ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ನೀಡಬೇಕೆಂದು ತಾಲೂಕು ದಲಿತ ಹಾಗೂ ವಾಲ್ಮೀಕಿ ಸಂಘಗಳ‌ ಒಕ್ಕೂಟ ಸಮಿತಿಗಳಿಂದ ಹೋರಾಟ 

ವರದಿ:ಅಮರೇಶ ಗೋಷಲೆ ಲಿಂಗಸುಗೂರು


ಜೀಲ್ಲಾ ಸುದ್ದಿಗಳು


ಸನ್ಮಾನ್ಯರಾಜ್ಯಪಾಲರು ರಾಜ್ಯಪಾಲರ ಭವನ ಬೆಂಗಳೂರು ಇವರಿಗೆ

ಸಹಾಯಕ ಆಯುಕ್ತರು ಲಿಂಗಸುಗೂರು ಇವರ ಮುಖಾಂತರ

ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಮಹರ್ಷಿ.ವಾಲ್ಮೀಕಿ ಸಂಘ ಮತ್ತು ಮಾದಿಗ ಮೀಸಲಾತಿ ಹೋರಾಟ ಸಮಿತಿ ತಾಲ್ಲೂಕು ಸಮಿತಿಗಳ ಎಲ್ಲ ಸಂಘಗಳ ಒಕ್ಕೂಟದಿಂದ

ಈ ಸಂದರ್ಭದಲ್ಲಿ ಮಾತನಾಡಿದ ಹನುಮಂತಪ್ಪ ವೆಂಕಟಾಪುರ. ಹಾಗೂ ವಾಲ್ಮೀಕಿ ಮುಖಂಡ ಪಿಡ್ಡಪ್ಪ ನಾಯಕ, ನಂದೀಶ ನಾಯಕ ದಲಿತ ಮುಖಂಡ ಮಾದೇವಪ್ಪ ಪರಾಂಪುರ್ ಹುಸೇನಪ್ಪ ಯರಡೋಣಿ
ಈ ದೇಶಕ್ಕೆ ಸ್ವತಂತ್ರ ಸಿಕ್ಕು 72 ವರ್ಷ ಗತಿಸಿದರೂ ಈ ದೇಶದಲ್ಲಿ ವಾಸಿಸುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜಾತಿಯ ಜನರ ಮೇಲೆ ನಿರಂತರವಾಗಿರ ಶೋಷಣೆ ದೌರ್ಜನ್ಯ ದಬ್ಬಾಳಿಕೆ ನಡೆಯುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತರ ರಕ್ಷಣೆ ಮಾಡಲು
ಸಂಪೂರ್ಣವಾಗಿ ವಿಫಲವಾಗಿದೆ.

ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮತ್ತು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾದ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸಮುದಾಯದ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ.

 

ಇತ್ತೀಚಿಗೆ ದೇಶ ಮತ್ತು ರಾಜ್ಯದಲ್ಲಿ ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆಅವುಗಳು ತಡೆಯಬೇಕಾದ ಸರ್ಕಾರ ಮತ್ತು ಗೃಹ ಇಲಾಖೆ ಪೂರ್ಣ ವಿಫಲವಾಗುತ್ತವೆ

ಇದಕ್ಕೆ ಉದಾಹರಣೆ ಎಂಬಂತೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಅಸಂತಾಪೂರ ಗ್ರಾಮದ ಮಾದಿಗ ಸಮುದಾಯದ ವಿದ್ಯಾರ್ಥಿಯಾದ ಕುಮಾರಿ ರೇಣುಕಾ ಮಾದರ್ ಅದರಂತೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಅರಳಿಹಳ್ಳಿ ಗ್ರಾಮದ ವಾಲ್ಮೀಕಿ ಸಮುದಾಯದ ಕುಮಾರಿ ಲಕ್ಷ್ಮಿ ದೊರೆ ಎನ್ನ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವಾಗಿರುವುದು ಅಲ್ಲದೆ ಕೊಲೆ ಮಾಡಲಾಗಿದೆ


ಈ ಎರಡು ಪ್ರಕರಣಗಳನ್ನು ಆರೋಪಿಗಳನ್ನು ಬಂದಿಸಬೇಕಾದ ಪೊಲೀಸ್ ಅಧಿಕಾರಿಗಳು ಮುಚ್ಚಿಹಾಕುವ ಪ್ರಯತ್ನ ಮಾಡಿತ್ತಿರುವುದು ನೋಡಿ ಈ ದೇಶದಲ್ಲಿ ದಮನಕ್ಕೆ ಹೋಳಗಾದ ಜನಾಂಗಕ್ಕೆ ನ್ಯಾಯ ಕೊಡಲು ಮಿನಾಮೇಷ ಎಣಿಸುತ್ತಿರುವ ವ್ಯಕ್ತಿಗಳ
ಇದರ ವಿರುದ್ಧ ಇಡೀ ರಾಜ್ಯಾದ್ಯಂತ ದಲಿತ ಮತ್ತು ವಾಲ್ಮೀಕಿ ಮಹಿಳಾ ಸಂಘಟನೆಗಳು ಹೋರಾಟ ಮಾಡುವುದರ.
ಮೂಲಕ
ಈ ಎರಡು ಕುಟುಂಬಗಳಿಗೆ ನ್ಯಾಯ ದೊರಕಿಸಬೇಕೆಂದು ಸರ್ಕಾರಕ್ಕೆ
ಆಗ್ರಹಿಸಿದ್ದಾರು


ಅತ್ಯಾಚಾರ ಪ್ರಕರಣ ತನಿಖೆಯನ್ನು ಪೋಲಿಸ ಇಲಾಖೆಯಿಂದ ಬಿಡುಗಡೆ ಮಾಡಿ ಈ ಪ್ರಕರಣಗಳನ್ನು
ಸಿಓಡಿ ತನಿಖೆಗೆ ವಹಿಸಬೇಕು
ಹಾಗೂ ಆರೋಪಿಗಳನ್ನು ಬಂಧಿಸಿ ಅವರಿಗೆ ಗಲ್ಲು ಶಿಕ್ಷೆ ನೀಡುವ ಮೂಲಕ ಈ ಎರಡು ಸಂತ್ರಸ್ತ
ನ್ಯಾಯ ಒದಗಿಸಬೇಕೆಂದ ತಾಲ್ಲೂಕಿನ ಎಲ್ಲ ದಲಿತ ಹಾಗೂ ವಾಲ್ಮೀಕಿ ಸಂಘಟನೆಗಳ ಒಕ್ಕೂಟದಿಂದ ಆಗ್ರಹಿಸಿದರು


  •        ಜಾಹೀರಾತು


ಈ ಸಂದರ್ಭದಲ್ಲಿ
ನಂದೀಶ್ ನಾಯಕ ವಾಲ್ಮೀಕಿ ಮುಖಂಡರು. ರಾಜಶೇತುರಾಮ ನಾಯಕ್. ಹುಲುಗಪ್ಪ ನಾಯಕ್. ದುರಗಪ್ಪ ಕಾಚಾಪುರ್. ಹನುಮಂತ ಲಿಂಗಸುಗೂರು.
ದಲಿತ ಮುಖಂಡರು ಹನುಮಂತಪ್ಪ ವೆಂಕಟಾಪುರ್. ಹನುಮಂತ ಶೀಲಹಳ್ಳಿ. ಹುಸೇನಪ್ಪ ಯರಡೋಣಿ. ಅಮರೇಶ್ ಕನ್ನಾಳ. ಮಹಾದೇವಪ್ಪ ಪರಾಂಪುರ. ಹುಲಗಪ್ಪ ಕೆಸರಟ್ಟಿ. ಮಲ್ಲಯ್ಯ ಬುಳ್ಳಾ. ಸಿದ್ದಪ್ಪ ಕುಷ್ಟಗಿ ಅಮರೇಶ್ ಗೋಸ್ಲ. ಕೆಂಚಪ್ಪ . ಆಜಪ್ಪ ಚನ್ನಬಸವ ಕುಣಿಕೆಲ್ಲೂರ್ ತಿಪ್ಪಣ್ಣ ತಾಲ್ಲೂಕಿನ ಪ್ರತಿಹಳ್ಳಿಯಿಂದ ಆಗಮಿಸಿದ ದಲಿತ ಹಾಗೂ ವಾಲ್ಮೀಕಿಯ ಸಂಘಟನೆಯ ಸದಸ್ಯರು ಹಾಜರಿದ್ದರು.

Be the first to comment

Leave a Reply

Your email address will not be published.


*