ರಾಜ್ಯ ಸುದ್ದಿಗಳು
ಹೊನ್ನಾವರ
ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿಯೇ ಹೊನ್ನಾವರಕ್ಕೆ ಗೃಹ ಇಲಾಖೆ ಸಂತೋಷದ ಸುದ್ದಿ ನೀಡಿದೆ. ಸಿ.ಪಿ.ಐ ಶ್ರೀಧರ್ ಎಸ್ ಆರ್ ಹಾಗೂ ಹೆಡ್ ಕಾನ್ಸ್ಟೇಬಲ್ ಕೃಷ್ಣ ಗೌಡರು ಕೇಂದ್ರ ಗೃಹ ಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ. ರಾಜ್ಯದ 11 ಪೋಲೀಸ್ ಅಧಿಕಾರಿಗಳು ವಿಶೇಷ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಕಾರಣ ಕೇಂದ್ರ ಗೃಹ ಮಂತ್ರಿ ಪದಕವನ್ನು ಪಡೆಯಲು ಆಯ್ಕೆಯಾಗಿದ್ದಾರೆ.
ಸಿ.ಪಿ.ಐ ಶ್ರೀಧರ್ ಎಸ್ ಆರ್ ದಕ್ಷತೆ ಹಾಗೂ ಮಾನವೀಯತೆಯಿಂದ ಕಾರ್ಯ ನಿರ್ವಹಿಸುತ್ತಿರುವ ಕಾರಣ ಜಿಲ್ಲೆಯಲ್ಲಿಯೇ ಅತ್ಯುತ್ತಮ ಅಧಿಕಾರಿ ಎನ್ನುವ ಹೆಸರಿದೆ. ದಶಕಗಳಿಂದಲೂ ತಲೆ ಮರೆಸಿಕೊಂಡ ಆರೋಪಿಗಳನ್ನು, ಕೊಲೆ, ದರೋಡೆ, ಕಳ್ಳತನ ಪ್ರಕರಣವನ್ನು ಲೀಲಾಜಾಲವಾಗಿ ಭೇದಿಸುವ ಛಾತಿಯನ್ನು ಹೊಂದಿರುವವರಾಗಿದ್ದಾರೆ. ಈ ಹಿಂದೆ ಕೋಲಾರ, ಮಂಗಳೂರು, ಬಾಗಲಕೋಟೆ, ಜಮಖಂಡಿ, ಯಲ್ಲಾಪುರ, ಕುಮಟಾ,ದಾಂಡೇಲಿ, ಅಂಕೋಲದಲ್ಲಿ ಪಿ.ಎಸ್.ಐ ಆಗಿ ಸೇವೆ ಸಲ್ಲಿಸಿದ್ದಾರೆ. ಇವರು ಕರಾವಳಿ ಕಾವಲು ಪಡೆಯಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಹೊನ್ನಾವರ ಪೋಲೀಸ್ ವೃತ್ತ ನಿರೀಕ್ಷಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಇವರ ಅತ್ಯುತ್ತಮ ಸೇವೆಯನ್ನು ಮೆಚ್ಚಿ ಕೇಂದ್ರ ಗೃಹ ಮಂತ್ರಿ ಪದಕವನ್ನು ನೀಡಿ ಗೌರವಿಸಿದೆ.
Be the first to comment