಸ್


ಧಾರವಾಡ  : ಧಾರವಾಡ ಶಹರ ಪೊಲೀಸ್ ಠಾಣೆಯ ಎಎಸ್ ಐ ಹಾಗೂ ಹತ್ತು ಪೊಲೀಸರನ್ನು ಅಮಾನತುಗೊಳಿಸಿ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಆರ್. ದಿಲೀಪ್ ಅವರು ಆದೇಶ ಹೊರಡಿಸಿದ್ದಾರೆ.


 ಜಾಹೀರಾತು ನೀಡಲು ಸಂಪರ್ಕಿಸಿ 9008329745


ಧಾರವಾಡ ಶಹರ ಪೊಲೀಸ್ ಠಾಣೆಯ ಎಎಸ್ ಐ ಮಹೇಶ ಕುರ್ತಕೋಟಿ, ಪೊಲೀಸರಾದ ವಿಠ್ಠಲ ಕುದರಿ, ಭೀಮನಗೌಡ, ಬೆಳ್ಳಕ್ಕಿ, ಮಿಸ್ಕಿನ್, ಕುರಿ,  ಮಹಾವೀರ, ಚನ್ನಬಸ್ಸು, ಬಿಕ್ಕನಗೌಡರ, ಮಹಿಳಾ ಪೊಲೀಸ್ ಪೇದೆ ಮುಲ್ಲಾ, ಸೇರಿ ಒಟ್ಟು ಹನ್ನೊಂದು ಜನರು ಸೇವೆಯಿಂದ ಅಮಾನತು ಗೊಂಡಿದ್ದಾರೆ.

ಧಾರವಾಡದ ನಿಜಾಮೋದ್ದೀನ್ ಕಾಲನಿಯ ನಿವಾಸಿ ಮಹ್ಮದ್ ಜುಬೇರ ತಂದೆ ಜಾಫರ್ ಮಕಾಂನದಾರ ಕೊಲೆ ಪ್ರಕರಣದ ವೇಳೆ ಪೆಟ್ರೋಲಿಂಗ್ ಸರ್ಮಪಕ ನಿರ್ವಹಣೆ ಮಾಡಲು ವಿಫಲವಾದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತು ಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಪೆಟ್ರೋಲಿಂಗ್ ವ್ಯವಸ್ಥೆ ಸಾಕಷ್ಟು ಬಿಗಿಗೊಳಿಸಲು ಸೂಚಿಸಲಾಗಿದ್ದು, ಒಂದು ವೇಳೆ ಕರ್ತವ್ಯ ಲೋಪ ಕಂಡು ಬಂದರೆ ಅಂತಹವರನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಖಡಕ್  ಎಚ್ಚರಿಕೆ ನೀಡಿದ್ದಾರೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಆರ್. ದಿಲೀಪ್ ಅವರ ಆದೇಶದಿಂದಾಗಿ ಅವಳಿನಗರದ ಪೊಲೀಸರಿಗೆ  ನಡುಕ ಉಂಟಾಗಿದೆ.

ಯಾವಾಗ, ಯಾರ ನೌಕರಿಗೆ ಎಲ್ಲಿ, ಯಾಕೆ ಮತ್ತು ಹೇಗೆ  ಕುತ್ತು ಬರುತ್ತದೆ ಎಂಬುದು ತಿಳಿದಂತಾಗಿ, ಭಯದಲ್ಲಿಯೇ ಕರ್ತವ್ಯನಿರ್ವಹಿಸುವಂತಾಗಿದೆ

ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ  ಮುನ್ನಡೆಸಲು ಸಾಧ್ಯ

ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು

    Amaresh kamanakeri

A/c 62053220183 IFC-SBIN0020354

 

Be the first to comment

Leave a Reply

Your email address will not be published.


*