87 ಮತಗಳ‌ ಅಂತರದಲ್ಲಿ ಗೆಲುವು ಸಾಧಿಸಿದ ತುಳಸಿದಾಸ ಮೊಗೇರ

ವರದಿ - ಜೀವೋತ್ತಮ ಪೈ

ಜಿಲ್ಲಾ ಸುದ್ದಿಗಳು 

ಭಟ್ಕಳ

ದಿ ಭಟ್ಕಳ ಅರ್ಬಕ್ ಕೋ. ಆಪರೇಟಿವ್ ಬ್ಯಾಂಕ್ ಇದರ ಆಡಳಿತ ಮಂಡಳಿಯಲ್ಲಿ ಕೆಲ ತಿಂಗಳ ಹಿಂದೆ ನಿಧನರಾದ ನಿರ್ದೇಶಕರೋರ್ವರ ಸ್ಥಾನಕ್ಕೆ ಉಪ ಚುನಾವಣೆಯು ಇಲ್ಲಿನ ದಿ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ರವಿವಾರದಂದು ನಡೆದಿದ್ದು ಚುನಾವಣೆಯಲ್ಲಿ ತುಳಸಿದಾಸ ಮಾಸ್ತಿ ಮೊಗೇರ ಅವರು ಗೆಲುವು ಸಾಧಿಸಿದರು.

CHETAN KENDULI

ಬ್ಯಾಂಕ್ ಇದರ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ನಿರ್ದೇಶಕ ಅಬ್ದುಲ್ ಮಜೀದ್ ಚೌಗುಲೆ ಅವರ ಅಕಾಲಿಕ ಮರಣದಿಂದ ನಿರ್ದೇಶಕ ಸ್ಥಾನ ಖಾಲಿಯಾಗಿತ್ತು. ಈ ಸ್ಥಾನಕ್ಕೆ ರವಿವಾರದಂದು ಇಲ್ಲಿನ ದಿ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ಉಡುಪಿ‌ ಜಿಲ್ಲೆ ಸಾಮಾನ್ಯ ಕ್ಷೇತ್ರದಿಂದ ನಡೆದ ಚುನಾವಣೆಯು ಮುಂಜಾನೆ 9 ಗಂಟೆಯಿಂದ 4 ಗಂಟೆಯ ತನಕ ಮತದಾನ ನಡೆದಿದ್ದು ಚುನಾವಣೆಯಲ್ಲಿ ತುಳಸಿದಾಸ ಮಾಸ್ತಿ ಮೊಗೇರ ಅವರು 195 ಮತದೊಂದಿಗೆ ಮೂವರು ಸ್ಥರ್ಧಿಗಳ ನಡುವೆ 87 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

 

ಮೂವರು ಈ ಸ್ಥಾನಕ್ಕೆ ತುಳಸಿದಾಸ ಮಾಸ್ತಿ ಮೊಗೇರ ಅಬ್ದುಲ್ ವಹಾಬ್ ಇಬ್ರಾಹಿಮ್ ಹಾಗೂ ಮಂಜುನಾಥ ಎಮ್. ಗಂಗೊಳ್ಳಿ ಅವರು ಠೇವಣಿ ಸ್ಪರ್ಧೆಯ ಕಣದಲ್ಲಿದ್ದು ಬಹು ಮತದಿಂದ ತುಳಸಿದಾಸ ಮೊಗೇರ ಗೆಲುವು ಪಡೆದುಕೊಂಡಿದ್ದಾರೆ.ತನ್ನ ಗೆಲುವಿಗೆ ಕಾರಣರಾದ, ಮತ ಹಾಕಿ‌ ಗೆಲ್ಲಿಸಿದ ಬ್ಯಾಂಕನ ಶೇರುದಾರರಿಗೆ ಗೆಲುವ ಸಾಧಿಸಿದ ತುಳಸಿದಾಸ ಮೊಗೇರ ಅವರು ಧನ್ಯವಾದ ಸಲ್ಲಿಸಿದ್ದಾರೆ.

Be the first to comment

Leave a Reply

Your email address will not be published.


*